ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ವಿಶ್ವ ಯೋಗ ದಿನಾಚರಣೆ

0

*ಪ್ರತಿ ಮನೆಗಳಲ್ಲಿ ಯೋಗ ನಡೆಯಲಿ -ರಾಮದಾಸ್ ಗೌಡ

*ದೇಹವನ್ನು ನಿರಂತರ ಚಾಲನೆಯಲ್ಲಿ ಇಡಲು ಯೋಗ ಅಗತ್ಯ – ಡಾ.ಯು.ಪಿ.ಶಿವಾನಂದ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜವೇದಿಕೆಯಲ್ಲಿ ಜೂ.21ರಂದು ಬೆಳಿಗ್ಗೆ ವಿಶ್ವಯೋಗ ದಿನಾಚರಣೆ ನಡೆಯಿತು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ವಿವಿಧ ಇಲಾಖೆಗಳು, ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಯೋಗಕೇಂದ್ರ ಪುತ್ತೂರು, ಮತ್ತು ಸುದ್ದಿ ಸಮೂಹ ಸಂಸ್ಥೆಗಳು ಹಾಗೂ ಅನಿಕೇತನ ಎಜುಕೇಶನಲ್ ಟ್ರಸ್ಟ್ ಪುತ್ತೂರಿನಿಂದ ಜಂಟಿಯಾಗಿ ಯೋಗ ದಿನಾಚರಣೆ ನಡೆಯಿತು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮದಾಸ್ ಗೌಡ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ ಜಗತ್ತಿನಾದ್ಯಂತ 127 ದೇಶಗಳಲ್ಲಿ ಇವತ್ತು ಯೋಗ ದಿನಾಚರಣೆ ನಡೆಯುತ್ತಿದೆ. ಇವತ್ತು ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಪ್ರಧಾನಿ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುವುದು ದೇಶಕ್ಕೆ ಹೆಮ್ಮೆ. ʼವಸುದೈವ ಕುಟುಂಬಕಂʼ ಎಂಬ ಧ್ಯೇಯ ವಾಕ್ಯದೊಂದಿಗೆ ಈ ಬಾರಿಯ ಯೋಗ ಜಗತ್ತಿಗೆ ಒಳ್ಳೆಯದನ್ನು ಮಾಡಲಿ. ಪ್ರತಿ ಮನೆಗಳಲ್ಲಿ ಯೋಗ ನಡೆಯುವ ಮೂಲಕ ಮಾನಸಿಕ ಹಾಗೂ ಆದ್ಯಾತ್ಮಿಕ ಭಾವನೆ ಸ್ವಚ್ಚವಾಗಿ ಎಲ್ಲರು ಆರೋಗ್ಯವಂತರಾಗೋಣ ಎಂದರು.


ದೇಹವನ್ನು ನಿರಂತರ ಚಾಲನೆಯಲ್ಲಿ ಇಡಲು ಯೋಗ ಅಗತ್ಯ:
ಕಾರ್ಯಕ್ರಮದ ಅಧ್ಯಕ್ಷತೆ ವಹಸಿದ್ದ ಸುದ್ದಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಯು.ಪಿ.ಶಿವಾನಂದ ಅವರು ಮಾತನಾಡಿ, ದೇಹವನ್ನು ನಿರಂತರ ಚಾಲನೆಯಲ್ಲಿ ಇಡಲು ಯೋಗ ಅಗತ್ಯ. ಬ್ಯಾಟರಿ ಒಮ್ಮೆ ಚಾರ್ಜ್ ಮಾಡಿದರೆ ಹೇಗೆ ಕೆಲಸ ಮಾಡುತ್ತದೆಯೋ ಅದೇ ರೀತಿ ನಿಮ್ಮ ಇಡೀ ದಿವಸದ ಕೆಲಸಕ್ಕೆ ಯೋಗ ಅಗತ್ಯ. ಇದರಿಂದ ಮಾನಸಿಕ ಏಕಾಗ್ರತೆ, ದೈಹಿಕ ಮಾನಸಿಕ, ಮನಸ್ಸನ್ನು ನಿಯಂತ್ರಣ ಮಾಡಲು ಹಾಗೂ ಇದರೊಂದಿಗೆ ನಾವು ಮತ್ತು ಜಗತ್ತಿನ ಒಳಿತಿಗಾಗಿ ಯೋಗ ಅಗತ್ಯ ಎಂದರು.

ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರು ಇದರ ಸಂಚಾಲಕ ಜಯಸೂರ್ಯ ರೈ ಮಾದೋಡಿ, ಅನಿಕೇತನ ಎಜ್ಯುಕೇಶನಲ್ ಟ್ರಸ್ಟ್‌ನ ಸಂಚಾಲಕ ಕೃಷ್ಣಪ್ರಸಾದ್ ನಡ್ಸಾರ್ ಅತಿಥಿಗಳಾಗಿ ಭಾಗವಹಿಸಿದ್ದರು. ಯೋಗ ಕೇಂದ್ರದ ಗುರು ಪ್ರಸಾದ್ ಪಾಣಾಜೆ ಅವರು ಮಾತನಾಡಿ ಪ್ರಧಾನಿಯವರ ಕನಸಿನ ಕೂಸು, ಇವತ್ತು ಎಲ್ಲರಿಗೂ ಯೋಗ ಅಗತ್ಯವಿದೆ. ಎಲ್ಲರು ಯೋಗವನ್ನು ಮಾಡುವಂತೆ ವಿನಂತಿಸಿದರು. ಯೋಗ ಕೇಂದ್ರದ ಅಧ್ಯಕ್ಷ ಗಿರೀಶ್ ಮಳಿ ಸ್ವಾಗತಿಸಿ, ವಂದಿಸಿದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಸರಳ ಯೋಗಾಭ್ಯಾಸ ನಡೆಯಿತು. ಪ್ರಗತಿ ಆಂಗ್ಲಮಾಧ್ಯಮ ಶಾಲೆ ಕಾಣಿಯೂರು, ಸುದಾನ ವಸತಿಯುತ ಶಾಲೆಯ ವಿದ್ಯಾರ್ಥಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಯೋಗದಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here