ಮುಖ್ಯ ಮಂತ್ರಿಯಾಗಿ ಮಹಮ್ಮದ್ ತ್ವಾಹಾ, ಉಪ ಮುಖ್ಯ ಮಂತ್ರಿಯಾಗಿ ಮೋಕ್ಷಿತಾ ಆಯ್ಕೆ.
ನಿಡ್ಪಳ್ಳಿ; ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ನಿಡ್ಪಳ್ಳಿ ಇದರ 2023-24 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿ ಮಂಡಲ ರಚನೆ ಜೂ.3 ರಂದು ನಡೆಯಿತು.ಮುಖ್ಯ ಮಂತ್ರಿಯಾಗಿ ಏಳನೇ ತರಗತಿಯ ಮಹಮ್ಮದ್ ತ್ವಾಹಾ ಹಾಗೂ ಉಪ ಮುಖ್ಯ ಮಂತ್ರಿಯಾಗಿ ಏಳನೇ ತರಗತಿಯ ಮೋಕ್ಷಿತಾ ಆಯ್ಕೆಯಾದರು.
ಗೃಹ ಮಂತ್ರಿಯಾಗಿ ಅನ್ವಿತ್, ಆರೋಗ್ಯ ಮಂತ್ರಿಯಾಗಿ ಅಬ್ದುಲ್ ಜವಾದ್, ಉಪ ಆರೋಗ್ಯ ಮಂತ್ರಿಯಾಗಿ ಅಹಮ್ಮದ್ ರಿಫಾಯಿ, ಶಿಕ್ಷಣ ಮಂತ್ರಿಯಾಗಿ ಲೋಹಿತ್ , ಉಪ ಶಿಕ್ಷಣ ಮಂತ್ರಿಯಾಗಿ ಹಿತಾಶ್ರೀ, ಸ್ವಚ್ಚತಾ ಮಂತ್ರಿಯಾಗಿ ಮಹಮ್ಮದ್ ಸಿನಾನ್, ಉಪ ಸ್ವಚ್ಚತಾ ಮಂತ್ರಿಯಾಗಿ ಶಿವಾಂಕ್, ವಾರ್ತಾ ಮಂತ್ರಿಯಾಗಿ ಸ್ಮಿತಾ ವಿ.ಎಸ್, ಉಪ ವಾರ್ತಾ ಮಂತ್ರಿಯಾಗಿ ದೀಕ್ಷಿತ್, ಸಾಂಸ್ಕೃತಿಕ ಮಂತ್ರಿಯಾಗಿ ಜಸ್ಮಿತಾ, ಉಪ ಸಾಂಸ್ಕೃತಿಕ ಮಂತ್ರಿಯಾಗಿ ಛಾಯಾಶ್ರೀ, ಆಹಾರ ಮಂತ್ರಿಯಾಗಿ ಅಹ್ಮದ್ ಸುಹೈಲ್, ಉಪ ಆಹಾರ ಮಂತ್ರಿಯಾಗಿ ಮಹಮ್ಮದ್ ಶಹೀರ್, ಗ್ರಂಥಾಲಯ ಮಂತ್ರಿಯಾಗಿ ಅಂಕಿತಾ, ಉಪ ಗ್ರಂಥಾಲಯ ಮಂತ್ರಿಯಾಗಿ ವೀಕ್ಷಾ, ಶಿಸ್ತು ಮಂತ್ರಿಯಾಗಿ ಸಹನಾ, ಉಪ ಶಿಸ್ತು ಮಂತ್ರಿಯಾಗಿ ನಿಖಿಲ್, ವಿರೋಧ ಪಕ್ಷದ ನಾಯಕನಾಗಿ ಮಹಮ್ಮದ್ ಶಿಫಾನ್, ವಿರೋಧ ಪಕ್ಷದ ಉಪ ನಾಯಕನಾಗಿ ಮನ್ವಿತ್, ಕ್ರೀಡಾ ಮಂತ್ರಿಯಾಗಿ ಮಹಮ್ಮದ್ ತ್ವಾಹಾ, ನೀರಾವರಿ ಮಂತ್ರಿಯಾಗಿ ಅನ್ವಿತ್, ಕೃಷಿ ಮಂತ್ರಿಯಾಗಿ ಅಬ್ದುಲ್ ಜವಾದ್ ಹಾಗೂ ರಕ್ಷಣಾ ಮಂತ್ರಿಯಾಗಿ ಮೋಕ್ಷಿತಾ ಇವರು ಆಯ್ಕೆಯಾದರು.
ಪ್ರಭಾರ ಮುಖ್ಯ ಗುರು ಹೇಮಾ. ಎನ್ ಇವರ ನೇತೃತ್ವದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಸಹ ಶಿಕ್ಷಕಿ ಪುಷ್ಪ ಕೆ.ಅರ್, ಅತಿಥಿ ಶಿಕ್ಷಕಿಯರಾದ ಸುಮ.ಡಿ, ರಮ್ಯ.ಕೆ ಹಾಗೂ ಗೌರವ ಶಿಕ್ಷಕಿ ಕುಸುಮ ಸಿ.ಎಚ್ ಸಹಕರಿಸಿದರು.