ಕಾಣಿಯೂರು ಕಟ್ಟತ್ತಾರು ಸೇತುವೆ ಲೋಕಾರ್ಪಣೆ

0

ಬಿಜೆಪಿ ಸರಕಾರದ ಸಾಧನೆ ಅನನ್ಯ-ಭಾಗೀರಥಿ ಮುರುಳ್ಯ

ಕಾಣಿಯೂರು: ಗ್ರಾಮೀಣ ಭಾಗದ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಬಿಜೆಪಿ ಸರಕಾರವು ಮಹತ್ತರ ಸಾಧನೆ ಮಾಡಿದೆ. ಅತೀ ಅಗತ್ಯವಾಗಿದ್ದ ಕಟ್ಟತ್ತಾರು ಸೇತುವೆ ನಿರ್ಮಿಸಿ ಬಹುದಿನದ ಬೇಡಿಕೆ ಈಡೇರಿದ್ದು, ಆ ಮೂಲಕ ಗ್ರಾಮವು ಅಭಿವೃದ್ಧಿಯತ್ತ ಸಾಗಲಿ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

ಕಾಣಿಯೂರು ಗ್ರಾಮದ ಕಟ್ಟತ್ತಾರು ಎಂಬಲ್ಲಿ ನೂತನವಾಗಿ ನಿರ್ಮಾಣವಾಗಿರುವ ಸೇತುವೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕಾಣಿಯೂರು ಗ್ರಾ.ಪಂ.ಅಧ್ಯಕ್ಷೆ ಲಲಿತಾ ದರ್ಖಾಸು, ಗ್ರಾ.ಪಂ.ಉಪಾಧ್ಯಕ್ಷ ಗಣೇಶ್ ಉದನಡ್ಕ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆನಂದ ಗೌಡ ಮೇಲ್ಮನೆ, ಉಪಾಧ್ಯಕ್ಷ ಮುರಳೀಧರ ಪುಣ್ಚತ್ತಾರು, ನಿರ್ದೇಶಕರಾದ ವಿಶ್ವನಾಥ ದೇವಿನಗರ, ಹರೀಶ್ ಅಂಬುಲ, ಪುಟ್ಟಣ್ಣ ಗೌಡ ಮುಗರಂಜ, ಕಾಣಿಯೂರು ಗ್ರಾ.ಪಂ.ಸದಸ್ಯರಾದ ರಾಮಣ್ಣ ಗೌಡ ಮುಗರಂಜ, ಪ್ರವೀಣ್‌ಚಂದ್ರ ರೈ ಕುಮೇರು, ದೇವಿಪ್ರಸಾದ್ ದೋಳ್ಪಾಡಿ, ವಿಶ್ವನಾಥ ಕೊಪ್ಪ, ತಾರಾನಾಥ ಇಡ್ಯಡ್ಕ, ಲೋಕಯ್ಯ ಪರವ ದೋಳ್ಪಾಡಿ, ಸುನಂದ ಅಬ್ಬಡ, ಕೀರ್ತಿ ಅಂಬುಲ, ಸುಲೋಚನಾ ಮಿಯೋಳ್ಪೆ, ತೇಜಕುಮಾರಿ ಉದ್ಲಡ್ಡ, ಅಂಬಾಕ್ಷಿ ಕೂರೇಲು, ಗಂಗಮ್ಮ ಗುಜ್ಜರ್ಮೆ, ಮೀರ ಕಳೆಂಜೋಡಿ, ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಧನಂಜಯ ಕೇನಾಜೆ, ಉಪಾಧ್ಯಕ್ಷ ಬಾಲಕೃಷ್ಣ ಗೌಡ ಇಡ್ಯಡ್ಕ, ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಮಣ್ಣ ಗೌಡ ಮೂಡೈಮಜಲು, ದೋಳ್ಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಆನಂದ ಗೌಡ ಬನೇರಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಧರ್ಮೇಂದ್ರ ಗೌಡ ಕಟ್ಟತ್ತಾರು, ಪುತ್ತೂರು ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ದೇವಯ್ಯ ಗೌಡ ಖಂಡಿಗ, ಬೂತ್ ಸಮಿತಿ ಅಧ್ಯಕ್ಷ ಸುಂದರ ಬೆದ್ರಾಜೆ, ವೀರಪ್ಪ ಗೌಡ ಉದ್ಲಡ್ಡ, ಕಾಣಿಯೂರು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಪರಮೇಶ್ವರ ಗೌಡ ಅನಿಲ, ಪದ್ಮನಾಭ ಭಟ್ ಕಟ್ಟತ್ತಾರು, ಕೃಷ್ಣಪ್ರಸಾದ್ ಭಟ್ ಕಟ್ಟತ್ತಾರು, ಕುಶಾಲಪ್ಪ ಗೌಡ ಗುಂಡಿಗದ್ದೆ, ಬೂತ್ ಸಮಿತಿ ಕಾರ್ಯದರ್ಶಿಗಳಾದ ಯಶವಂತ ಕೇಪುಳಗುಡ್ಡೆ, ಸುರೇಶ್ ಬಂಡಾಜೆ, ದಯಾನಂದ ಕೂರೇಲು, ಕಲ್ಪಡ, . ಗ್ರಾ.ಪಂ.ಮಾಜಿ ಸದಸ್ಯರಾದ ಬಾಬು ದರ್ಖಾಸು, ಪದ್ಮನಾಭ ಅಂಬುಲ, ಹರಿಶ್ಚಂದ್ರ ನೀಟಡ್ಕ, ಬೆಳಿಯಪ್ಪ ಗೌಡ ದೇವರತ್ತಿಮಾರ್ ಸುರೇಶ್ ಓಡಬಾಯಿ, ವೆಂಕಪ್ಪ ಗೌಡ ಬೀರೊಳಿಗೆ, ಶಿವರಾಮ ಉಪಾಧ್ಯಾಯ, ಸತ್ಯನಾರಾಯಣ ಕಲ್ಲೂರಾಯ, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಕೋಶಾಧಿಕಾರಿ ಲಕ್ಷ್ಮಣ ಗೌಡ ಮುಗರಂಜ ಮತ್ತಿತರರು ಉಪಸ್ಥಿತರಿದ್ದರು. ಶಿವರಾಮ ರೈ ಪಿಜಕ್ಕಳ ಸ್ವಾಗತಿಸಿ, ಪ್ರಶಾಂತ್ ಭಟ್ ಕಟ್ಟತ್ತಾರು ವಂದಿಸಿದರು.

ಬಸವರಾಜ ಬೊಮ್ಮಾಯಿ ಸರಕಾರದ ಮಹತ್ವದ ಯೋಜನೆ “ಗ್ರಾಮಬಂಧ ಸೇತುವೆ ಯೋಜನೆ” ಮೂಲಕ ಸುಮಾರು ರೂ 50ಲಕ್ಷ ಅನುದಾನದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕಾಣಿಯೂರು ಗ್ರಾಮದ ಕಟ್ಟತ್ತಾರು ಸೇತುವೆಯನ್ನು ಲೋಕಾರ್ಪಣೆಗೊಳಿಸಲಾಯಿತು.

LEAVE A REPLY

Please enter your comment!
Please enter your name here