ಆಲಂಕಾರು: ಪೆರಾಬೆ ಕುಂತೂರು ಬಿಲ್ಲವ ಗ್ರಾಮ ಸಮಿತಿಯ ವಾರ್ಷಿಕ ಮಹಾಸಭೆಯು ರಕ್ತೇಶ್ವರಿ ದೈವಸ್ಥಾನ ಮಾಯಿಲ್ಗದ ವಠಾರದಲ್ಲಿ ನಡೆಯಿತು. ಕುಂತೂರು, ಪೆರಾಬೆ ಗ್ರಾಮ ಸಮಿತಿಯ ಅಧ್ಯಕ್ಷ ರವಿ ಮಾಯಿಲ್ಗ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಿತು. ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ(ರಿ) ಪುತ್ತೂರು ಇದರ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಡೆಂಜಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿ, 51 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸಲಾಯಿತು.
ಬಿಲ್ಲವ ಸಂಘ ಪುತ್ತೂರು ಇದರ ಕಾರ್ಯದರ್ಶಿ ಚಿದಾನಂದ ಸುವರ್ಣ ಗೆಣಸಿನ ಕುಮೇರು, ಕೋಶಾಧಿಕಾರಿ ಬಿ. ಟಿ ಮಹೇಶ್ಚಂದ್ರ ಸಾಲ್ಯಾನ್ ನಡುಬೈಲುಗುತ್ತು, ಪುತ್ತೂರು ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಚಂದ್ರಕಲಾ ಮುಕ್ವೆ, ಪುತ್ತೂರು ಗುರುಮಂದಿರದ ಕಾರ್ಯನಿರ್ವಹಣಾಧಿಕಾರಿ ಹೊನ್ನಪ್ಪ ಪೂಜಾರಿ ಕೈಂದಾಡಿ, ಪುತ್ತೂರು ಗುರುಮಂದಿರ ಸಮಿತಿ ಸದಸ್ಯ ಸದಾನಂದ ಕುಮಾರ್ ಮಡ್ಯೋಟ್ಟು, ಆಲಂಕಾರು ವಲಯ ಸಂಚಾಲಕ ಉದಯ ಸಾಲ್ಯಾನ್ ಮಾಯಿಲ್ಗ, ಕೋಟಿ ಚೆನ್ನಯ್ಯ ಮಿತ್ರವೃಂದ(ರಿ) ಆಲಂಕಾರು ಇದರ ಅಧ್ಯಕ್ಷರಾದ ಜಯಂತ ಪೂಜಾರಿ ನೆಕ್ಕಿಲಾಡಿ ವೇದಿಕೆಯಲ್ಲಿ ಶುಭಾ ಹಾರೈಸಿದರು. ನಂತರ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. 2023 ರಿಂದ 2025 ನೇ ಸಾಲಿನವರೆಗೆ ನೂತನ ಅಧ್ಯಕ್ಷರಾಗಿ ಹರ್ಷಿತ್ ಮಾಯಿಲ್ಗ, ಕಾರ್ಯದರ್ಶಿ ಅನಿಲ್ ಕುಮಾರ್ ಊರುಸಾಗು, ಕೋಶಾಧಿಕಾರಿ ಲೋಹಿತ್ ಮಾಯಿಲ್ಗ ಹಾಗೂ ಮಹಿಳಾ ಘಟಕದ ಅಧ್ಯಕ್ಷರಾಗಿ ಸೌಮ್ಯ ಅಗತ್ತಾಡಿ , ಕಾರ್ಯದರ್ಶಿ ಪ್ರೀತಿ ಆಗತ್ತಾಡಿ ಯವರನ್ನು ಮಹಾಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಗೌತಮಿ ಕೆಮ್ಮಿಂಜೆ ಮತ್ತು ಅಂಶಿ ಕೆಮ್ಮಿಂಜೆ ಪ್ರಾರ್ಥಿಸಿ, ಉದಯ ಸಾಲ್ಯಾನ್ ಮಾಯಿಲ್ಗ ಸ್ವಾಗತಿಸಿ, ಅನಿಲ್ ಕುಮಾರ್ ಊರುಸಾಗು ಕಾರ್ಯಕ್ರಮ ನಿರೂಪಿಸಿದರು. ಹರ್ಷಿತ್ ಮಾಯಿಲ್ಗ ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ಮನೀಶ್ ಪೆರಾಬೆ ವಂದಿಸಿದರು.