ದರ್ಬೆತ್ತಡ್ಕ ಶಾಲಾ ಮಕ್ಕಳಿಂದ ಬಿತ್ತೋತ್ಸವ ಕಾರ್ಯಕ್ರಮ

0

ನಿಡ್ಪಳ್ಳಿ;  ಕರ್ನಾಟಕ ಅರಣ್ಯಇಲಾಖೆ  ಪುತ್ತೂರು ವಲಯ ಪಾಣಾಜೆ ಶಾಖೆಯ ವತಿಯಿಂದ  ದ.ಕ.ಜಿ.ಪಂ ಉನ್ನತ ಹಿರಿಯ ಪ್ರಾಥಮಿಕ ಶಾಲೆ ದರ್ಬೆತ್ತಡ್ಕ ಶಾಲಾ ಮಕ್ಕಳಿಂದ  ವಿಶ್ವ ಪರಿಸರ ದಿನಾಚರಣೆ ಅಂಗವಾಗಿ  ವಿವಿಧ  ಬಗೆಯ ಬೀಜಗಳ ಬಿತ್ತೋತ್ಸವ ಕಾರ್ಯಕ್ರಮ  ಜೂ. 19 ರಂದು ಶಾಲಾ ಪಕ್ಕದ ಅರಣ್ಯ ಇಲಾಖೆ  ಜಾಗದಲ್ಲಿ  ನಡೆಯಿತು.

    ಈ ಕಾರ್ಯಕ್ರಮದಲ್ಲಿ ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ  ತ್ರಿವೇಣಿ ಪಲ್ಲತ್ತಾರು, ಸದಸ್ಯೆ ರೇಖಾ ಬಿಜತ್ರೆ ಉಪಸ್ಥಿತರಿದ್ದರು. ಪುತ್ತೂರು  ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ,  ಪಾಣಾಜೆ ಶಾಖೆಯ ಉಪ ಅರಣ್ಯಾಧಿಕಾರಿ ಪ್ರಕಾಶ್ ಬಿ. ಟಿ ,ಗಸ್ತು ಅರಣ್ಯ ಪಾಲಕರಾದ ನಿಂಗರಾಜು ಹಾಗೂ ಉಮೇಶ್ ಕೆ. ಜಿ , ಅರಣ್ಯ ವೀಕ್ಷಕ ವೆಂಕಪ್ಪ ಗೌಡ  ಇವರ ಮಾರ್ಗದರ್ಶನದಲ್ಲಿ  ಶಾಲಾ ಮಕ್ಕಳು ಬೀಜಗಳ ಬಿತ್ತನೆ ಮಾಡಿದರು. ಪ್ರಭಾರ ಮುಖ್ಯ ಗುರುಗಳಾದ  ಶೋಭಾ ಕುಮಾರಿ  ಶಿಕ್ಷಕರಾದ  ಚಂದ್ರಶೇಖರ ಗೌಡ ಟಿ, ರಾಜು ಎಸ್. ಟಿ ಶಿಕ್ಷಕಿಯರಾದ  ಯೋಗಿನಿ ಆರ್, ಕು. ಅಶ್ವಿತಾ ಸಹಕರಿಸಿದರು. ಅತಿ ಹೆಚ್ಚು ಬೀಜಗಳನ್ನು ಸಂಗ್ರಹಿಸಿದ ವಿದ್ಯಾರ್ಥಿಗಳಿಗೆ ಪ್ರಥಮ ದ್ವಿತೀಯ ಹಾಗೂ ತೃತೀಯಾ ಬಹುಮಾನಗಳನ್ನು  ಅರಣ್ಯ ಇಲಾಖೆಯಿಂದ ನೀಡಲಾಯಿತು .

LEAVE A REPLY

Please enter your comment!
Please enter your name here