ಜೇಸಿಐ ವಿಟ್ಲ ಘಟಕಕ್ಕೆ ವಲಯದ ಅತ್ಯುತ್ತಮ ಘಟಕ ಪ್ರಶಸ್ತಿ

0

ಪುತ್ತೂರು: ಜೇಸಿಐ ಜೋಡುಮಾರ್ಗ ನೇತ್ರಾವತಿ ಇವರ ಆಥಿತ್ಯದಲ್ಲಿ ನಡೆದ ಜೇಸಿಐ ಭಾರತದ ವಲಯ 15ರ “ನಿಲುಮೆ 2023″ರ ಮಧ್ಯಂತರ ಸಮ್ಮೇಳನದಲ್ಲಿ ಜೇಸಿಐ ವಿಟ್ಲ ಘಟಕವು ವಲಯದ ಅತ್ಯುತ್ತಮ ಘಟಕ ಪ್ರಶಸ್ತಿಯನ್ನು ಮುಡಿಗೆರಿಸಿಕೊಂಡಿದೆ.


ಘಟಕವು ವಿವಿಧ ವಿಭಾಗಗಳಲ್ಲಿ ನಡೆಸಿದ ಸಾಮಾಜಿಕ ಕಾರ್ಯ,ವ್ಯಕ್ತಿತ್ವ ವಿಕಸನದ ತರಬೇತಿ ಕಾರ್ಯಕ್ರಮಗಳಿಗೆ ಅರ್ಹವಾಗಿಯೇ ಈ ಪ್ರಶಸ್ತಿಗೆ ಭಾಜನವಾಗಿದೆ.


ವಿಟ್ಲ ಘಟಕವು ಅತ್ಯುತ್ತಮ ಘಟಕ ಪ್ರಶಸ್ತಿಯೊಂದಿಗೆ ಡೈಮಂಡ್ ಘಟಕ ಮನ್ನಣೆ, ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ‘ವಿದ್ಯಾನಿಧಿ ಪುರಸ್ಕಾರ, ಮಧ್ಯಂತರ ಸಮ್ಮೇಳನ ‘ರಜತ ಪುರಸ್ಕಾರ’ ಮನ್ನಣೆ, ತರಬೇತಿ ವಿಭಾಗದಲ್ಲಿ ವಲಯದ ಟಾಪ್-5 ಘಟಕ ಪ್ರಶಸ್ತಿ, ಯುವ ದಿನಾಚರಣೆ ಸಂಭ್ರಮ ಕಾರ್ಯಕ್ರಮ ವಿಭಾಗದ ಮನ್ನಣೆ, ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮ ವಿಭಾಗದ ಮನ್ನಣೆ, ಯುಗಾದಿ ಸಂಭ್ರಮ-DAAN ಕಾರ್ಯಕ್ರಮ ಆಚರಣೆಗೆ ವಿಶೇಷ ಮನ್ನಣೆ, ರಾಷ್ಟ್ರೀಯ ತರಬೇತಿ ದಿನಾಚರಣೆಯ ವಿಶೇಷ ಮನ್ನಣೆ ಹಾಗೂ ಘಟಕಾಧ್ಯಕ್ಷರಿಗೆ G&D ವಿಭಾಗದಿಂದ JFP ದೇಣಿಗೆಯನ್ನು ನೀಡಿ ವಿಶೇಷ ಮನ್ನಣೆಗಳನ್ನು ತನ್ನ ಮುಡಿಗೇರಿಸಿಕೊಂಡಿದೆ.


ಈ ಪ್ರಶಸ್ತಿ ಹಾಗೂ ಮನ್ನಣೆಗಳ ಮೂಲಕ ಜೇಸಿಐ ವಿಟ್ಲ ಘಟಕವು ತನ್ನ ಹೆಸರನ್ನು ವಲಯದಲ್ಲಿ ಗುರುತಿಸಿಕೊಳ್ಳುವಂತಾಗಲು ಘಟಕದ ಎಲ್ಲಾ ಪದಾಧಿಕಾರಿಗಳು, ಪೂರ್ವಾಧ್ಯಕ್ಷರುಗಳ ಮಾರ್ಗದರ್ಶನ ಹಾಗೂ ಸರ್ವ ಸದಸ್ಯರುಗಳ ಪರಿಶ್ರಮವೇ ಕಾರಣ ಎಂಬುದಾಗಿ ಘಟಕದ ಅಧ್ಯಕ್ಷ ಜೇಸಿ ಪರಮೇಶ್ವರ ಹೆಗಡೆ ತಿಳಿಸಿದರು.

ಮಧ್ಯಂತರ ಸಮ್ಮೇಳನದ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಪೂರ್ವಾದ್ಯಕ್ಷರುಗಳಾದ- ಜೇಸಿ ಜೈ ಕಿಶನ್, ಜೇಸಿ ದಿನೇಶ್ ಶೆಟ್ಟಿ , ಜೇಸಿ ಚಂದ್ರಹಾಸ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷರಾದ ಜೇಸಿ ಚಂದ್ರಹಾಸ ಕೊಪ್ಪಳ, ಕಾರ್ಯದರ್ಶಿ ಜೇಸಿ ದೀಕ್ಷಿತ್ ,ಕೋಶಾಧಿಕಾರಿ ಜೇಸಿ ರಿತೇಶ್ ಶೆಟ್ಟಿ, ಪಧಾದಿಕಾರಿಗಳಾದ ಜೆಸಿ ಹರ್ಷಿತ್ ಕುಮಾರ್, ಜೆಸಿ ಸಂದೀಪ್, ಜೇಸಿ ಅಭಿಶೇಕ್, ಜೆಸಿ ಆರ್ಥಿಕ್,ಜೆಸಿ ಅನಿಲ್ ಕುಮಾರ್ ವಡಗೇರಿ,ಜೆಸಿ ಅರುಣ್, ಜೆಸಿ ರಜಿತ್, ಜೆಸಿ ಸಾರಿಕಾ ಚಂದ್ರಹಾಸ ಶೆಟ್ಟಿ,ಜೆಸಿ ಸೌಮ್ಯ ಚಂದ್ರಹಾಸ,ಹಾಗೂ ಸದಸ್ಯರುಗಳಾಗ ಜೆಸಿ ನವೀನ್ ಕುಮಾರ್, ಜೆಸಿ ಹರ್ಷಿತಾ ಅಭಿಷೇಕ್, ಜೆಸಿ ಹೇಮಲತಾ ಜೈಕಿಶನ್ ರವರುಗಳು ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here