ಜೂ.6: ನಟರಾಜ ವೇದಿಕೆಯಲ್ಲಿ ಸತ್ಯದತ್ತ ವ್ರತ ಪೂಜೆ

0

ಪುತ್ತೂರು: ಒಡಿಯೂರು ಶ್ರೀಗುರುದೇವಾ ಸೇವಾ ಬಳಗ ಪುತ್ತೂರು, ಒಡಿಯೂರು ಶ್ರೀವಜ್ರಮಾತಾ ಮಹಿಳಾ ಮಂಡಳಿ ಪುತ್ತೂರು ಘಟಕ, ಒಡಿಯೂರು ಶ್ರೀಗ್ರಾಮಿಕಾಸ ಯೋಜನೆ ಪುತ್ತೂರು, ಒಡಿಯೂರು ಶ್ರೀವಿವಿದೋದ್ಧೇಶ ಸಹಕಾರಿ ಸಂಘ ಪುತ್ತೂರು ಇದರ ವತಿಯಿಂದ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ವಾರ್ಷಿಕೋತ್ಸವದ ಪ್ರಯುಕ್ತ ಸತ್ಯದತ್ತ ವ್ರತ ಪೂಜೆ ಜೂ.6ರಂದು ಶ್ರೀಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ನಡೆಯಲಿದೆ. ಬೆಳಿಗ್ಗೆ 9ರಿಂದ ಭಜನೆ, ಬಳಿಕ ಪೂಜೆ ಆರಂಭ, ಮಧ್ಯಾಹ್ನ 11.30ರಿಂದ ನಡೆಯುವ ಧಾರ್ಮಿಕ ಸಭಾಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here