ಪುತ್ತೂರು ರೋಟರಿ ಕ್ಲಬ್‌ನಿಂದ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉದ್ಘಾಟನೆ

0

ರೋಟರಿ ಸಂಸ್ಥೆಗೆ ಪುತ್ತೂರಿನ ಜನತೆಯ ಆರೋಗ್ಯದ ಕಾಳಜಿಯಿದೆ-ಅಶೋಕ್ ರೈ

*ಸಮಾಜ ಸೇವೆಯೇ ರೋಟರಿ ಸಂಸ್ಥೆಯ ಸ್ಪಷ್ಟ ಉದ್ದೇಶ-ಮಹೇಶ್ ಕೊಟ್ಬಾಗಿ
*ರೋಟರಿ ಚಿರಂತನವಾಗಿರುವ ಸೇವೆಗೆ ಮುಡಿಪಾಗಿಡುವ ಸಂಸ್ಥೆ-ಪ್ರಕಾಶ್ ಕಾರಂತ್
*ಸಮಾಜ ಸೇವೆಯಲ್ಲಿ ಕನಸುಗಳು ಬಹಳ ಮುಖ್ಯ-ರವಿ ವಡ್ಲಮನಿ
*ರೋಟರಿ ಕಾರ್ಯಕ್ರಮ ಇನ್ನಷ್ಟು ಜನಮನ ತಟ್ಟುವಂತಾಗಲಿ-ಡಾ.ಕೆ.ಸೂರ್ಯನಾರಾಯಣ
*ಕಣ್ಣಿನ ಯಾವುದೇ ಕಾಯಿಲೆಗಳಿದ್ದರೂ ಚಿಕಿತ್ಸೆ ನೀಡುವ ಚಿಂತನೆ-ಡಾ.ಕೃಷ್ಣಪ್ರಸಾದ್
*ಎರಡು ವರ್ಷದ ಹಿಂದಿನ ಕನಸು ನನಸು-ಎ.ಜೆ.ರೈ

ಪುತ್ತೂರು:ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ತಾಲೂಕುಗಳಲ್ಲಿ ಪ್ರತ್ಯೇಕ ಸುಸಜ್ಜಿತ ಕಣ್ಣಿನ ಆಸ್ಪತ್ರೆಯ ಕೊರತೆಯನ್ನು ನೀಗಿಸಲು ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಕೆಳ ಅಂತಸ್ತಿನಲ್ಲಿ ಸೂಪರ್ ಸ್ಪೆಷಾಲಿಟಿ ರೋಟರಿ ಕ್ಲಬ್ ಪುತ್ತೂರು ಕಣ್ಣಿನ ಆಸ್ಪತ್ರೆ ಜೂ.21ರಂದು ಉದ್ಘಾಟನೆಗೊಂಡಿತು.


