ನೀಟ್ 2023 : ಅಂಬಿಕಾ ಪದವಿಪೂರ್ವ ವಿದ್ಯಾಲಯದಿಂದ ಅತ್ಯಧಿಕ ವಿದ್ಯಾರ್ಥಿಗಳು ವೈದ್ಯಕೀಯ ವಿಭಾಗಕ್ಕೆ ಆಯ್ಕೆ

0

ಪುತ್ತೂರು: ವೈದ್ಯಕೀಯ ವೃತ್ತಿ ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸುವ ರಾಷ್ಟ್ರಮಟ್ಟದ ನೀಟ್ – 2023 ಪರೀಕ್ಷೆಯಲ್ಲಿ ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯ ಹಾಗೂ ಬಪ್ಪಳಿಗೆಯ ಅಂಬಿಕಾ ವಸತಿಯುತ ಪದವಿಪೂರ್ವ ವಿದ್ಯಾಲಯಗಳ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಗಳಿಸುವ ಮೂಲಕ ಉತ್ಕೃಷ್ಟ ಫಲಿತಾಂಶ ದಾಖಲಿಸಿದ್ದಾರೆ.

ಪಡೀಲಿನ ಸಂಜೀತ್ ಕುಮಾರ್ ಮತ್ತು ಕುಮಾರಿ ಬೆನಿಟ ಸಿನ್ಹ ದಂಪತಿಯ ಪುತ್ರಿ ಖುಷಿ ಗರಿಷ್ಟ 720 ಅಂಕಗಳಲ್ಲಿ 618 ಅಂಕ ದಾಖಲಿಸಿದರೆ, ಕಾಸರಗೋಡಿನ ಸುಬ್ರಹ್ಮಣ್ಯ ಪ್ರಸಾದ್ ಹಾಗೂ ಸುಧಾ ದಂಪತಿಗಳ ಪುತ್ರ ಅನಂತರಾಮ ಎಸ್ 592, ಬೆಳ್ಳಾರೆಯ ಬಿ ಕೆ ಸೂರ್ಯನಾರಾಯಣ ಹಾಗೂ ವಿದ್ಯಾಕುಮಾರಿ ದಂಪತಿಗಳ ಪುತ್ರ ಆಶೀಶ್ ಗೋವಿಂದ 588, ಬೆಟ್ಟಂಪಾಡಿಯ ದಿನೇಶ್ ಮರಡಿತಾಯ ಮತ್ತು ಸಂಧ್ಯಾ ದಂಪತಿಯ ಪುತ್ರಿ ಶ್ರಾವಣಿ ಪಿ 567 ಅಂಕ, ಸುಳ್ಯದ ಸೀತಾರಾಮ ಎನ್ ಜಿ ಮತ್ತು ಜಯಲಕ್ಷ್ಮಿ ಕೆ ದಂಪತಿಯ ಪುತ್ರ ಧೀರಜ್ ಬಿ ಎಸ್ 554 ಅಂಕ, ಕೆದಂಬಾಡಿಯ ರವಿನಾರಾಯಣ ಭಟ್ ಎನ್ ಹಾಗೂ ವಿದ್ಯಾಸರಸ್ವತಿ ಎನ್ ಆರ್ ದಂಪತಿಗಳ ಪುತ್ರಿ ಚೈತ್ರ ಭಟ್ ವೈ 550, ಮೊಟ್ಟೆತಡ್ಕದ ಯಶೋಧರ ಎಸ್ ಮತ್ತು ರಶ್ಮಿ ಟಿ ಎಂ ದಂಪತಿಯ ಪುತ್ರಿ ಯಶಸ್ವಿ ಶೆಟ್ಟಿ ಎಸ್ 545, ಸಕಲೇಶ್‌ಪುರದ ಸಿ ಎಸ್ ನರಹರಿ ಭಟ್ ಹಾಗೂ ಶ್ರೀಲಕ್ಷ್ಮಿ ದಂಪತಿಗಳ ಪುತ್ರಿ ವೈಭವಿ ಸಿ ಎನ್ 507 ಅಂಕ ದಾಖಲಿಸಿದ್ದಾರೆ.


ಒಟ್ಟು 7 ವಿದ್ಯಾರ್ಥಿಗಳಿಗೆ 540ಕ್ಕಿಂತ ಅಧಿಕ ಅಂಕ, 11 ವಿದ್ಯಾರ್ಥಿಗಳಿಗೆ 460ಕ್ಕಿಂತ ಅಧಿಕ ಅಂಕ ದಾಖಲಾಗಿದೆ. ತನ್ಮೂಲಕ 14 ಮಂದಿ ವಿದ್ಯಾರ್ಥಿಗಳು 400ಕ್ಕಿಂತಲೂ ಅಧಿಕ ಅಂಕ ಪಡೆದು ಸಾಧನೆ ಮೆರೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಪ್ರಾಂಶುಪಾಲರು, ಬೋಧಕ, ಬೋಧಕೇತರ ವೃಂದ ಸಂತಸ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here