ಕಾಂಗ್ರೆಸ್ ಮುಖಂಡ ಜಿ.ಕೃಷ್ಣಪ್ಪರಿಂದ ಕಡಬದಲ್ಲಿ ಇಲಾಖಾ ಕಚೇರಿಗೆ ಭೇಟಿ

0

ಕಡಬ :ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ, ಸುಳ್ಯ ಕ್ಷೇತ್ರದ ಪರಾಜಿತ ಎಂಎಲ್‌ಎ ಅಭ್ಯರ್ಥಿ ಕೃಷ್ಣಪ್ಪ ಜಿ ಅವರು ಸೋಮವಾರ ಕಡಬ ಮಿನಿ ವಿಧಾನ ಸೌಧ ಹಾಗೂ ಇತರ ಕಛೇರಿಗಳಿಗೆ ಭೇಟಿ ನೀಡಿ ಕಡಬ ಅಭಿವೃದ್ಧಿಯ ಬಗ್ಗೆ ಭರವಸೆ ನೀಡಿದರು.

ಮಿನಿ ವಿಧಾನ ಸೌಧಕ್ಕೆ ಭೇಟಿ ನೀಡಿ, ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಇದನ್ನು ಮಂಜೂರು ಮಾಡಿತ್ತು, ಕಾಂಗ್ರೆಸ್ ಕಟ್ಟಿದ ಕಡಬದ ಆಡಳಿತ ಸೌಧ ಮಿನಿ ವಿಧಾನಸೌಧವನ್ನು ಈಗಾಗಲೇ ಮಾಜಿ ಮುಖ್ಯಮುಖ್ಯಮಂತ್ರಿಗಳು ಉದ್ಘಾಟಿಸಿದ್ದಾರೆ. ಆದರೆ ಅಲ್ಲಿ ಯಾವುದೇ ಕೆಲಸಗಳು ಆಗಿಲ್ಲ, ಒಳಗಡೆ ಸರಿಯಾದ ವ್ಯವಸ್ಥೆಯಿಲ್ಲ. ಮುಖ್ಯವಾಗಿ ಅಲ್ಲಿಗೆ ಪೀಠೋಪಕರಣ ಇನ್ನಿತರ ಸೌಲಭ್ಯಗಳನ್ನು ನೀಡಿಲ್ಲ. ಈ ಬಗ್ಗೆ ನಮ್ಮ ಸಚಿವರಲ್ಲಿ ಮಾತನಾಡುತ್ತೇನೆ, ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆ, ಮಿನಿ ವಿಧಾನ ಸೌಧಕ್ಕೆ ಬೇಕಾದ ಸವಲತ್ತುಗಳನ್ನು ಸರಕಾರದಿಂದ ಒದಗಿಸಿ ಉನ್ನತ ಮಟ್ಟದಲ್ಲಿ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಅಕ್ರಮ ಸಕ್ರಮ, 94 ಸಿಯಂತಹ ಕಡತಗಳನ್ನು ಶೀಘ್ರ ವಿಲೇವಾರಿ ಹಕ್ಕು ಪತ್ರ ನೀಡುವಲ್ಲಿ ಅಧಿಕಾರಿಗಳು ವಿಳಂಬ ಮಾಡಬಾರದು ಎಂದು ಹೇಳಿದರು. ಪ್ರಕೃತಿ ವಿಕೋಪ ಸಂದರ್ಭದಲ್ಲಿ ನಿರ್ವಹಣೆಯ ಕುರಿತು ಅಽಕಾರಿಗಳು ತೆಗೆದುಕೊಂಡ ಕ್ರಮಗಳ ಬಗ್ಗೆ ತಹಸೀಲ್ದಾರ್ ಅವರಿಂದ ಮಾಹಿತಿ ಪಡೆದಿದ್ದೇನೆ, ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ಕಡಬದ ಜನತೆಯೊಂದಿಗೆ ನಾನಿದ್ದೇನೆ, ಮುಂದಿನ ದಿನಗಳಲ್ಲಿ ನೂತನ ಸರಕಾರದಿಂದ ಕಡಬಕ್ಕೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಬದ್ದನಾಗಿದ್ದೇನೆ ಎಂದರು.

ಕಡಬ ಉಪತಹಸೀಲ್ದಾರ್ ಮನೋಹರ ಕೆ.ಟಿ ಮಾಹಿತಿ ನೀಡಿದರು. ಕೃಷ್ಣಪ್ಪ ಅವರೊಂದಿಗೆ ಕಡಬ ಕಾಂಗ್ರೆಸ್ ಮುಖಂಡರಾದ ಫಝಲ್ ಕೋಡಿಂಬಾಳ, ಸರ್ವೋತ್ತಮ ಗೌಡ, ರಾಯ್ ಅಬ್ರಹಾಂ, ಯತೀಶ್ ಬಾನಡ್ಕ, ಪೀರ್ ಮಹಮ್ಮದ್ ಸಾಹೇಬ್, ಅಶ್ರಫಗ ಶೇಡಿಗುಂಡಿ , ಹನೀಫ್ ಕೆ.ಎಂ, ಎಚ್ ಅದಂ, ಎಂ.ಪಿ.ಯೂಸೂಫ್‌, ಶಾಕೀರ್, ಅಬೂಬಕ್ಕರ್ ನೆಕ್ಕರೆ, ಶಿವರಾಮ ರೈ ಸುಬ್ರಹ್ಮಣ್ಯ, ಲೋಲಾಕ್ಷ, ಬಾಬು ಮುಗೇರ, ಪದ್ಮನಾಭ ಎಡಮಂಗಲ, ಜಗದೀಶ ರೈ, ಕೀರ್ತನ್ ಗೌಡ ಇಸ್ಮಾಯಿಲ್ ನೆಲ್ಯಾಡಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here