ಗ್ಲೋಬಲ್ ಗ್ರ್ಯಾಂಟ್ ಪ್ರಾಜೆಕ್ಟ್‌ನಲ್ಲಿ ಕೈಗೆತ್ತಿಕೊಂಡ ಯೋಜನೆಯಲ್ಲಿ ದಿ ರೋಟರಿ ಫೌಂಡೇಶನ್ ಜರ್ಮನಿಯ ಪಾಸ್‌ಪೋರ್ಟ್ ಕ್ಲಬ್, ಅಮೇರಿಕಾದ ಪ್ಲೊರಿಡ ಟೆಂಪನೂನ್ ಕ್ಲಬ್, ರೋಟರಿ ಜಿಲ್ಲೆ ೩೧೮೧ ಮತ್ತು ೩೧೫೦, ರೋಟರಿ ಕ್ಲಬ್ ಪುತ್ತೂರು ಸಿಟಿ, ಇನ್ನರ್‌ವೀಲ್ ಕ್ಲಬ್ ಪುತ್ತೂರು ಪಾಲುದಾರರಾಗಿದ್ದಾರೆ.ಇದರ ಜೊತೆಗೆ ವಿನಾಯಕ ಕುಡ್ವ, ಅಂತರ್ರಾಷ್ಟ್ರೀಯ ರೋಟರಿಯ ಚೇರ್‌ಮ್ಯಾನ್ ರವಿ ವಡ್ಲಮನಿ ಇವರ ವಿಶೇಷ ಸಹಕಾರ ಮತ್ತು ರೋಟರಿ ಸದಸ್ಯರು ಸಹಕಾರ ನೀಡಿದ್ದಾರೆ.ರೋಟರಿ ಅಂತರ್ರಾಷ್ಟ್ರೀಯ ನಿರ್ದೇಶಕ ಮಹೇಶ್ ಕೊಟ್ಬಾಗಿ ಅವರು ರೋಟರಿ ಕಣ್ಣಿನ ಆಸ್ಪತ್ರೆಯನ್ನು ಉದ್ಘಾಟಿಸಿದರು.ಶಾಸಕ ಅಶೋಕ್ ಕುಮಾರ್ ರೈ ದೀಪ ಪ್ರಜ್ವಲಿಸಿದರು.ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಮೊಡ್ಯುಲರ್ ಒಟಿಯನ್ನು ಉದ್ಘಾಟಿಸಿದರು. ಅಂತರ್ರಾಷ್ಟ್ರೀಯ ರೋಟರಿಯ ಚೇರ್‌ಮ್ಯಾನ್ ರವಿ ವಡ್ಲಮನಿ ಡೇ ಕೇರ್ ಸೆಂಟರ್ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಜಿಲ್ಲಾ ರೋಟರಿ -ಂಡೇಶನ್ ಚೇರ್‌ಮ್ಯಾನ್ ಡಾ.ಕೆ.ಸೂರ್ಯನಾರಾಯಣ, ಪ್ರಸಾದ್ ನೇತ್ರಾಲಯದ ಡಾ.ಕೃಷ್ಣ ಪ್ರಸಾದ್ ಕೆ, ಡಾ.ವಿಕ್ರಮ್ ಜೈನ್, ರೋಟರಿ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಎ.ಜಗಜೀವನ್‌ದಾಸ್ ರೈ, ರೋಟರಿ ಕ್ಲಬ್ ಪುತ್ತೂರು ಇದರ ಪ್ರಾಜೆಕ್ಟ್ ಚೇರ್‌ಮ್ಯಾನ್ ಡಾ.ಭಾಸ್ಕರ್ ಎಸ್, ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಉಮಾನಾಥ್ ಪಿ.ಬಿ., ಪುತ್ತೂರು ರೋಟರಿ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಶ್ರೀಕಾಂತ್ ಕೊಳತ್ತಾಯ, ರೋಟರಿ ಕ್ಲಬ್ ಪುತ್ತೂರು ಕಾರ್ಯದರ್ಶಿ ಡಾ.ಶ್ರೀಪ್ರಕಾಶ್ ಬಿ, ರೋಟರಿ ಕ್ಲಬ್ ಪುತ್ತೂರು ಮಾಜಿ ಅಧ್ಯಕ್ಷ ಝೇವಿಯರ್ ಡಿ’ಸೋಜ, ವಿ.ಜೆ.-ರ್ನಾಂಡೀಸ್, ಡಿವೈಎಸ್ಪಿ ಡಾ.ಗಾನ ಪಿ ಕುಮಾರ್, ಪ್ರಮುಖರಾದ ಎಂ.ಬಿ.ವಿಶ್ವನಾಥ ರೈ, ಎಕೆಎಸ್‌ಕೆ.ವಿಶ್ವಾಸ್ ಶೆಣೈ, ಕೃಷ್ಣನಾರಾಯಣ ಮುಳಿಯ, ಡಾ.ಅಶೋಕ್ ಪಡಿವಾಳ್,ಡಾ.ಶಶಿಧರ್ ಕಜೆ, ರೋಟರಿ ಕ್ಲಬ್ ಪುತ್ತೂರು ನಿಯೋಜಿತ ಅಧ್ಯಕ್ಷ ಜೈರಾಜ್ ಭಂಡಾರಿ, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ನಿಯೋಜಿತ ಅಧ್ಯಕ್ಷ ಡಾ|ರಾಜೇಶ್ ಬೆಜ್ಜಂಗಳ, ರೋಟರಿ ಕ್ಲಬ್ ಪುತ್ತೂರು ಮಾಜಿ ಅಧ್ಯಕ್ಷ ವಾಮನ್ ಪೈ, ಚಿದಾನಂದ ಬೈಲಾಡಿ, ಡಾ.ಜಯದೀಪ್, ಎಸ್.ಆರ್.ಕೆ.ಲ್ಯಾಡರ‍್ಸ್‌ನ ಮಾಲಕ ಕೇಶವ ಎ, ನಗರಸಭೆ ಸದಸ್ಯೆ ವಿದ್ಯಾ ಗೌರಿ, ರೋಟರಿ ಕ್ಲಬ್ ಪುತ್ತೂರು ಮಾಜಿ ಅಧ್ಯಕ್ಷ ಎಂ.ಜಿ.ರಫೀಕ್, ಪ್ರಗತಿ ಆಸ್ಪತ್ರೆಯ ಡಾ.ಶ್ರೀಪತಿ ರಾವ್, ಡಾ. ಸುಧಾ ಎಸ್ ರಾವ್. ಅರಿಯಡ್ಕ ಚಿಕ್ಕಪ್ಪ ನಾಕ್ ಸಹಿತ ಹಲವಾರು ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ರೋಟರಿ ಸಭಾ ಕಾರ್ಯಕ್ರಮ ಉದ್ಘಾಟನೆ


