ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕೆ.ಪಿ.ಎಸ್. ಕುಂಬ್ರಕ್ಕೆ91.17 ಶೇಕಡಾ ಫಲಿತಾಂಶ

0

ಪುತ್ತೂರು : ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರೌಢ ಶಾಲಾ ವಿಭಾಗ ಕುಂಬ್ರ ಶಾಲೆಗೆ 2023-24 ನೇ ಸಾಲಿನಲ್ಲಿ ಎಸ್.ಎಸ್.ಎಲ್. ಪರೀಕ್ಷೆ ಬರೆದ ಒಟ್ಟು 34 ವಿದ್ಯಾರ್ಥಿಗಳಲ್ಲಿ 31 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆಗೆ ಒಟ್ಟು 91.17 ಶೇಕಡಾ ಫಲಿತಾಂಶ ಬಂದಿರುತ್ತದೆ .

ಪರೀಕ್ಷೆ ಬರೆದ ಒಟ್ಟು 22 ಬಾಲಕರು ಮತ್ತು 12 ಬಾಲಕಿಯರಲ್ಲಿ ಫಾತಿಮತ್ ಶಿಹಾನ 551 ಅಂಕಗಳನ್ನು ಪಡೆದು ವಿಶಿಷ್ಠ ಶ್ರೇಣಿಯಲ್ಲಿ , 5 ಬಾಲಕರು ಮತ್ತು 9 ಬಾಲಕಿಯರು ಪ್ರಥಮ ಶ್ರೇಣಿಯಲ್ಲಿ, 14 ಬಾಲಕರು ಮತ್ತು ಒಬ್ಬ ಬಾಲಕಿ ದ್ವಿತೀಯ ಶ್ರೇಣಿಯಲ್ಲಿ ಮತ್ತು ಒಬ್ಬ ಬಾಲಕ ಪಾಸ್ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಪಾತಿಮ್ಮತ್ ಶಿಹಾನ 551 ಅಂಕಗಳು, ಮೇಘಶ್ರೀ 510 ಅಂಕಗಳು ,ಮುಹಮ್ಮದ್ ಮಸೂದ್ 511 ಅಂಕಗಳು ಹಾಗೂ ನವ್ಯ 504 ಅಂಕಗಳನ್ನು ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here