15 ಎಕ್ರೆ ಜಾಗದಲ್ಲಿ ಪುತ್ತೂರಿನಲ್ಲಿ ಕೆಎಂಎಫ್ ಹಾಲು ಪ್ಯಾಕಿಂಗ್ ಫ್ಯಾಕ್ಟರಿ-ಸಾವಿರ ಮಂದಿಗೆ ಉದ್ಯೋಗ: ಶಾಸಕ ಅಶೋಕ್ ಕುಮಾರ್ ರೈ

0

ಪುತ್ತೂರು: ಪುತ್ತೂರಿನ ಜಿಡೆಕಲ್ಲಿನಲ್ಲಿ ಕಾರ್ಯಾಚರಿಸುತ್ತಿದ್ದ ಚರಿಸುತ್ತಿದ್ದ ಹಾಲು ಶೀತಲೀಕರಣ ಘಟಕವನ್ನು ಮುಚ್ಚಲಾಗಿದ್ದು ಮುಂದಿನ ಎರಡು ವರ್ಷದೊಳಗೆ ಪುತ್ತೂರಿನಲ್ಲಿ ಹಾಲು ಪ್ಯಾಕಿಂಗ್ ಫ್ಯಾಕ್ಟರಿ ಆರಂಭವಾಗಲಿದೆ. ಇದಕ್ಕಾಗಿ 15 ಎಕ್ರೆ ಜಾಗವನ್ನು ಗುರುತಿಸಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.‌


ಕೆಯ್ಯೂರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಶೀತಲೀಕರಣ ಘಟಕ ಮುಚ್ಚಿದ ಕಾರಣ ಕೆಲವು ಮಂದಿ ಉದ್ಯೋಗ ಕಳೆದುಕೊಳ್ಳುವಂತಾಯಿತು. ಪುತ್ತೂರಿನಲ್ಲಿ ಕೆಎಂಎಫ್ ಹಾಲು ಪ್ಯಾಕಿಂಗ್ ಘಟಕವನ್ನು ಸ್ಥಾಪಿಸುವಂತೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಇದಕ್ಕಾಗಿ 15 ಎಕ್ರೆ ಜಾಗವನ್ನು ಸಂಸ್ಥೆಯವರು ಬೇಡಿಕೆ ಇಟ್ಟಿದ್ದು ಜಾಗ ಗುರುತಿಸುವ ಕೆಲಸ ನಡೆದಿದೆ. ಫ್ಯಾಕ್ಟರಿಯಲ್ಲಿ ಪುತ್ತೂರು, ಬೆಳ್ತಂಗಡಿ, ವಿಟ್ಲ, ಮತ್ತು ಸುಳ್ಯ ಕಡೆಯಲ್ಲಿ ಉತ್ಪಾದನೆಯಾಗುವ ಹಾಲು ಇಲ್ಲಿಯೇ ಸಂಗ್ರಹವಾಗಿ ಇಲ್ಲಿಯೇ ಪ್ಯಾಕಿಂಗ್ ನಡೆಯಲಿದೆ. ಇದರಿಂದಾಗಿ ಪುತ್ತೂರು ಆಸುಪಾಸಿನ ಸುಮಾರು ಸಾವಿರ ಮಂದಿಗೆ ಉದ್ಯೋಗವೂ ಲಭಿಸಲಿದೆ ಎಂದು ಅವರು ಹೇಳಿದರು. ಎರಡು ವರ್ಷದಲ್ಲಿ ನೂತನ ಫ್ಯಾಕ್ಟರಿ ತೆರೆಯಲಿದೆ ಎಂದು ಶಾಸಕರು ಹೇಳಿದರು.

LEAVE A REPLY

Please enter your comment!
Please enter your name here