ಕಡಬ: ಹುಟ್ಟುಹಬ್ಬ ವಿವಿಧ ರೀತಿಯಲ್ಲಿ ಆಚರಿಸಬಹುದು ಹಾಗೆಯೇ ರಾಮಕುಂಜ ನಿವಾಸಿ ಕೇಶವ ಕಾರಿಜಾಲ್ ಅವರು ತನ್ನ ಮಗಳು ಕಸ್ವಿಯ ಹುಟ್ಟುಹಬ್ಬವನ್ನು “ಹುಟ್ಟುಹಬ್ಬ ಹೊಸ ಪೀಳಿಗೆಯ ಉಸಿರಾಗಲಿ” ಎಂಬ ಧ್ಯೇಯ ವಾಕ್ಯದೊಂದೊಂದಿಗೆ ಗಿಡ ನೆಡುವುದರ ಮೂಲಕ ಕಳೆದ ವರ್ಷ ಜೂನ್ 16ರಂದು ಆಚರಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಈ ವರ್ಷ ಕಸ್ವಿಯ 2ನೇ ವರುಷದ ಹುಟ್ಟುಹಬ್ಬದ ಪ್ರಯುಕ್ತ ಕೆ.ಎಸ್.ಎಸ್ ಕಾಲೇಜು ಸುಬ್ರಹ್ಮಣ್ಯದಲ್ಲಿ ಯಾರು ತಮ್ಮ ಹುಟ್ಟುಹಬ್ಬವನ್ನು ಜೂನ್-ಜೂಲೈ ತಿಂಗಳಲ್ಲಿ ಆಚರಿಸುತ್ತಾರೋ ಅಂತಹ 60 ಮಕ್ಕಳಿಗೆ ಉಚಿತವಾಗಿ ಗಿಡವನ್ನು ಕೊಟ್ಟು ಮಾದರಿಯಾಗಿ ಆಚರಿಸಿದ್ದಾರೆ ಹಾಗೂ ಎಲ್ಲಾ 60ಮಕ್ಕಳಿಗೆ ಕಸ್ವಿ ಹಸಿರು ದಿಬ್ಬಣ ವತಿಯಿಂದ
ಹುಟ್ಟುಹಬ್ಬಕ್ಕೆ ಇ-ಪ್ರಮಾಣ ಪತ್ರ ನೀಡಿ ಪ್ರೋತ್ಸಹಿಸಲಾಗುವುದು ಹಾಗೂ ಹುಟ್ಟುಹಬ್ಬಕ್ಕೆ ಕೇಕ್ ಹೇಗೆ ಅನಿವಾರ್ಯ ಆಗಿದೆಯೋ ಹಾಗೆ ಮುಂದಿನ ದಿನಗಳಲ್ಲಿ “ಗಿಡ ನೆಡುವುದು” ಆಗಲಿ ಎಂದು ಕೇಶವ ರಾಮಕುಂಜ ಹೇಳಿದರು.
ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಉಪನ್ಯಾಸಕಿ ಮಾತನಾಡಿ ಪರಿಸರದಲ್ಲಿ ಗಿಡಗಳ ಮಹತ್ವ ಮಕ್ಕಳಿಗೆ ತಿಳಿಸಿದರು. ದಿನೇಶ್ ಅವರು ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಾಮಪ್ರಸಾದ್ ವಂದಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರು ಉಪಸ್ಥಿತರಿದ್ದರು.