ನಾಯಕನಾಗಿ ನಿತೀಶ್ ಕೆ.ಯು. ಸುಧೀಕ್ಷಾ ಎಸ್.ಡಿ.ಕುಂದರ್ ಉಪನಾಯಕಿ, ಕನ್ಯಾ ಪ್ರತಿನಿಧಿ ದಿಶಾ ಎಸ್.ಎಲ್.
ಕಡಬ: ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ 2023-24ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿ ನಾಯಕ, ವಿದ್ಯಾರ್ಥಿ ಉಪನಾಯಕ ಹಾಗೂ ಕನ್ಯಾ ಪ್ರತಿನಿಧಿ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ಜರಗಿತು.
ವಿದ್ಯಾರ್ಥಿಗಳು ಮತಯಂತ್ರದ ಮೂಲಕ ಮತ ಚಲಾಯಿಸಿ ತಮ್ಮ ನಾಯಕರನ್ನು ಆಯ್ಕೆ ಮಾಡಿದರು. ನಿತೀಶ್ ಕೆ.ಯು ವಿದ್ಯಾರ್ಥಿ ನಾಯಕನಾಗಿ, ಸುಧೀಕ್ಷಾ ಎಸ್.ಡಿ ಕುಂದರ್ ವಿದ್ಯಾರ್ಥಿ ಉಪ ನಾಯಕಿಯಾಗಿ ಹಾಗೂ ದಿಶಾ ಎಸ್.ಎಲ್. ಕನ್ಯಾ ಪ್ರತಿನಿಧಿಯಾಗಿ ಚುನಾಯಿತರಾದರು. ದೀಕ್ಷಾ-ಸ್ವಚ್ಛತಾ ಮಂತ್ರಿಯಾಗಿ, ರಿತೇಶ್-ಸ್ವಚ್ಛತಾ ಉಪಮುಖ್ಯತ್ರಿಯಾಗಿ, ನಿತೀಶ್-ಶಿಸ್ತು ಪಾಲನಾ ಮಂತ್ರಿಯಾಗಿ, ಸಿಂಚನಾ- ಉಪಮಂತ್ರಿಯಾಗಿ ಆಶಿತಾ-ಶಿಕ್ಷಣ ಮಂತ್ರಿಯಾಗಿ, ಪೂರ್ಣೇಶ್-ಉಪಮಂತ್ರಿಯಾಗಿ ಮೋಕ್ಷಿತ್- ಕೃಷಿಮಂತ್ರಿಯಾಗಿ, ನಿಖಿಲ್- ಉಪಮಂತ್ರಿಯಾಗಿ, ದೃತಿ-ಸಾಂಸ್ಕೃತಿಕ ಮಂತ್ರಿಯಾಗಿ, ಕುನಾಲ್-ಉಪ ಮಂತ್ರಿಯಾಗಿ, ಪೂರ್ಣೇಶ್-ಕ್ರೀಡಾ ಮಂತ್ರಿಯಾಗಿ ಆಯ್ಕೆಯಾದರು. ಅಕ್ಷಯ್ ಸಭಾಪತಿಯಾಗಿ ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಗಣಿತ ಶಿಕ್ಷಕ ಚೇತನ್ ಎಚ್ . ಡಿ ಚುನಾವಣಾ ಮತಯಂತ್ರದ ವ್ಯವಸ್ಥೆಯನ್ನು ಕಲ್ಪಿಸಿದರು. ಅಧ್ಯಾಪಕರಾದ ದಿನೇಶ್ ಕುಂದರ್, ಯತೀಶ್, ಪ್ರವೀಣ್ ,ಸುಪ್ರೀತಾ, ರಮ್ಯಾ, ನೇತ್ರಾವತಿ ಹಾಗೂ ಶಿಕ್ಷಕೇತರ ಸಿಬ್ಬಂದಿಗಳಾದ ಲಕ್ಷ್ಮೀನಾರಾಯಣ ಹಾಗೂ ಬಾಬು ಚುನಾವಣಾ ಪ್ರಕ್ರಿಯೆಯಲ್ಲಿ ಸಹಕರಿಸಿದರು. ಮುಖ್ಯ ಗುರುಗಳಾದ ಸತ್ಯ ಶಂಕರ ಭಟ್ ಎಂ. ಅವರ ಮಾರ್ಗದರ್ಶನದಲ್ಲಿ ಚುನಾವಣಾ ಪ್ರಕ್ರಿಯೆಗಳು ನಡೆಯಿತು.