ನುಳಿಯಾಲು ತರವಾಡಿನಲ್ಲಿ ಸಂಕ್ರಾಂತಿ, ಆರೋಗ್ಯ ತಪಾಸಣೆ

0

ಪುತ್ತೂರು: ನುಳಿಯಾಲು ತರವಾಡಿನಲ್ಲಿ ಧರ್ಮ ದೈವ ಬೀರ್ಣಾಳ್ವ ಹಾಗೂ ಪರಿವಾರ ದೈವಗಳಿಗೆ ಪ್ರತೀ ತಿಂಗಳು ಒಂದೊಂದು ಕವರಿನವರ ಮೂಲಕ ಕುಟುಂಬಸ್ಥರು ಬಂಧುಗಳು ಸೇರಿ ನಡೆಸುತ್ತಿರುವ ಸಾಮೂಹಿಕ ಪ್ರಾರ್ಥನೆ ಜೂ.15ರಂದು‌ ದಿ.ಯಮುನಾ ಕವರಿನವರ ಆಯೋಜನೆಯಲ್ಲಿ ಯಜಮಾನ ನುಳಿಯಾಲು ಜಗನ್ನಾಥ ರೈಯವರ ನೇತೃತ್ವದಲ್ಲಿ ನುಳಿಯಾಲಿನ ಕುಟುಂಬಸ್ಥರು ಬಂಧುಗಳು ಸೇರಿಸಿಕೊಂಡು ಶೃದ್ಧಾ ಭಕ್ತಿ ಪೂರ್ವಕ ಧರ್ಮ ದೈವ ಬೀರ್ಣಾಳ್ವ ಮತ್ತು ಪರಿವಾರ ದೈವಗಳಿಗೆ ಸಾಮೂಹಿಕ ಪ್ರಾರ್ಥನೆ ನೆರವೇರಿತು.