ಸಭಾ ಕಾರ್ಯಕ್ರಮ ಉದ್ಘಾಟನೆ:
ಬೆಳಿಗ್ಗೆ ರೋಟರಿ ಕಣ್ಣಿನ ಆಸ್ಪತ್ರೆಯ ಉದ್ಘಾಟನೆ ಬಳಿಕ ಬೊಳ್ವಾರು ಮಹಾವೀರ ವೆಂಚರ‍್ಸ್‌ನಲ್ಲಿ ಉದ್ಘಾಟನಾ ಸಭಾ ಕಾರ್ಯಕ್ರಮ ನಡೆಯಿತು.ಶಾಸಕ ಆಶೋಕ್ ಕುಮಾರ್ ರೈ ಅವರು ಕಣ್ಣಿನ ಆಸ್ಪತ್ರೆಯಲ್ಲಿ ದೀಪ ಪ್ರಜ್ವಲಿಸಿ ಬಳಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಳೆದ ವಾರವಷ್ಟೆ ರೋಟರಿ ಯುವದಿಂದ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ರೂ.೭೦ ಲಕ್ಷ ವೆಚ್ಚದಲ್ಲಿ ೬ ಡಯಾಲಿಸಿಸ್ ಮೆಷಿನ್ ನೀಡಿರುವುದು ತಾಲೂಕಿಗೆ ಉತ್ತಮ ಕೊಡುಗೆಯಾಗಿದೆ.ಅದೇ ರೀತಿ ಪುತ್ತೂರು ರೋಟರಿ ಬ್ಲಡ್ ಬ್ಯಾಂಕ್ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ಸಿಗುತ್ತಿದೆ.ಇದೀಗ ಕಣ್ಣಿನ ಆಸ್ಪತ್ರೆಯ ಮೂಲಕ ರೋಟರಿ ಸಂಸ್ಥೆ ಪುತ್ತೂರಿನ ಜನತೆಯ ಆರೋಗ್ಯದಲ್ಲಿ ಮತ್ತಷ್ಟು ಉತ್ತಮ ಕಾಳಜಿ ವಹಿಸುವ ಮೂಲಕ ಮಾದರಿ ಕಾರ್ಯಕ್ರಮ ನೀಡಿದೆ.ಇದಕ್ಕಾಗಿ ನಾನು ರೋಟರಿ ಸಂಸ್ಥೆಗೆ ಅಭಿನಂದಿಸಿ ಶುಭ ಹಾರೈಸುತ್ತೇನೆ ಎಂದರು.ಪುತ್ತೂರಿನ ಜನತೆ ರೋಟರಿ ಸಂಸ್ಥೆಯಿಂದ ಇನ್ನಷ್ಟು ಸೇವೆಯ ನಿರೀಕ್ಷೆಯಲ್ಲಿದ್ದಾರೆ.ಈ ನಿಟ್ಟಿನಲ್ಲಿ ಆಸ್ಪತ್ರೆಗಳು ಕಮರ್ಷಿಯಲ್ ಅಗಿ ಪರಿವರ್ತನೆ ಆಗದಿರಲಿ.ಇದರ ಜೊತೆಗೆ ಸರಕಾರಿ ಆಸ್ಪತ್ರೆಯಲ್ಲಿ ಹಲವಾರು ಮಂದಿ ರೋಗಿಗಳಿಗೆ ಬೆಡ್‌ಗಳ ಕೊರತೆ ಇದೆ.ಇಂತಹ ಸಂದರ್ಭದಲ್ಲಿ ರೋಟರಿಯಿಂದ ಬಡವರಿಗೆ ಸಹಕಾರಿಯಾಗುಂತಹ ಸಹಕಾರ ಸಿಗುವಂತಾಗಲಿ.ಈಗಾಗಲೇ ನೀವು ಸಾಕಷ್ಟು ಕೊಡುಗೆ ನೀಡಿದ್ದೀರಿ.ಇನ್ನು ಕೂಡಾ ನಿಮ್ಮ ಸಹಕಾರವನ್ನು ನಿರೀಕ್ಷೆ ಮಾಡುತ್ತೇವೆ ಎಂದ ಶಾಸಕರು, ಉದ್ಘಾ

