ಹಣದ ವಿಚಾರದಲ್ಲಿ ಮನೆ ಮಂದಿಯನ್ನು ನಿಂದಿಸಿದ ವ್ಯಕ್ತಿ ವಿರುದ್ಧ ನ್ಯಾಯಾಲಯಕ್ಕೆ ದೂರು

0

ಪುತ್ತೂರು: ಹಣದ ವಿಚಾರದಲ್ಲಿ ಮನೆ ಮಂದಿಯನ್ನು ನಿಂದಿಸಿದ ಬಡ್ಡಿ ವ್ಯವಹಾರದ ವ್ಯಕ್ತಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ತನ್ನ ಪಾಪ ಪ್ರಜ್ಞೆಯನ್ನು ಅರಿತು ನಾನು 9 ವರ್ಷ ನ್ಯಾಯಾಲಯವನ್ನು ಅಲೆದಾಡಿದ ವೆಚ್ಚವನ್ನು ಭರಿಸಬೇಕು. ಇಲ್ಲವಾದಲ್ಲಿ ನಾನು ನ್ಯಾಯಾಲಯಕ್ಕೆ ದೂರು ನೀಡುತ್ತೇನೆ ಎಂದು ಕೊಡಿಪ್ಪಾಡಿಯ ಚಂದ್ರಶೇಖರ್ ಹನಿಯೂರು ಅವರು ಪತ್ರಿಕಾಗೋಷ್ಠಿಯ ಮೂಲಕ ಎಚ್ಚರಿಕೆ ನೀಡಿದ್ದಾರೆ.
ನಾನು ಕೆಲವು ವರ್ಷಗಳ ಹಿಂದೆ ಪುತ್ತೂರು ಕುರಿಯ ರಮೇಶ್ ಬಿ ರೈ ಅವರಿಂದ ರೂ. 20 ಸಾವಿರ ಸಾಲವಾಗಿ ಪಡೆದಿದ್ದೆ. ಅದಕ್ಕೆ ಬಡ್ಡಿ ರೂಪದಲ್ಲಿ ಪ್ರತಿ ತಿಂಗಳು ಹಣ ಪಾವತಿ ಮಾಡಿ ರೂ.40 ಸಾವಿರ ಆಗಿತ್ತು. ಆದರೆ ರಮೇಶ್ ರೈ ಅವರು ಬಡ್ಡಿ ಹಣ ನೀಡುವಂತೆ ಮತ್ತೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಳಿಕ ಮನೆ ಮಂದಿಗೂ ನಿಂದಿಸಿದ್ದಾರೆ. ಈ ಕುರಿತು ನಾನು ಪುತ್ತೂರು ನಗರ ಪೊಲೀಸ್ ಠಾಣೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ವಾಯ್ಸ್ ರೆಕಾರ್ಡ್ ಸಹಿತ ದೂರು ನೀಡಿದ್ದೆ. ಈ ಕುರಿತು ಪೊಲೀಸರು ಇದೊಂದು ಅಸಂಜ್ಞೆಯ ಪ್ರಕರಣ. ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡುವಂತೆ ತಿಳಿಸಿದ್ದರು. ಈ ನಡುವೆ ರಮೇಶ್ ರೈ ಅವರು ನಾನು ಸಾಲದ ಬದಲು ನೀಡಿದ ಖಾಲಿ ಚೆಕ್ ಅನ್ನು ರೂ.85 ಸಾವಿರಕ್ಕೆ ಹಾಕಿ ನ್ಯಾಯಾಲಯದ ಮೂಲಕ ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದರು. ನ್ಯಾಯಾಲಯ ವಿಚಾರಣೆ ನಡೆಸಿದ್ದು, ಪ್ರಕರಣದಲ್ಲಿ ನನಗೆ ದೋಷಮುಕ್ತ ತೀರ್ಪು ನೀಡಿದೆ. ಆದರೆ ಹಿಂದೆ ರಮೇಶ್ ರೈ ಅವರು ನನಗೆ ಮತ್ತು ಮನೆ ಮಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕುರಿತು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ನಾನು ದಾಖಲೆ ಸಹಿತ ನ್ಯಾಯಾಲಯಕ್ಕೆ ದೂರು ನೀಡಲಿದ್ದೇನೆ. ಇದರ ಜೊತೆಗೆ 9 ವರ್ಷಗಳಿಂದ ನಾನು ನ್ಯಾಯಾಲಯಕ್ಕೆ ಅಲೆದಾಡಿದ ವೆಚ್ಚವನ್ನು ಅವರು ಭರಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here