ಕೆವಿಜಿ ಮತ್ತು ಇಂಡಿಯನ್ ರೆಡ್ ಕ್ರಾಸ್ ಸುಳ್ಯ ಘಟಕದ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ

0


ವಿಶ್ವದ 4ನೇ ಅತಿದೊಡ್ಡ ಹಬ್ಬ ರಕ್ತದಾನಿಗಳ ದಿನಾಚರಣೆ:ಡಾ. ಕೆ. ವಿ. ರೇಣುಕಾಪ್ರಸಾದ್

ಕೆವಿಜಿ ದಂತ ಮೆಡಿಕಲ್ ಕಾಲೇಜು,ಕೆವಿಜಿ ಇಂಜಿನಿಯರಿಂಗ್ ಕಾಲೇಜು,ಕೆವಿಜಿ ಪಾಲಿಟೆಕ್ನಿಕ್, ಕೆವಿಜಿ ಐಟಿಐ, ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸುಳ್ಯ ಘಟಕ ಇದರ ಸಂಯುಕ್ತ ಆಶ್ರಯದಲ್ಲಿ ಇಂದು ಕೆವಿಜಿ ದಂತ ಮಹಾವಿದ್ಯಾಲಯ ಸಭಾಂಗಣದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಬೃಹತ್ ರಕ್ತದಾನ ಶಿಬಿರ ನಡೆಯಿತು.


ರೆಡ್ ಕ್ರಾಸ್ ಸುಳ್ಯ ಘಟಕ ಸಭಾಪತಿ ಆದ ಪಿ. ಬಿ. ಸುಧಾಕರ್ ರೈ ಅಧ್ಯಕ್ಷತೆಯನ್ನು ವಹಿಸಿದರು. ಬಳಿಕ ಮಾತನಾಡಿದ ಅವರು, ಮಾನವ ರಕ್ತದ ಗ್ರೂಪ್ ಗಳನ್ನು ಸಂಶೋಧಿಸಿದ ಆಸ್ಟ್ರೀಯ ದೇಶದ ವೈದ್ಯ ಕಾರ್ಲ್ ಲ್ಯಾಂಡ್ ಸ್ಟಾನರ್ ರವರ ಜನ್ಮದಿನ ಜೂನ್ 14 ವಿಶ್ವ ರಕ್ತ ದಾನಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ರೆಡ್ ಕ್ರಾಸ್ ಸುಳ್ಯ ಘಟಕದ ಉಪಸಭಾಪತಿ ಕೆ.ಎಂ.ಮುಸ್ತಫ, ಪ್ರದಾನ ಕಾರ್ಯದರ್ಶಿ ತಿಪ್ಪೇಶಪ್ಪ, ಕೆವಿಜಿ ಸಮೂಹ ಸಂಸ್ಥೆಗಳ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಯು. ಪಿ. ಉಜ್ವಲ್, ಕೆವಿಜಿ ಡೆಂಟಲ್ ಕಾಲೇಜು ಪ್ರಾoಶುಪಾಲೆ ಶ್ರೀಮತಿ ಮೋಕ್ಷ ನಾಯಕ್, ಕೆವಿಜಿ ಇಂಜಿನಿಯರಿಂಗ್ ಕಾಲೇಜು ಪ್ರಾoಶುಪಾಲ ಪ್ರೊ. ಸುರೇಶ್, ಕೆವಿಜಿ ಪಾಲಿಟೆಕ್ನಿಕ್ ಪ್ರಾoಶುಪಾಲ ಡಾ.ಜಯಪ್ರಕಾಶ್, ಕೆವಿಜಿ ಐಟಿಐ ಪ್ರಾoಶುಪಾಲ ಚಿದಾನoದ, ಮೊದಲಾದವರು ಭಾಗವಹಿಸಿದ್ದರು.
ರಕ್ತದಾನ ಶಿಬಿರ ದಲ್ಲಿ ನೂರಾರು ರಕ್ತದಾನಿಗಳು ಉತ್ಸಾಹದಿಂದ ಭಾಗವಹಿಸಿದರು.
ಶಿಬಿರ ಸಂಘಟಿಸುವಲ್ಲಿ ದಿನೇಶ್ ಮಡ್ತಿಲ, ಆಡಳಿತಾಧಿಕಾರಿ ಬಿ. ಟಿ. ಮಾಧವ, ಚಂದ್ರಶೇಖರ ಬಿಳಿನೆಲೆ, ಭವಾನಿ ಶಂಕರ್ ಆಡ್ತಲೆ, ಡಾ. ಮನೋಜ್, ಪ್ರೊ. ಲೋಕೇಶ್, ಪ್ರಜ್ಞಾ ಮೊದಲಾದವರು ಸಹಕರಿಸಿದರು.

LEAVE A REPLY

Please enter your comment!
Please enter your name here