ಬೆಂಗಳೂರು: ನೈಋತ್ಯ ಮುಂಗಾರು ಜೂ.8ರಂದು ಕೇರಳಕ್ಕೆ ಪ್ರವೇಶಿಸಿದ್ದು ವಾಡಿಕೆಯ ರೂಢಿಗಿಂತ ಒಂದು ವಾರ ತಡವಾಗಿ ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
’ಬೈಪರ್‌ಜೋಯ್’ ಚಂಡಮಾರುತ ಮಾನ್ಸೂನ್‌ನ ತೀವ್ರತೆಯ ಮೇಲೆ ಪರಿಣಾಮ ಬೀರುತ್ತಿದ್ದು ಕೇರಳದ ಮೇಲೆ ಅದರ ಆಕ್ರಮಣವು ಸೌಮ್ಯ ರೀತಿಯಿಂದಿರುತ್ತದೆ ಎಂದು ಹವಾಮಾನ ಇಲಾಖೆ ತಜ್ಞರು ತಿಳಿಸಿದ್ದಾರೆ.
ಕೇರಳಕ್ಕೆ ಮುಂಗಾರು ಪ್ರವೇಶದೊಂದಿಗೆ ಕರಾವಳಿ ಭಾಗದ ಜನತೆ ಮಳೆಯ ನಿರೀಕ್ಷೆಯೊಂದಿಗೆ ನಿರಾಳರಾಗಿದ್ದಾರೆ.