ಪುತ್ತೂರು: ದಿ/ ಪ್ರಭಾಕರ ವಲಯ ಅರಣ್ಯ ಅಧಿಕಾರಿ ಹಾಗೂ ಅರಣ್ಯ ಇಲಾಖೆ ಉಪ್ಪಿಂಗಡಿ ವಲಯ ಅರಣ್ಯ ಕಛೇರಿಯಲ್ಲಿ ಉದ್ಯೋಗಿಯಾಗಿರುವ ಶ್ರೀಮತಿ ಉಷಾಕಿರಣ್ ಮಗಳು ಮಧುಶ್ರೀ ಎನ್.ಪಿ ಇವರು ಬೆಂಗಳೂರಿನ ಆಚಾರ್ಯ ಇನ್ಶ್ಟಿಟ್ಯೂಟ್ ಆಫ್ ಟೆಕ್ನೋಲೊಜಿ ಸಂಸ್ಥೆಯಲ್ಲಿ ಏರೋನೆಟೆಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ವ್ಯಾಸಂಗ ಮಾಡಿ ಬೆಸ್ಟ್ ಜಾಬ್ ಔಟ್ ಗೋಯಿಂಗ್ ಸ್ಟೂಡೆಂಟ್ ಪ್ರಶಸ್ತಿಯನ್ನು ಪಡೆದು 10 ರಲ್ಲಿ 9.5 ಅಂಕದೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನದೊಂದಿಗೆ ಉತ್ತೀರ್ಣರಾಗಿರುತ್ತಾರೆ.
ಇವರು ಎಲ್.ಕೆ.ಜಿ, ಯು.ಕೆ.ಜಿ ಹಾಸನದ ಅರವಿಂದ ಕಾನ್ವೆಂಟ್ ನಲ್ಲಿ ಕಲಿತು 1 ರಿಂದ 3ನೇ ತರಗತಿಯಲ್ಲಿ ಪುತ್ತೂರಿನ ಸುಧಾನ ವಸತಿಯುತ ಶಾಲೆ, 4 ರಿಂದ 10 ನೇ ತರಗತಿಯನ್ನು ಉಪ್ಪಿನಂಗಡಿ ಸೈಂಟ್ ಮೇರಿಸ್ ಶಾಲೆಯಲ್ಲಿ ವ್ಯಾಸಂಗ ಮಾಡಿ , ಎಸ್. ಎಸ್. ಎಲ್.ಸಿ ಯಲ್ಲಿ 91% ಅಂಕಗಳೊಂದಿಗೆ ಉತ್ತೀರ್ಣಗೊಂಡು, ಪಿ.ಯು.ಸಿ ಶಿಕ್ಷಣವನ್ನು ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ 91% ಅಂಕಗಳೊಂದಿಗೆ ಉತ್ತೀರ್ಣರಾಗಿದ್ದರು.
ಸಿ.ಇ.ಟಿ ಯಲ್ಲಿ 20,000, ಜೆ.ಇ.ಇ ಮೈನ್ಸ್ 4,800 ಎಸ್.ಟಿ.ಜಿ ಪಡೆದು ಬೆಂಗಳೂರಿನ ಆಚಾರ್ಯ ಇನ್ಶ್ಟಿಟ್ಯೂಷನ್ ಆಫ್ ಟೆಕ್ನೋಲೊಜಿ ಕಾಲೇಜಿನಲ್ಲಿ ಏರೋನೆಟೆಕಲ್ ಇಂಜಿನಿಯರಿಂಗ್ ಸಂಸ್ಥೆಗೆ ದಾಖಲಾದಾರು. ಮಧುಶ್ರೀಯವರು 10 ರಲ್ಲಿ 9.4 ಅಂಕಗಳೊಂದಿಗೆ ಉತ್ತೀರ್ಣರಾಗಿರುತ್ತಾರೆ.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಧ್ಯಾಯ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರು, ಪುತ್ತೂರು ಕರ್ನಾಟಕ ರಾಜ್ಯ ನಿವೃತ್ತ ಸಂಘದ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾಗಿರುವ ಶ್ರೀ ಬಿ. ಐತಪ್ಪ ನಾಯ್ಕ ಮತ್ತು ನಿವೃತ್ತ ಉಪತಹಶೀಲ್ದಾರ್ ಜಯಂತಿ.ಪಿ.ನಾಯ್ಕ್ ರ ಮೊಮ್ಮಗಳು ಆಗಿರುತ್ತಾರೆ. ಕು।ಮಧುಶ್ರೀ ಯವರ ಅಣ್ಣ ನಂದಕಿಶೋರ್ ಅವರು ಎಮ್.ಸಿ.ಎ ಪದವಿದರರಾಗಿದ್ದು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಅಧಿಕಾರಿಯಾಗಿದ್ದಾರೆ.