ಜೂ.10: ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮತ್ತು ಶ್ರೀ ಕೇಪುಳೇಶ್ವರ ದೇವಸ್ಥಾನದ ಶಿಲಾನ್ಯಾಸ

0

ವರದಿ: ಉಮಾಪ್ರಸಾದ್ ನಡುಬೈಲು


ಪುತ್ತೂರು: ಕುದ್ಮಾರು ಗ್ರಾಮದ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮತ್ತು ಶ್ರೀ ಕೇಪುಳೇಶ್ವರ ದೇವಸ್ಥಾನವು ಶಿಥಿಲಾವಸ್ಥೆಗೆ ತಲುಪಿದ್ದು, ಇದೀಗ ಹಳೆಯ ದೇಗುಲದ ಕಟ್ಟಡವನ್ನು ತೆರವುಗೊಳಿಸಿ ನೂತನ ದೇವಾಲಯದ ಜೀರ್ಣೋದ್ಧಾರಕ್ಕೆ ಕಾಲ ಕೂಡಿ ಬಂದಿದೆ. ಸುಮಾರು 800 ವರ್ಷಗಳ ಹಿಂದೆ ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣಗೊಂಡ ದೇವಸ್ಥಾನವಾಗಿರುತ್ತದೆ. ಈ ಕುರಿತು ದೇವಸ್ಥಾನದಲ್ಲಿ ಹಳೆಗನ್ನಡದಲ್ಲಿ ಬರೆದಿರುವ ಶಿಲಾಶಾಸನಗಳಿವೆ. ಇನ್ನೊಂದು ಮೂಲದ ಪ್ರಕಾರ ಶ್ರೀ ಕೃಷ್ಣನ ಪರಮಭಕ್ತರಾದ ಪಾಂಡವರು ವನವಾಸದ ವೇಳೆಯಲ್ಲಿ ಈ ಊರಿಗೆ ಬಂದಾಗ ತಮ್ಮ ನಿತ್ಯಾರಾಧನೆಗೆ ಈ ಐದು ಲಿಂಗಗಳ ದೇವಾಲಯವನ್ನು ಸ್ಥಾಪಿಸಿದರು. ಈ ದೇವಾಲಯದ ಒಂದೇ ಅಂಗಣದಲ್ಲಿ ಎರಡು ದೇವಾಲಯಗಳು ಇವೆ. ಒಂದು ಪಂಚಲಿಂಗೇಶ್ವರ, ಇನ್ನೊಂದು ಕೇಪುಳೇಶ್ವರ. ಒಂದೇ ಅಂಗಣದಲ್ಲಿ ಎರಡು ಗರ್ಭಗುಡಿ ಇರುವ ಶಿವನ ದೇವಸ್ಥಾನ ಇರುವುದು ಇಲ್ಲಿನ ವೈಶಿಷ್ಟ. ಪೌರಾಣಿಕ ಇತಿಹಾಸ ಹಿನ್ನೆಲೆಯಿರುವ ಈ ದೇವಸ್ಥಾನದ ಸುತ್ತುಪೌಳಿ, ನಮಸ್ಕಾರ ಮಂಟಪ, ಎರಡೂ ದೇವರ ಗರ್ಭಗುಡಿಯು ಶಿಥಿಲಾವಸ್ಥಗೆ ತಲುಪಿದೆ. ಆದರೂ ದೇವರಿಗೆ ಅನುವಂಶಿಯ ಮೊಕ್ತೇಸರರಿಂದ ನಿತ್ಯ ಪೂಜೆ ನಡೆಯುತ್ತಿದೆ. ದೇವಸ್ಥಾನದ ಅನುವಂಶೀಯ ಮೊಕ್ತೇಸರರ ನೇತೃತ್ವದಲ್ಲಿ ದೇವಸ್ಥಾನದಲ್ಲಿ 23 ವರ್ಷಗಳಿಂದ ಸಾಮೂಹಿಕ ಶಿವರಾತ್ರಿ ಉತ್ಸವ ನಡೆಯುತ್ತಿದೆ. ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ಉಪದೇವರಾದ ಗಣಪತಿ, ಶಾಸ್ತಾರ, ವೀರಭದ್ರ, ಸುಬ್ರಹ್ಮಣ್ಯ, ದೈವಗಳಾದ ವ್ಯಾಘ್ರ ಚಾಮುಂಡಿ, ರಾಜನ್ ದೈವ, ಕಾಸ್ಪಾಡಿ ದೈವಗಳ ಸಾನಿಧ್ಯವಿದೆ. ಈ ಎಲ್ಲಾ ದೈವ ದೇವರ ಆಶೀರ್ವಾದದಿಂದ ಸುಮಾರು ವರ್ಷಗಳ ಭಕ್ತರ ಕನಸು ನನಸಾಗುವ ಸೂಚನೆ ಸ್ಥಳ ಸಾನಿಧ್ಯದಲ್ಲಿ ಕಂಡುಬಂದಿದೆ. ಈಗಾಗಲೇ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮತ್ತು ಜೀರ್ಣೋದ್ಧಾರ ಸಮತಿ ರಚನೆಯಾಗಿದ್ದು ಶ್ರೀಯುತ ರಾಮಚಂದ್ರನ್ ತಚ್ಚಂಗಾಡ್ ಅವರ ಮುಖೇನ ಅಷ್ಟಮಂಗಲ ಪ್ರಶ್ನಾ ಚಿಂತನೆ ಮಾಡಲಾಗಿದೆ. ಸರ್ವ ಭಕ್ತರ ಸಹಕಾರದಿಂದ ಅತೀ ಶೀಘ್ರದಲ್ಲಿ ಜೀರ್ಣೋದ್ಧಾರ ಕಾರ್ಯ ಕೈಗೊಳ್ಳಲು ಯೋಜನೆ ಹಾಕಿಕೊಳ್ಳಲಾಗಿದೆ. ಜೂ.10 ರಂದು ನೂತನ ದೇವಾಲಯದ ಶಿಲಾನ್ಯಾಸ ನಡೆಯಲಿದೆ.


