ಪುತ್ತೂರು: ಸ ಹಿ ಪ್ರಾ ಶಾಲೆ ಉಪ್ಪಿನಂಗಡಿ ಮಠ ಪುಳಿತ್ತಡಿ ಇದರ ಪ್ರಾರಂಭೋತ್ಸವವು ಮೇ.31ರಂದು ನಡೆಯಿತು. ಒಂದನೇ ತರಗತಿಗೆ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡಿ ಬ್ಯಾಂಡ್ ವಾದನದ ಮೂಲಕ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಯಾದವ ಆರ್ತಿಲ, ಉಪ್ಪಿನಂಗಡಿ ಗ್ರಾ.ಪಂ.ಸದಸ್ಯೆ ಜಮೀಳಾ ಕೊಪ್ಪಳ, ಶಾಲೆಯ ಹಿರಿಯ ವಿದ್ಯಾರ್ಥಿ, ಚಾರ್ವಾಕ ಸಿ.ಎ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ, ಆಂಬೇಡ್ಕರ್ ಸಮಿತಿ ಸದಸ್ಯ ರಾಜೇಶ್ ಕಜೆಕ್ಕಾರು ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಜೂಲಿಯಾನ ವಾಸ್ ಅವರು ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಸಹ ಶಿಕ್ಷಕಿ ಶುಭಾಲತಾ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿ ಪುನಂತೇಶ್ವರಿ, ಅತಿಥಿ ಶಿಕ್ಷಕಿ ಸುನಂದಾರವರು ಸಹಕರಿಸಿದರು. ಈ ಸಂದರ್ಭದಲ್ಲಿ ಪಠ್ಯ ಪುಸ್ತಕ ಮತ್ತು ಸಮವಸ್ತ್ರವನ್ನು ವಿತರಿಸಲಾಯಿತು.
ಪುಸ್ತಕ, ಕಲಿಕಾ ಸಾಮಾಗ್ರಿ ಕೊಡುಗೆ: ಕಾರ್ಯಕ್ರಮದಲ್ಲಿ ಶಾಲಾ ಹಿರಿಯ ವಿದ್ಯಾರ್ಥಿ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ ಅವರು ಕೊಡುಗೆಯಾಗಿ ನೀಡಿರುವ ಒಂದನೇ ತರಗತಿಗೆ ಸೇರಿದ ಎಲ್ಲಾ ವಿದ್ಯಾರ್ಥಿಗಳಿಗೆ ಬರವಣಿಗೆಗೆ ಬೇಕಾಗುವ ಪುಸ್ತಕ ಹಾಗೂ ಕಲಿಕಾ ಸಾಮಾಗ್ರಿಗಳನ್ನು ವಿತರಿಸಲಾಯಿತು.