ಪುತ್ತೂರು: ವೈದ್ಯಕೀಯ ಶಿಕ್ಷಣದ ಪ್ರವೇಶಕ್ಕಾಗಿ ಕೇಂದ್ರ ಸರಕಾರವು ನಡೆಸಿದ 2023ರ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಪುತ್ತೂರು ವಿವೇಕಾನಂದ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿನಿ ಗೌತಮಿ ಪೈ(ವಿಟ್ಲದ ರಾಘವೇಂದ್ರ ಪೈ ಎ ಮತ್ತು ಮಾಧವೀ ಆರ್ ಪೈ ದಂಪತಿ ಪುತ್ರಿ) ನೀಟ್ ಪರೀಕ್ಷೆಯಲ್ಲಿ 720 ಅಂಕಗಳಲ್ಲಿ 542 ಅಂಕಗಳನ್ನು ಪಡೆದು ಅಖಿಲ ಭಾರತ ಮಟ್ಟದಲ್ಲಿ 70655ನೇ ರ್ಯಾಂಕ್,ಕೆಟಗರಿ ವಿಭಾಗದಲ್ಲಿ 26336 ನೇ ರ್ಯಾಂಕ್ ಗಳಿಸಿದ್ದಾರೆ.
ವೇದಾಕ್ಷ ಎಂ (ಪುತ್ತೂರಿನ ಪಡ್ನೂರು ಗ್ರಾಮದ ರಮೇಶ ಎಂ ಹಾಗೂ ಬೇಬಿ ರವರ ಪುತ್ರ) 522 ಅಂಕಗಳನ್ನು ಪಡೆದು ಅಖಿಲ ಭಾರತ ಮಟ್ಟದಲ್ಲಿ 88329 ನೇ ರ್ಯಾಂಕ್ ಹಾಗೂ ಕೆಟಗರಿ ವಿಭಾಗದಲ್ಲಿ 40394 ನೇ ರ್ಯಾಂಕ್ ಗಳಿಸಿದ್ದಾರೆ. ಹಾಗೆಯೇ ವಿದ್ಯಾರ್ಥಿಗಳಾದ ಸ್ತುತಿಶೀಲ(487 ಅಂಕ), ಅನನ್ಯ ಲಕ್ಷ್ಮೀ(479 ಅಂಕ), ನೇಹಾ ಭಟ್(453 ಅಂಕ), ಶ್ರೀರಾಮ್ ಭಟ್(446 ಅಂಕ) ಮತ್ತು ಆಶ್ರಯ (436 ಅಂಕ) ಗಳನ್ನು ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ.