ಕರುವೇಲ್ ವಿದ್ಯುತ್ ಉಪಕೇಂದ್ರ ಯೋಜನೆಯ ಡಿಪಿಆರ್-ಅನುಮೋದನೆಗಾಗಿ ಶಾಸಕರಿಂದ ಸಚಿವ ಕೆ ಜೆ ಜಾರ್ಜ್ ಗೆ ಮನವಿ

0

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 110 ಕೆ ವಿ ಕರುವೇಲು(ನೆಕ್ಕಿಲಾಡಿ) ಉಪಕೇಂದ್ರ ಯೋಜನೆಯ ಡಿಪಿಆರ್‌ಗೆ ಅನುಮೋದನೆ ನೀಡಿ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಅಗ್ರಹಿಸಿ ಇಂಧನ ಸಚಿವರಾದ ಕೆ ಜೆ ಜಾರ್ಜ್ ಗೆ ಶಾಸಕರಾದ ಅಶೋಕ್ ರೈ ಮನವಿ ಮಾಡಿದ್ದಾರೆ.

ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಪ್ಪಿನಂಗಡಿ, ಕೊಯಿಲ, ರಾಮಕುಂಜ, ಹಿರೇಬಂಡಾಡಿ, ಕಾಂಚನ ಮತ್ತು ಬಜತ್ತೂರು ಪ್ರದೇಶಗಳು ಅತೀ ಹೆಚ್ಚು ವಿದ್ಯುತ್ ಸಮಸ್ಯೆಯನ್ನು ಎದುರಿಸುತ್ತಿದ್ದು, ಈ ಸಮಸ್ಯೆಯ ಶಾಸ್ವತ ಪರಿಹಾರಕ್ಕಾಗಿ ರೂಪಿಸಲಾದ 110 ಕೆ ವಿ ಕರುವೇಲು ವಿದ್ಯುತ್ ಉಪಕೇಂದ್ರ ಯೋಜನೆಗೆ ಕಂದಾಯ ಇಲಾಖೆಯಿಂದ ಜಾಗ ಮಂಜೂರಾಗಿರುತ್ತದೆ. ಈ ಉಪಕೇಂದ್ರ ಯೋಜನೆಯ ಡಿಪಿಆರ್ ಅನುಮೋದನೆಯನ್ನು ನೀಡಿ ತಕ್ಷಣವೇ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಶಾಸಕರಾದ ಅಶೋಕ್‌ ರೈ ಸಚಿವರಿಗೆ ನೀಡಿದ ಮನವಿಯಲ್ಲಿ ಅಗ್ರಹಿಸಿದ್ದಾರೆ. ಬಹುವರ್ಷಗಳ ಬೇಡಿಕೆಯಾಗಿರುವ ಕರುವೇಲ್ ಉಪಕೇಂದ್ರ ಕಾರ್ಯಚರಣೆ ಆರಂಭಿಸಿದರೆ ಈ ಭಾಗದ ಬಹುವರ್ಷಗಳ ಕನಸು ನನಸಾಗಲಿದೆ.

LEAVE A REPLY

Please enter your comment!
Please enter your name here