ನುಳಿಯಾಲು ಕುಟುಂಬಸ್ಥರು ಬಂಧುಗಳು ಲಕ್ಷ್ಮಿನಾರಾಯಣ ರೈ ಮತ್ತು ಸುಲೊಚನ ಇವರ ನೇತೃತ್ವದೊಂದಿಗೆ ಸುಶ್ರಾವ್ಯ ಮತ್ತು ಭಕ್ತಿ ಪೂರ್ವ ಭಜನೆ ನಡೆಸಿದರು., ಯಜಮಾನರ ನೇತೃತ್ವದಲ್ಲಿ ಧರ್ಮದೈವ ಬೀರ್ಣಾಳ್ವ ಮತ್ತು ಪರಿವಾರ ದೈವಗಳಿಗೆ ಸಾಮೂಹಿಕ ಪ್ರಾರ್ಥನೆ ನಡೆಯಿತು. ಆರೋಗ್ಯ ಸುರಕ್ಷಣಾಧಿಕಾರಿ ಎ.ವಿ ಕುಸುಮಾವತಿ ಆರೋಗ್ಯ ಉಪಕೇಂದ್ರ ನಿಡ್ಪಳ್ಳಿ, ಲಕ್ಷಿ ಚಲವಾದಿ ಸಮುದಾಯ ಆರೋಗ್ಯ ಅಧಿಕಾರಿ ಮತ್ತು ಪವಿತ್ರ ಕುಮಾರಿ ಕೆ. ಆಶಾ ಕಾರ್ಯಕರ್ತೆ ನಿಡ್ಪಳ್ಳಿ ಇವರು ಪಂಚಾಯತಿನ ಸಹಯೋಗದೊಂದಿಗೆ ಕುಸುಮಾವತಿ ಅವರ ನೇತೃತ್ವದಲ್ಲಿ ಬೆಳಿಗ್ಗೆ ತರವಾಡಿನಲ್ಲಿ ಆರೋಗ್ಯ ಅಮೃತ ಅಭಿಯಾನ ಯೋಜನೆ ಅಡಿಯಲ್ಲಿ BP, Sugar, himoglobin (ರಕ್ತ), weight ಇವುಗಳ ಆರೋಗ್ಯ ತಪಾಸಣೆ ನಡೆಸಿದರು ಕುಟುಂಬಸ್ಥರು ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಪಾಸಣೆಯಲ್ಲಿ ಪಾಳ್ಗೊಂಡು ಇದರ ಸದುಪಯೋಗ ಪಡೆದು ಕೊಂಡರು. ನಮ್ಮ ಬಂಧು ಹಾಗೂ ನಿಡ್ಪಳ್ಳಿ ಪಂಚಾಯತ್ ಸದಸ್ಯೆ ನಂದಿನಿಯವರು ತಪಾಸಣೆ ವೇಳೆ ಮುತುವರ್ಜಿಯಿಂದ ಸಹಕರಿಸಿದರು. ಬಳಿಕ ಕುಟುಂಬದ ಸಭೆಯಲ್ಲಿ ಆರೋಗ್ಯ ಸುರಕ್ಷಣಾಧಿಕಾರಿ ಕುಸುಮಾವತಿ ಇವರು ರೋಗಗಳು ಹೇಗೆ ಬರುತ್ತದೆ, ಬರುವ ಮೊದಲು ನಾವು ಹೇಗೆ ಕಾಳಜಿ ವಹಿಸಬೇಕು ಎಂಬುದನ್ನು ಸವಿವರವಾಗಿ ತಿಳಿಸಿದರು. ನುಳಿಯಾಲು ತರವಾಡಿಗೆ ಒತ್ತುವರಿಯಾಗಿ ಇರುವ ಕೃಷಿ ಭೂಮಿಯನ್ನು ತರವಾಡಿನ ಅವಶ್ಯಕತೆಯನ್ನು ಮನಗಂಡು ಎರಡನೆಯ ಬಾರಿ ನಮ್ಮ ತರವಾಡಿಗೆ ಬಿಟ್ಟು ಕೊಟ್ಟು ಕುಟುಂಬ ಪ್ರೇಮವನ್ನು ಮೆರೆದ ಎಲ್ಲರ ಪ್ರೀತಿಪಾತ್ರರಾದ ನುಳಿಯಾಲು ತರವಾಡು ಕುಟುಂಬದ ಯಜಮಾನ ಜಗನ್ನಾಥ ರೈ ಯವರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಈ ಭೂಮಿಯನ್ನು ಈ ದಿನ ರಿಜಿಸ್ಟ್ರಾರ್ ಕಛೇರಿಯಲ್ಲಿ ಟ್ರಸ್ಟ್ ಹೆಸರಿಗೆ ನೊಂದಣಿ ಮಾಡಲಾಯಿತು. ಯಜಮಾನರ ಕುಟುಂಬ ಪ್ರೆಮ ಮತ್ತು ಅವರು ತರವಾಡಿಗೆ ಮಾಡಿದ ತ್ಯಾಗವನ್ನು ಮಿತ್ರಂಪಾಡಿ ಪುರಂದರ ರೈಗಳು ಕೊಂಡಾಡಿದರು. ಜಯರಾಮ ರೈ ವಂದಿಸಿದರು.

ತರವಾಡು ಕುಟುಂಬದ ಯಜಮಾನ ಹಾಗೂ ನುಳಿಯಾಲು ಟ್ರಸ್ಟಿನ ಅಧ್ಯಕ್ಷ ನುಳಿಯಾಲು ಜಗನ್ನಾಥ ರೈ, ಕಾರ್ಯದರ್ಶಿ ಪುರುಷೊತ್ತಮ ಆರ್ ಶೆಟ್ಟಿ ನುಳಿಯಾಲು, ಕೋಶಾಧಿಕಾರಿ ಪುರಂದರ ರೈ ಮಿತ್ರಂಪಾಡಿ, ಜಯರಾಮ ರೈ ನುಳಿಯಾಲು, ಎನ್ . ರವೀಂದ್ರ ಶೆಟ್ಟಿ ನುಳಿಯಾಲು, ರಘುನಾಥ ರೈ ನುಳಿಯಾಲು, ,ಚಿತ್ತರಂಜನ್ ಶೆಟ್ಟಿ ನುಳಿಯಾಲು ಶ್ರೀನಿವಾಸ ರೈ ನುಳಿಯಾಲು ಮತ್ತು ಕುಟುಂಬಸ್ಥರು ಹಾಗೂ ಬಂಧುಗಳು ಅಪಾರ ಸಂಖ್ಯೆಯಲ್ಲಿ ಹಾಜರಿದ್ದರು. ಉಪಾಹಾರ ಹಾಗೂ ಅನ್ನಸಂತರ್ಪಣಿ ನಡೆಯಿತು.

LEAVE A REPLY

Please enter your comment!
Please enter your name here