ಮೊಹಲ್ಲಾ ಸಬಲೀಕರಣಕ್ಕೆ ಸಾಂಘಿಕ ಪ್ರಯತ್ನ ಅಗತ್ಯ: ಖಾಝಿ ತ್ವಾಖಾ ಉಸ್ತಾದ್
ಪುತ್ತೂರು: ಮೊಹಲ್ಲಗಳ ಸಬಲೀಕರಣ ಹಾಗೂ ಅಭಿವೃದ್ಧಿಗೆ ಸಂಘಟಿತ ಪ್ರಯತ್ನವು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಸಮಸ್ತದ ಅಂಗ ಸಂಸ್ಥೆಯಾದ ಸುನ್ನೀ ಮಹಲ್ ಫೆಡರೇಷನ್ ಸ್ತುತ್ಯರ್ಹವಾಗಿ ಕಾರ್ಯಾಚರಿಸುತ್ತಿದೆ ಎಂದು ದ.ಕ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಉಸ್ತಾದ್ ಹೇಳಿದರು. ಪರ್ಲಡ್ಕ ಶಂಸುಲ್ ಉಲಮಾ ಮೆಮೋರಿಯಲ್ ಕಾಲೇಜಿನ ಆಡಳಿತ ಮಂಡಳಿ ಕಚೇರಿಯಲ್ಲಿ ನಡೆದ ಸುನ್ನೀ ಮಹಲ್ ಫೆಡರೇಷನ್ (ಎಸ್‌ಎಂಎಫ್) ತಾಲೂಕು ಸಂಯೋಜಕರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮುದಾಯದ ಆಧ್ಯಾತ್ಮಿಕ, ಶೈಕ್ಷಣಿಕ ಅಭಿವೃದ್ಧಿಯಲ್ಲಿ ಮೊಹಲ್ಲಾಗಳು ಪ್ರಮುಖ ಪಾತ್ರ ವಹಿಸುತ್ತಿದ್ದು, ಸುನ್ನತ್ ಜಮಾಅತ್‌ನ ಬಲಿಷ್ಠತೆಗೆ ಪ್ರತಿ ಮೊಹಲ್ಲಾದಲ್ಲಿ ಎಸ್‌ಎಂಎಫ್ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿ ಮೊಹಲ್ಲಾದ ಆಡಳಿತ ಸಮಿತಿಯು ತಮ್ಮ ಮೊಹಲ್ಲಾವನ್ನು ಎಸ್‌ಎಂಎಫ್ ಸಂಘಟನೆಯಲ್ಲಿ ನೋಂದಣಿ ಮಾಡಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಎಸ್‌ಎಂಎಫ್ ಸದಸ್ಯತ್ವ ಅಭಿಯಾನವು ಜೂ.20ರಿಂದ ಆ.20ರವರೆಗೆ ಜಿಲ್ಲಾದ್ಯಂತ ನಡೆಯಲಿದೆ ಎಂದು ಖಾಝಿಯವರು ಘೋಷಿಸಿದರು. ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಬಂಬ್ರಾಣ ಉಸ್ತಾದ್ ದುಆಗೈದರು. ಸಮಸ್ತ ಮುಶಾವರ ಸದಸ್ಯರಾದ ಉಸ್ಮಾನ್ ಫೈಝಿ ತೋಡಾರ್ ಉದ್ಘಾಟನೆಗೈದರು. ಎಸ್‌ಎಂಎಫ್ ಕೇಂದ್ರ ಸಮಿತಿ ನಾಯಕರಾದ ಎ.ಕೆ ಆಲಿಪ್ಪರಂಬ್ ಉಸ್ತಾದ್, ಸಮಸ್ತ ಟ್ರೈನರ್ ಪಿ.ಸಿ ಉಮರ್ ದಾರಿಮಿ ವಿಷಯ ಮಂಡನೆಗೈದರು.
ಜಿಫ್ರಿ ತಂಙಳ್ ಬೆಳ್ತಂಗಡಿ, ಶರೀಫ್ ದಾರಿಮಿ ಕೋಟ್ಟಯಂ, ಶರೀಫ್ ಫೈಝಿ ಕಡಬ, ಹುಸೈನ್ ದಾರಿಮಿ ರೆಂಜಲಾಡಿ, ಇರ್ಶಾದ್ ದಾರಿಮಿ ಮಿತ್ತಬೈಲ್, ರಶೀದ್ ರಹ್ಮಾನಿ ಪರ್ಲಡ್ಕ, ಹುಸೈನ್ ರಹ್ಮಾನಿ ಕಾಶಿಪಟ್ನ, ಮುಫತ್ತಿಷ್ ಉಮರ್ ದಾರಿಮಿ, ಎಲ್‌ಟಿ ಅಬ್ದುಲ್ ರಝಾಕ್ ಹಾಜಿ, ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಖಾದರ್ ಹಾಜಿ ಸುಂಕದಕಟ್ಟೆ, ಖಾದರ್ ಮಾಸ್ಟರ್ ಬಂಟ್ವಾಳ, ಇಬ್ರಾಹಿಂ ಕೊಣಾಜೆ, ಅಶ್ರಫ್ ಶೇಡಿಗುಂಡಿ ಉಪಸ್ಥಿತರಿದ್ದರು. ಹನೀಫ್ ಹಾಜಿ ಬಂದರ್ ಸ್ವಾಗತಿಸಿ, ಅಡ್ವೊಕೇಟ್ ಹನೀಫ್ ಹುದವಿ ವಂದಿಸಿದರು.