ಟನೆಗೊಂಡ ಕಣ್ಣಿನ ಆಸ್ಪತ್ರೆ ಒಳ್ಳೆಯ ರೀತಿಯಲ್ಲಿ ನಡೆಯಲಿ, ಸಾರ್ವಜನಿಕರಿಗೆ ಸಹಕಾರ ಸಿಗಲಿ.ರೋಗಿಗಳು ಕಡಿಮೆ ಆಗಲಿ ಎಂದು ಆಶಿಸಿದರು.


ಸಮಾಜ ಸೇವೆಯೇ ರೋಟರಿ ಸಂಸ್ಥೆಯ ಸ್ಪಷ್ಟ ಉದ್ಧೇಶ-ಮಹೇಶ್ ಕೊಟ್ಬಾಗಿ:
ರೋಟರಿ ಕಣ್ಣಿನ ಆಸ್ಪತ್ರೆಯನ್ನು ಉದ್ಘಾಟಿಸಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಅಂತರ್ರಾಷ್ಟ್ರೀಯ ನಿರ್ದೇಶಕ ಡಾ.ಮಹೇಶ್ ಕೊಟ್ಬಾಗಿ ಅವರು ಮಾತನಾಡಿ,
ಸಮಾಜ ಸೇವೆಯ ಉದ್ದೇಶ ಸ್ಪಷ್ಟವಾಗಿದ್ದರೆ, ಯೋಜನೆಗಳು ನಿಖರವಾಗಿದ್ದರೆ ದಾನಿಗಳ ಸಹಾಯ ಸದಾ ಇರುತ್ತದೆ.ಇದೇ ಮನೋಭಾವದಲ್ಲಿ ರೋಟರಿಯು ಜಗತ್ತಿನೆಲ್ಲೆಡೆ ಕಣ್ಣು, ಕ್ಯಾನ್ಸರ್ ಆಸ್ಪತ್ರೆ, ಹಾಗೂ ಡಯಾಲಿಸಿಸ್ ಕೇಂದ್ರಗಳನ್ನು ಸೇವಾ ನೆಲೆಯಲ್ಲಿ ತೆರೆಯುತ್ತಿದೆ.ಈ ರೀತಿಯ ಸೇವಾ ಕಾರ್ಯಗಳಿಗೆ ರೋಟರಿ ಸದಸ್ಯರೇ ತಮ್ಮ ಸಂಪಾದನೆಯ ಭಾಗವನ್ನು ನೀಡಿ, ಸಹಕರಿಸುತ್ತಿದ್ದಾರೆ ಎಂದರು.


