ಮತಾಂತರ ನಿಷೇದ ಕಾಯ್ದೆ ಹಿಂಪಡೆಯುವ ತೀರ್ಮಾನಕ್ಕೆ ಭಜರಂಗದಳ ವಿರೋಧ

0

ರಾಜ್ಯಾದ್ಯಂತ ಹೋರಾಟ ಮಾಡಲಿದ್ದೇವೆ – ಮುರಳಿಕೃಷ್ಣ ಹಸಂತಡ್ಕ

ಪುತ್ತೂರು: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮತಾಂತರ ನಿಷೇಧ ಕಾನೂನನ್ನು ಹಿಂದಕ್ಕೆ ಪಡೆಯಲು ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಇದರ ವಿರುದ್ಧ ವಿಶ್ವಹಿಂದು ಪರಿಷತ್ ಭಜರಂಗದಳ ಉಗ್ರ ಹೋರಾಟ ಮಾಡಲಿದೆ ಎಂದು ಭಜರಂಗದಳ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಅವರು ತಿಳಿಸಿದ್ದಾರೆ.

ಅಲ್ಪಸಂಖ್ಯಾತರ ಓಲೈಕೆಗಾಗಿ ಹಿಂದೂ ಸಮಾಜದ ಮೇಲೆ ದಬ್ಬಾಳಿಕೆ ಮಾಡುವ ಸರಕಾರದ ಕ್ರಮವನ್ನು ಕೈ ಬಿಡದಿದ್ದರೆ ರಾಜ್ಯಾದ್ಯಂತ ಹೋರಾಟಗಳು ಮುಂದಿನ ದಿನ ನಡೆಯಬಹುದು. ಇದರ ಪರಿಣಾಮ ನೇರ ಸರಕಾರದ ಮೇಲೆ ಆಗಲಿದೆ. ಮತಾಂತರ ನಿಷೇಧ ಕಾಯ್ದೆ ಇರುವುದು ಯಾವುದೇ ಮತ, ಧರ್ಮದ ವಿರುದ್ಧ ಅಲ್ಲ. ಎಲ್ಲಿ ಬಲವಂತದ ಮತಾಂತರ ನಡೆಯುತ್ತಿದೆ ಅದರ ವಿರುದ್ಧ ಮಾಡಿರುವ ಈ ಕಾನೂನನ್ನು ಸಮಾಜ ಸ್ವೀಕಾರ ಮಾಡಿ ನೆಮ್ಮದಿಯ ಜೀವನ ನಡೆಸುತ್ತಿದೆ. ಆದರೆ ಇದೀಗ ಸಿದ್ದರಾಮಯ್ಯ ಸರಕಾರ ಮತಾಂತರ ಕಾಯ್ದೆಯನ್ನೇ ಹಿಂಪಡೆಯುವ ದಾಸ್ಯದ ಯೋಚನೆ ಎನಿದೆಯೋ ಅದನ್ನು ಬಿಟ್ಟು ಬಿಡಬೇಕು. ಇಲ್ಲವಾದಲ್ಲಿ ಇಡೀ ಹಿಂದೂ ಸಮಾಜವನ್ನು ಜಾಗೃತಿ ಮಾಡುವಲ್ಲಿ ಅನಿವಾರ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here