ವ್ಯವಸ್ಥಾಪನಾ ಸಮಿತಿ:
ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ವಿಠಲ ಗೌಡ ಬರೆಪ್ಪಾಡಿ, ಸದಸ್ಯರುಗಳಾಗಿ ಐತ್ತಪ್ಪ ಗೌಡ ಕುವೆತ್ತೋಡಿ, ಜತ್ತಪ್ಪ ರೈ ಬರೆಪ್ಪಾಡಿ, ಶ್ರೀಧರ ಗೌಡ ಕೊಯಕ್ಕುಡೆ, ರಮೇಶ್ ಕೆ.ಎನ್ ಕಾರ್ಲಾಡಿ, ನಿರ್ಮಲಾ ಕೇಶವ ಗೌಡ ಅಮೈ, ಪುಷ್ಪಲತಾ ಪದ್ಮಯ್ಯ ಗೌಡ ದರ್ಖಾಸು, ಯಶೋಧಾ ರವಿ ನಾಯ್ಕ ಏರ್ಕಮೆ ರವರುಗಳು ಸೇವೆ ಸಲ್ಲಿಸುತ್ತಿದ್ದಾರೆ.

ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮತ್ತು ಶ್ರೀ ಕೇಪುಳೇಶ್ವರ ದೇವಸ್ಥಾನದಲ್ಲಿ ಜೀರ್ಣೋದ್ಧಾರದ ಅಂಗವಾಗಿ ಮತ್ತು ಕ್ಷೇತ್ರದ ತಂತ್ರಿಗಳಾದ ಗಳವರ ನೇತೃತ್ವದಲ್ಲಿ ನೂತನ ದೇವಸ್ಥಾನದ ಶಿಲಾನ್ಯಾಸ ನಡೆಯಲಿರುವುದು.

ಜೂ.10 ರಂದು ಪೂರ್ವಾಹ್ನ 6.58ರಿಂದ 7.55 ರ ಮೂಹೂರ್ತದಲ್ಲಿ ವಾಸ್ತುಶಿಲ್ಪಿ ಪ್ರಸಾದ್ ಮುನಿಯಂಗಳ ಮತ್ತು ದೇವಾಲಯದ ತಂತ್ರಿ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ಶಿಲಾನ್ಯಾಸ ಬಳಿಕ ಬೆಳಗ್ಗೆ 9.00 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನವನ್ನು ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು, ಶ್ರೀ ವಿದ್ಯೇಂದ್ರ ತೀರ್ಥ ಪಾದಂಗಳವರು, ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನೀಡಲಿದ್ದಾರೆ. ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕೇಂದ್ರ ಸಚೆವೆ ಶೋಭಾ ಕರಂದ್ಲಾಜೆ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಅಶೋಕ ಕುಮಾರ್ ರೈ, ಜಿಲ್ಲಾಧಿಕಾರಿಗಳಾದ ರವಿ ಕುಮಾರ್, ಬೆಳಂದೂರು ಗ್ರಾ.ಪಂ ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ, ಉಪಾಧ್ಯಕ್ಷೆ ತೇಜಾಕ್ಷಿ ಕೊಡಂಗೆ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರ ಪುರಂದರ ಭಟ್ ಬರೆಪ್ಪಾಡಿ, ಪವಿತ್ರ ಪಾಣಿ, ರಾಘವೇಂದ್ರ ಭಟ್, ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ. ಸೀತಾರಾಮ ರೈ ಸವಣೂರು, ಹಿಂದು ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ, ಉದ್ಯಮಿ ಕಿರಣ್‌ಚಂದ್ರ ಬೆಂಗಳೂರು, ಶಾಂತಿಮೊಗರು ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಭಾಗವಹಿಸಲಿದ್ದಾರೆ ಎಂದು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ವಿಠಲ ಗೌಡ ಬರೆಪ್ಪಾಡಿ, ಜಿರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಜನೇಶ್ ಭಟ್ ಬರೆಪ್ಪಾಡಿ, ಅಧ್ಯಕ್ಷ ಎಸ್. ಅಂಗಾರ, ಕಾರ್ಯಧ್ಯಕ್ಷ ಮೋಹನ್ ಗೌಡ ಇಡ್ಯಡ್ಕ ರವರು ಹಾಗೂ ಊರ ಭಕ್ತಾಧಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here