ಬೆಟ್ಟಂಪಾಡಿ ಕಾಲೇಜಿನ ವಾಣಿಜ್ಯ ವಿಭಾಗದಿಂದ ವಿದ್ಯಾರ್ಥಿಗಳಿಗೆ ಅಧ್ಯಯನ ಪ್ರವಾಸ

0

ಬೆಟ್ಟಂಪಾಡಿ:  ವಾಣಿಜ್ಯ ಪದವಿ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಅಭಿವೃದ್ಧಿ, ಭೌತಿಕ ಶಿಕ್ಷಣ ಮತ್ತು ಕೈಗಾರಿಕಾ ವಲಯದ ಮಾಹಿತಿಯನ್ನು ನೀಡುವ ದೃಷ್ಟಿಯಿಂದ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿದ್ಯಾರ್ಥಿಗಳಿಗೆ ಒಂದು ದಿನದ ಅಧ್ಯಯನ ಪ್ರವಾಸ ನಡೆಸಲಾಯಿತು.  ಮಂಗಳೂರಿನಲ್ಲಿರುವ ಗೇರುಬೀಜ ತಯಾರಿಕಾ ಘಟಕ ಅಚಲ ಕ್ಯಾಶ್ಯೂ ಇಂಡಸ್ಟ್ರೀಸ್, ಅನಘ ಆಯಿಲ್ ರಿಫಾಯನ್ ಇಂಡಸ್ಟ್ರೀಸ್, ಕೆ ಎಮ್ ಎಫ್ ಘಟಕಗಳಿಗೆ ಭೇಟಿ ನೀಡಲಾಯಿತು.

ಅಂತಿಮ ವರ್ಷದ ವಾಣಿಜ್ಯ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಈ ಅಧ್ಯಯನ ಪ್ರವಾಸದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದರು. ವಿವಿಧ ಉತ್ಪಾದನಾ ಘಟಕಗಳಿಗೆ ಭೇಟಿ ನೀಡುವ ಮೂಲಕ ಉತ್ಪಾದನಾ ಹಂತಗಳು, ಅಂತಿಮ ಉತ್ಪನ್ನ, ಸಹ ಉತ್ಪನ್ನಗಳು ಮತ್ತು ಮಾರುಕಟ್ಟೆಯ ಬಗ್ಗೆ ಮಾಹಿತಿ ಪಡೆದರು.

ಆಯಾ ಉತ್ಪಾದನಾ ಘಟಕಗಳ ಅಧಿಕಾರಿಗಳು ಆ ವಲಯದಲ್ಲಿ ಇರುವ ಉದ್ಯೋಗವಕಾಶಗಳು ಹಾಗೂ ವಿವಿಧ ಹಂತಗಳಲ್ಲಿ ಕಚ್ಚಾ ವಸ್ತುಗಳು ಅಂತಿಮ ಉತ್ಪನ್ನಗಳಾಗಿ ರೂಪಾಂತರಗೊಳ್ಳುವುದನ್ನು ಪ್ರತ್ಯಕ್ಷವಾಗಿ ವಿವರಿಸಿದರು. 

ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಇವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿದ್ದ ಈ ಅಧ್ಯಯನ ಪ್ರವಾಸವನ್ನು ವಾಣಿಜ್ಯ ವಿಭಾಗದ ಮುಖ್ಯಸ್ಥ ಹರಿಪ್ರಸಾದ್ ಎಸ್ ಸಂಘಟಿಸಿದರು. ಉಪನ್ಯಾಸಕರಾದ ಅನಂತ ಭಟ್, ಶ್ರೀಮತಿ ಸಂಧ್ಯಾಲಕ್ಷ್ಮಿ, ಶ್ರೀಮತಿ ಶಶಿಕಲಾ ಹಾಗೂ ಶ್ರೀಮತಿ ಹರ್ಷಿತಾ  ಹಾಗೂ ಅಂತಿಮ ಪದವಿ ವಿದ್ಯಾರ್ಥಿಗಳು ಭಾಗವಹಿಸಿದರು.

LEAVE A REPLY

Please enter your comment!
Please enter your name here