ಪುತ್ತೂರು: ಕೆಮ್ಮಿಂಜೆ ಬಿಲ್ಲವ ಗ್ರಾಮ ಸಮಿತಿಯ ಮಹಾಸಭೆಯು ಮೇ.28ರಂದು ಸಮಿತಿ ಮಾಜಿ ಅಧ್ಯಕ್ಷ ವೆಂಕಪ್ಪ ಕರ್ಕೇರ ಕೋಲಾಡಿ ಅವರ ಶಾಂತಿ ನಿವಾಸದಲ್ಲಿ ನಡೆಯಿತು.
ಗ್ರಾಮ ಸಮಿತಿ ಅಧ್ಯಕ್ಷ ಜಯರಾಮ ಬಿ.ಎನ್ ಅವರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ವೆಂಕಪ್ಪ ಕರ್ಕೇರ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಸಮಾಜದ 41 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ, ಪೆನ್ನು, ಪೆನ್ಸಿಲ್‌ಗಳನ್ನು ವಿತರಿಸಲಾಯಿತು. ಬಿಲ್ಲವ ಸಂಘ ಪುತ್ತೂರು ಇದರ ಕಾರ್ಯದರ್ಶಿ ಚಿದಾನಂದ ಸುವರ್ಣ, ಕೋಶಾಧಿಕಾರಿ ಬಿ.ಟಿ.ಮಹೇಶ್ಚಂದ್ರ ಸಾಲಿಯಾನ್, ವಲಯ ಸಂಚಾಲಕ ಕಿರಣ್ ಬಲ್ನಾಡ್, ಪುತ್ತೂರು ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಚಂದ್ರಕಲಾ ಮುಕ್ವೆ, ವಲಯದ ಮಾಜಿ ಸಂಚಾಲಕ ಗಿರಿಯಪ್ಪ ಪೂಜಾರಿ ನೈತ್ತಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಆಶೀಕಾ ಕೆ, ಆಯುಷ್ ಕೆ, ಆಶ್ಲೇಷ್ ಕೆ ಅವರು ಪ್ರಾರ್ಥಿಸಿದರು. ಗಣೇಶ್ ಸುವರ್ಣ ಬೊಳ್ಳಗುಡ್ಡೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ್ ಪೂಜಾರಿ ಶಿಬರ ವಂದಿಸಿದರು. ದಿನೇಶ್ ಕರ್ಕೇರ ಕೋಲಾಡಿ ಸಹಕರಿಸಿದರು.