ನೆಲ್ಯಾಡಿ ಶಾಲಾ ಮಂತ್ರಿ ಮಂಡಲ ರಚನೆ

0

ನಾಯಕಿಯಾಗಿ ಫಾತಿಮತ್ ಇಬಾ ಉಪನಾಯಕ: ಯಶವಂತ್

ನೆಲ್ಯಾಡಿ: ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ನೆಲ್ಯಾಡಿಯ ಶಾಲಾ ಮಂತ್ರಿಮಂಡಲದ ಚುನಾವಣೆಯು ಇವಿಎಂ APP ಬಳಸಿ ಯಶಸ್ವಿಯಾಗಿ ನಡೆಯಿತು.
ಚುನಾವಣಾ ಪ್ರಕ್ರಿಯೆಗಳಾದ ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂಪಡೆಯುವುದು, ಚುನಾವಣಾ ಪ್ರಚಾರ, ಅಣಕು ಮತದಾನ, ಏಜೆಂಟ್ ನೇಮಕ ಸೇರಿದಂತೆ ವಿದ್ಯಾರ್ಥಿಗಳಿಗೆ ಚುನಾವಣಾ ಪ್ರಕ್ರಿಯೆಯನ್ನು ಪರಿಚಯಿಸಲಾಯಿತು. ಶಾಲಾ ನಾಯಕಿಯಾಗಿ ಫಾತಿಮತ್ ಇಬಾ, ಉಪನಾಯಕನಾಗಿ ಯಶವಂತ್ ಇವರು ಆಯ್ಕೆಯಾದರು. ಮುಖ್ಯಗುರು ಆನಂದ ಅಜಿಲರವರ ಮಾರ್ಗದರ್ಶನದಲ್ಲಿ ಶಿಕ್ಷಕರ ಸಹಕಾರದೊಂದಿಗೆ ಚುನಾವಣೆಯು ನಡೆಯಿತು.

LEAVE A REPLY

Please enter your comment!
Please enter your name here