ಕಾಂಗ್ರೆಸ್ ಯೋಜನೆ ಅದು ಎಲ್ಲಾ ಧರ್ಮದವರಿಗೂ ದೊರೆಯುವ ಸೌಲಭ್ಯವಾಗಿದೆ: ಜಯಪ್ರಕಾಶ್ ಬದಿನಾರ್
ಪುತ್ತೂರು: ಕಾಂಗ್ರೆಸ್ ಸರಕಾರ ಯಾವುದೇ ಯೋಜನೆಯನ್ನು ಜಾರಿಗೆ ತಂದರೂ ಅದು ಎಲ್ಲಾ ಧರ್ಮದವರಿಗೂ ದೊರೆಯುವ ಸೌಲಭ್ಯವಾಗಿದೆ. ಜಾತಿ, ಧರ್ಮದ ಬೇಧಬಾವ ಕಾಂಗ್ರೆಸ್ ಎಂದೂ ಮಾಡುವುದಿಲ್ಲ, ಎಲ್ಲರನ್ನೂ ಒಂದೇ ದೃಷ್ಟಿಯಿಂದ ಕಾಣುವ ಏಕೈಕ ಪಕ್ಷ ಕಾಂಗ್ರೆಸ್ ಎಂದು ಪುತ್ತೂರು ಇಂಠಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರು ಹೇಳಿದರು.
ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಯನ್ನು ಪುತ್ತೂರು ಬಸ್ ನಿಲ್ದಾಣದಲ್ಲಿ ಶಾಸಕ ಅಶೋಕ್ ರೈ ಲೋಕಾರ್ಪಣೆಗೈದ ಬಳಿಕ ಪ್ರಚಾರಾರ್ಥವಾಗಿ ಮಹಿಳಾ ಕಾರ್ಯಕರ್ತರು ಬಸ್ಸಿನಲ್ಲಿ ಉಪ್ಪಿನಂಗಡಿಗೆ ತೆರಳಿ ಸಂಭ್ರಮಿಸಿದರು. ಈ ಸದಂದರ್ಭದಲ್ಲಿ ಮಾತನಾಡಿದ ಜಯಪ್ರಕಾಶ್ ಬದಿನಾರ್
ಮುಂದಿನ ದಿನಗಳಲ್ಲಿ ಐದೂ ಗ್ಯಾರಂಟಿಗಳು ಒಂದೊಂದಾಗಿ ಜಾರಿಗೆ ಬರಲಿದೆ. ಎಲ್ಲರಿಗೂ ಇದರ ಪ್ರಯೋಜನ ಲಭ್ಯವಾಗಲಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಣದ ಜೊತೆಗೆ ಮುಂದಿನ ದಿನಗಳಲ್ಲಿ ಪ್ರತೀ ತಿಂಗಳು ಖಾತೆಗೆ ಎರಡು ಸಾವಿರ ರೂ. ಜಮೆಯಾಗಲಿದೆ. ಉಚಿತ ವಿದ್ಯುತ್ , ಹತ್ತು ಕೆಜಿ ಅಕ್ಕಿ ಮತ್ತು ನಿರುದ್ಯೋಗಿಗಳಿಗೆ ಮಾಸಿಕ ಭತ್ಯೆಯೂ ದೊರೆಯಲಿದೆ. ಇದುವರೆಗೂ ರಾಜ್ಯದಲ್ಲಿ ಯಾವ ಸರಕಾರವೂ ಮಾಡದ್ದನ್ನು ರಾಜ್ಯದ ಕಾಂಗ್ರೆಸ್ ಸರಕಾರ ಜಾರಿಗೆ ಮಾಡಿ ಇತಿಹಾಸವನ್ನು ನಿರ್ಮಾಣ ಮಾಡಿದೆ. ಬಡವರ ಪರ ಇರುವ ಸರಕಾರ ಕಾಂಗ್ರೆಸ್ ಎಂಬುದು ಎಲ್ಲರಿಗೂ ಗೊತ್ತಾಗಬೇಕಿದೆ. ಜನರ ನಡುವೆ ಧರ್ಮದ ಸಂಘರ್ಷ ಸೃಷ್ಟಿಸಿ ಜನರ ನೆಮ್ಮದಿ ಹಾಳುವ ಮಾಡುವ ಸರಕಾರವನ್ನು ಜನತೆ ಈ ಬಾರಿಯ ಚುನಾವಣೆಯಲ್ಲಿ ಮೂಲೆಗುಂಪು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ರಾಜ್ಯದಲ್ಲಿ ನೆಮ್ಮದಿ ಮತ್ತು ಬಡವರಿಗೆ ಪೂರಕವಾದ ಆಡಳಿತವನ್ನು ನೀಡಲಿದ್ದಾರೆ ಎಂದು ಹೇಳಿದರು. ಕಾರ್ಯಕರ್ತರು ಉಪ್ಪಿನಂಗಡಿ ಹಾಗೂ ಸೇಡಿಯಾಪಿನಲ್ಲಿ ಪಟಾಕಿ ಸಿಡಿಸಿ , ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಸತೀಶ್ ಅನಿಲಕೋಡಿ. ಚಂದ್ರ ಶೇಖರ್ ಬದಿನಾರ್. ಬಶೀರ್ ಸೇಡಿಯಾಪು, ರವಿ ನಿಡ್ಯ, ಇಬ್ರಾಹಿಂ ಸೇಡಿಯಾಪು ಕಾಂಗ್ರೆಸ್ ನಾಯಕರು ಮತ್ತು ಊರಿನ ಪ್ರಮುಖರು ಹಾಗೂ ಮಹಿಳೆಯರು ಭಾಗವಹಿಸಿ ಹರ್ಷ ವ್ಯಕ್ತ ಪಡಿಸಿದರು.