ಪುತ್ತೂರು: ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಸಾರಿಗೆ ಬಸ್ ನಲ್ಲಿ ಉಚಿತ ಪ್ರಯಾಣ ಸೌಲಭ್ಯಕ್ಕೆ ನಾಳೆ ಚಾಲನೆ ಸಿಗಲಿದೆ. ಈಗಾಗಲೇ ಯೋಜನೆಗೆ ಹಲವು ಷರತ್ತುಗಳನ್ನು ವಿಧಿಸಿರುವ ರಾಜ್ಯ ಸರ್ಕಾರ, ಕೊನೆ ಘಳಿಗೆಯಲ್ಲಿ ಹೊಸ ಷರತ್ತೊಂದನ್ನು ಜಾರಿಗೊಳಿಸಿದೆ. ಫಲಾನುಭವಿಗಳು ಶಕ್ತಿ ಯೋಜನೆಯ ಸ್ಟಿಕ್ಕರ್ ಹೊಂದಿರುವ ಬಸ್ ಗಳಲ್ಲಿ ಮಾತ್ರ ಸಂಚರಿಸಲು ಅವಕಾಶ ಎಂದು ಬೆಂಗಳೂರಿನಲ್ಲಿ ನಾಳಿನ ಉದ್ಘಾಟನಾ ಕಾರ್ಯಕ್ರಮದ ಸಿದ್ಧತೆಯ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನಾಳೆ ಶಕ್ತಿ ಯೋಜನೆಗೆ ಸಿಎಂ ಸಿದ್ಧರಾಮಯ್ಯ ಚಾಲನೆ ನೀಡಲಿದ್ದಾರೆ. ನಾಳೆ ಮಧ್ಯಾಹ್ನ 1ಗಂಟೆಯಿಂದ ರಾಜ್ಯಾಧ್ಯಂತ ಸಾರಿಗೆ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಆರಂಭದಲ್ಲಿ ಐಡಿ ಕಡ್ಡಾಯಗೊಳಿಸಲಾಗಿದೆ. ಮೂರು ತಿಂಗಳಲ್ಲಿ ಸ್ಮಾರ್ಟ್ ಕಾರ್ಡ್ ವಿತರಿಸಲಾಗುವುದು ಎಂದು ಹೇಳಿದರು. ಇನ್ನುಳಿದಂತೆ ರಾಜಹಂಸ, ಎಸಿ, ನಾನ್ ಎಸಿ ಸ್ಲೀಪರ್ ಸೇರಿದಂತೆ ಐಷಾರಾಮಿ ಬಸ್ಸುಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಅವಕಾಶವಿಲ್ಲ ಎಂಬ ಷರತ್ತು ವಿಧಿಸಲಾಗಿತ್ತು. ಈಗ ಅದರೊಂದಿಗೆ ಮತ್ತೊಂದು ಹೊಸ ಷರತ್ತು ವಿಧಿಸಿರುವ ಬಗ್ಗೆ ಸಚಿವರು ಮಾಹಿತಿ ನೀಡಿದ್ದು, ಅದರ ಪ್ರಕಾರ ಯೋಜನೆಯ ಸ್ಟಿಕ್ಕರ್ ಇರುವಂತಹ ಸಾರಿಗೆ ಬಸ್ ಗಳಲ್ಲಿ ಮಾತ್ರವೇ ಮಹಿಳೆಯರು ಪ್ರಯಾಣಿಸಲು ಅವಕಾಶ ನೀಡಲಾಗಿದೆ.
Home ಇತ್ತೀಚಿನ ಸುದ್ದಿಗಳು ಉಚಿತ ಪ್ರಯಾಣಕ್ಕೆ ಹೊಸ ಷರತ್ತು-ಯೋಜನೆಯ ಸ್ಟಿಕ್ಕರ್ ಗಳಿರುವ ಬಸ್ಸಿನಲ್ಲಷ್ಟೇ ಉಚಿತ ಪ್ರಯಾಣ