ಪುತ್ತೂರು: ವಿಧಾನ ಸಭೆ ಚುನಾವಣೆಯಲ್ಲಿ ನಮ್ಮ ಮತ ವಿಭಜನೆಯಾದುದರಿಂದ ನಮಗೆ ಸೋಲಾಯಿತೇ ಹೊರತು ಕಾಂಗ್ರೆಸ್ ಗೆದ್ದಿಲ್ಲ. 1 ಲಕ್ಷಕ್ಕಿಂತ ಹೆಚ್ಚಿನ ಮತಗಳು ಅವರ ವಿರುದ್ದವಾಗಿ ಬಿದ್ದಿದೆ ಎಂದು ಬಿಜೆಪಿ ಮಂಗಳೂರು ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ ಹೇಳಿದ್ದಾರೆ.
ಪಾಂಬರ್‌ನಲ್ಲಿ ನಡೆದ ಬಿಜೆಪಿ ಕೊಳ್ತಿಗೆ ಶಕ್ತಿ ಕೇಂದ್ರದ ಸಭೆಯಲ್ಲಿ ಅವರು ಮಾತನಾಡಿದರು. ಮುಂದಿನ ದಿನಗಳಲ್ಲಿ ಪಕ್ಷವನ್ನು ನಾವೆಲ್ಲರೂ ಒಂದಾಗಿ ಒಟ್ಟಾಗಿ ಚುನಾವಣೆಗೆ ಸಜ್ಜುಗೊಳಿಸೋಣ. ಬಿಜೆಪಿ ಯಾರನ್ನು ಕೂಡ ದೂರ ಮಾಡುದಿಲ್ಲ, ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ರಾಷ್ಟ್ರೀಯ ವಿಚಾರ ಧಾರೆಯಲ್ಲಿ ಕೆಲಸ ಮಾಡುವ ಪಾರ್ಟಿ ಆಗಿದೆ, ಕಾಂಗ್ರೆಸ್‌ನ ಜನ ವಿರೋಧಿ ಹಾಗೂ ಹಿಂದೂ ವಿರೋಧಿ ನೀತಿಯನ್ನು ಮನೆ ಮನೆಗೆ ತಿಳಿಸುವ ಕೆಲಸ ನಾವೆಲ್ಲರೂ ಮಾಡೋಣ ಎಂದರು. ವೇದಿಕೆಯಲ್ಲಿ ಮಾಜಿ ಶಾಸಕ ಸಂಜೀವ ಮಠoದೂರು, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾ ಕೃಷ್ಣ ಆಳ್ವಾ, ಬಿಜೆಪಿ ಮಾಜಿ ಅಧ್ಯಕ್ಷ ಎಸ್ ಅಪ್ಪಯ್ಯ ಮಣಿಯಾಣಿ, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ಹಾಗೂ ನಿತೀಶ್ ಕುಮಾರ್ ಶಾಂತಿವನ, ಮಂಡಲ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಮಹಾಶಕ್ತಿ ಕೇಂದ್ರ ಅಧ್ಯಕ್ಷ ವಿಜಯ ಕೋರಂಗ, ಪ್ರಮುಖ ದಯಾನಂದ ಉಜರುಮರ್ ಉಪಸ್ಥಿತರಿದ್ದರು, ಸಭೆಯಲ್ಲಿ ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ತೀರ್ಥನಂದ ದುಗ್ಗಳ, ಭಾಸ್ಕರ್ ರೈ ಕಂಟ್ರಮಜಲು, ಗ್ರಾಮಾಂತರ, ಗ್ರಾಮಾಂತರ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಾಗವೇಣಿ, ಸುನಿಲ್ ರೈ ಪಾಲ್ತಾಡ್, ಸುಂದರ ಪೂಜಾರಿ ಮಣಿಕ್ಕಾರ, ಬೂತ್ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು. ಶಕ್ತಿಕೇಂದ್ರ ಪ್ರಮುಖರಾದ ಸತೀಶ್ ಪಾಂಬರ್ ಸ್ವಾಗತಿಸಿ, ಮಂಡಲ ಕಾರ್ಯದರ್ಶಿ ಯತಿಂದ್ರ ಕೊಚ್ಚಿ ವಂದಿಸಿದರು.