ರಾಷ್ಟ್ರೀಯ ಜೀವರಕ್ಷಣಾ ಸಮಿತಿ ನಡೆಸಿದ ಸ್ಪರ್ಧೆಯಲ್ಲಿ ಅಂಬಿಕಾದ ವಿದ್ಯಾರ್ಥಿಗಳ ಸಾಧನೆ

0

ಪುತ್ತೂರು: ರಾಷ್ಟ್ರೀಯ ಜೀವರಕ್ಷಣಾ ಸಮಿತಿಯ ವತಿಯಿಂದ ಬೆಂಗಳೂರಿನ ರೇ ಸೆಂಟರ್‌ನಲ್ಲಿ ಇತ್ತೀಚೆಗೆ ನಡೆಸಿದ ರಾಷ್ಟ್ರಮಟ್ಟದ ಜೀವರಕ್ಷಣಾ ವಾಟರ್ ಚಾಂಪಿಯನ್‌ಶಿಪ್‌ನಲ್ಲಿ ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಸ್ಪರ್ಧಿಸಿ ಹಲವು ಪದಕಗಳನ್ನು ಗೆದ್ದಿರುತ್ತಾರೆ.

ದರ್ಬೆಯ ನಳಿನಾಕ್ಷ-ಗಾಯತ್ರಿ ದಂಪತಿ ಪುತ್ರ, ಪ್ರಥಮ ಪಿಯುಸಿ ವಿದ್ಯಾರ್ಥಿ ಅನಿಕೇತ್ ರಿಲೇ, ಲೈನ್ ತ್ರೋ, ರೆಸ್ಕ್ಯೂ ಮಿಡ್‌ಲೇ, ಸೂಪರ್ ಲೈಫ್ ಸೇವರ್‌ನಲ್ಲಿ ಸ್ಪರ್ಧಿಸಿ 3 ಚಿನ್ನ, 2 ಬೆಳ್ಳಿ, 1 ಕಂಚಿನ ಪದಕ ಗೆದ್ದಿರುತ್ತಾರೆ. ಮರೀಲಿನ ಕೇಶವ ಕುಮಾರ್-ಮೀನಾಕ್ಷಿ ದಂಪತಿಯ ಪುತ್ರ, ಪ್ರಥಮ ಪಿಯುಸಿ ವಿದ್ಯಾರ್ಥಿ ಧನ್ವಿತ್ ಇವರು ಮೂರು ರಿಲೇಗಳಲ್ಲಿ 2 ಚಿನ್ನ, 1 ಬೆಳ್ಳಿ ಗೆದ್ದು ಸಾಧನೆಗೈದಿದ್ದಾರೆ. 200 obstacle, 100 obstacle ನಲ್ಲಿ ಕ್ರಮವಾಗಿ 2 ಚಿನ್ನದ ಪದಕ, 100 ಮೀಟರ್‌ನ manikin carry ಯಲ್ಲಿ 1 ಬೆಳ್ಳಿ, ಲೈನ್ ತ್ರೋದಲ್ಲಿ 1 ಬೆಳ್ಳಿ ಗೆದ್ದು ಸಾಧನೆಗೈದಿರುತ್ತಾರೆ.

LEAVE A REPLY

Please enter your comment!
Please enter your name here