ರೋಟರಿ ಚಿರಂತನವಾಗಿರುವ ಸೇವೆಗೆ ಮುಡಿಪಾಗಿಡುವ ಸಂಸ್ಥೆ-ಪ್ರಕಾಶ್ ಕಾರಂತ್:
ಕಣ್ಣಿನ ಆಸ್ಪತ್ರೆಯಲ್ಲಿನ ಮೊಡ್ಯುಲರ್ ಒಟಿಯನ್ನು ಉದ್ಘಾಟಿಸಿದ ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಅವರು ಮಾತನಾಡಿ, ರೋಟರಿ ಕ್ಲಬ್ ಪುತ್ತೂರು ಹಲವು ಯೋಜನೆಗಳನ್ನು ಹಾಕಿ ಯಶಸ್ವಿಯಾಗಿದೆ. ಪುತ್ತೂರಿನಲ್ಲಿ ಮೊತ್ತ ಮೊದಲ ಬಾರಿಗೆ ಬ್ಲಡ್ ಬ್ಯಾಂಕ್ ಆರಂಭ ಮಾಡಿ ನಂತರ ರಕ್ತ ಪ್ರತ್ಯೇಕಿಸಿ ಬ್ಲಡ್ ಬ್ಯಾಂಕ್ ಉನ್ನತೀಕರಣಗೊಳಿಸುವ ಮೂಲಕ ಉತ್ತಮ ಸೇವೆ ನೀಡಲಾಗಿದೆ. ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಯಂತ್ರಗಳು ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ರೋಟರಿಗೆ ಶ್ಲಾಘನೀಯವಾಗಿದೆ.ಇವತ್ತು ಎಷ್ಟೋ ಸರಕಾರಿ ಆಸ್ಪತ್ರೆಗಳಿಗೆ ಪ್ರಾಜೆಕ್ಟ್‌ನಲ್ಲಿ ಯಂತ್ರಗಳನ್ನು ಕೊಡಲಾಗಿದೆ. ಹೆಚ್ಚಿನದು ಧರ್ಮಾರ್ಥವಾಗಿ ಒದಗಿ ಬರುತ್ತವೆ.ಆದರೆ ರೋಟರಿ ಸದಸ್ಯರು ದತ್ತಿ ನಿಽಗೆ ಹೆಚ್ಚಿನ ಹಣ ಒದಗಿಸುತ್ತೇವೆ ಎಂದರು. ಪುತ್ತೂರಿನ ರೋಟರಿ ಕ್ಲಬ್ ಅನೇಕ ಜಿಲ್ಲಾ ಕಾರ್ಯಕ್ರಮ ಆಯೋಜಿಸಿದ್ದೀರಿ. ಸದಸ್ಯತನದಲ್ಲೂ, ದತ್ತಿನಿಽಗೆ ಸಹಾಯ ಹಸ್ತ ಚಾಚುವಲ್ಲಿಯೂ ಪುತ್ತೂರಿನ ಎಲ್ಲಾ ಏಳು ರೋಟರಿ ಸಂಸ್ಥೆಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.ಅದಕ್ಕಾಗಿ ವಿಶೇಷ ಕೃತಜ್ಞತಾ ಸಭೆ ಜೂ.೨೪ರಂದು ಬೆಂಜನಪದವಿನಲ್ಲಿ ನಡೆಯಲಿದ್ದು, ಪ್ರತಿಯೊಬ್ಬರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕಾರಂತ್ ವಿನಂತಿಸಿದರು.


ಸಮಾಜ ಸೇವೆಯಲ್ಲಿ ಕನಸುಗಳು ಬಹಳ ಮುಖ್ಯ-ರವಿ ವಡ್ಲಮುನಿ:
ರೋಟರಿ ಕಣ್ಣಿನ ಆಸ್ಪತ್ರೆಯ ಡೇ ಕೇರ್ ಸೆಂಟರ್ ಅನ್ನು ಉದ್ಘಾಟಿಸಿದ ಅಂತರ್ರಾಷ್ಟ್ರೀಯ ರೋಟರಿಯ ಚೇರ್‌ಮ್ಯಾನ್ ರವಿ ವಡ್ಲಮನಿ ಅವರು ಮಾತನಾಡಿ, ಸಮಾಜ ಸೇವೆಯಲ್ಲಿ ಕನಸುಗಳು ಬಹಳ ಮುಖ್ಯ.ದೊಡ್ಡ ಜನ ಸಮುದಾಯವನ್ನು ತಲುಪುವ ಸಾರ್ವಕಾಲಿಕ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ದೊಡ್ಡ ಸವಾಲು ಆಗುವುದಿಲ್ಲ.ಕಂಪೆನಿಗಳು ತಮ್ಮ ಸಾಮಾಜಿಕ ನಿಽಯ ಮೂಲಕ ಸಹಕಾರ ಮಾಡಲು ಸದಾ ಸಿದ್ದರಿದ್ದು, ರೋಟರಿ ಮೂಲಕ ಇದು ಸಾಧ್ಯವಾಗುತ್ತದೆ ಎಂದರು.


ರೋಟರಿ ಕಾರ್ಯಕ್ರಮ ಇನ್ನಷ್ಟು ಜನಮನ ತಟ್ಟುವಂತಾಗಲಿ-ಡಾ.ಕೆ.ಸೂರ‍್ಯನಾರಾಯಣ:
ಜಿಲ್ಲಾ ರೋಟರಿ -ಂಡೇಶನ್ ಚೇರ್‌ಮ್ಯಾನ್ ಡಾ.ಕೆ.ಸೂರ್ಯನಾರಾಯಣ ಅವರು ಮಾತನಾಡಿ, ನಮ್ಮ ಪುತ್ತೂರಿಗೆ ಡ್ರೀಮ್ ಆ- ಕಾಸ್ಟ್ ಅಗತ್ಯವಿತ್ತು.ಇದಕ್ಕೆ ಹಲವಾರು ಮಂದಿ ಮೇಜರ್ ಡೋನರ್ ಸಿಕ್ಕಿದ್ದಾರೆ.ಈ ನಿಟ್ಟಿನಲ್ಲಿ ಮೇಜರ್ ಡೋನರ್ ಡಾ.ಶ್ರೀಪ್ರಕಾಶ್ ಅವರಿಗೆ ಮೇಜರ್ ಪಿನ್ ನೀಡಿದ ಅವರು ಇನ್ನೋರ್ವ ಮೇಜರ್ ಡೋನರ್ ಡಾ.ಶ್ರೀಪತಿ ರಾವ್ ದಂಪತಿಯನ್ನು ಗೌರವಿಸಿದರು.ಈ ವರ್ಷ ೭ ಗ್ಲೋಬಲ್ ಗ್ರ್ಯಾಂಟ್ ಸಿಕ್ಕಿದ್ದು, ದ.ಕ. ಜಿಲ್ಲೆಗೆ ರೂ.೩.೫೦ ಕೋಟಿಯ ಗ್ರ್ಯಾಂಟ್ ಆಗಿದೆ.ಅದರಲ್ಲೂ ಪುತ್ತೂರು ಮಂಗಳೂರು ಭಾಗದಲ್ಲೇ ಈ ಗ್ರ್ಯಾಂಟ್ ಲಭ್ಯವಾಗಿದೆ. ಈ ನಿಟ್ಟಿನಲ್ಲಿ ರೋಟರಿ ಕಾರ್ಯಕ್ರಮ ಇನ್ನಷ್ಟು ಜನಮನ ತಟ್ಟುವಂತಾಗಲಿ ಎಂದರು.


ಕಣ್ಣಿನ ಯಾವುದೇ ಕಾಯಿಲೆಗಳಿದ್ದರೂ ಚಿಕಿತ್ಸೆ ನೀಡುವ ಚಿಂತನೆ-ಡಾ.ಕೃಷ್ಣಪ್ರಸಾದ್:
ಪ್ರಸಾದ್ ನೇತ್ರಾಲಯದ ಡಾ.ಕೃಷ್ಣಪ್ರಸಾದ್ ಕೆ.ರವರು ಮಾತನಾಡಿ, ರೋಟರಿ ಸಂಸ್ಥೆಯ ಮೂಲಕ ಜನರ ದೃಷ್ಟಿಗೆ ದಾರಿದೀಪವಾಗಲು ನನಗೆ ಅವಕಾಶ ಲಭ್ಯವಾಗಿದೆ.ಸರಕಾರದಿಂದಲೂ ದೃಷ್ಟಿಗೆ ಸಂಬಂಽಸಿ ಪಾಲಿಸಿ ಇತ್ತು.ಆದರೆ ಇವತ್ತು ಪುತ್ತೂರಿನಲ್ಲಿ ರೋಟರಿ ಸಂಸ್ಥೆ ಬಡ ಜನರ ಸೇವೆಗೆ ಮುಂದಾಗಿರುವುದು ಶ್ಲಾಘನೀಯವಾಗಿದೆ.ಇವತ್ತು ಉದ್ಘಾಟನೆಗೊಂಡ ಕಣ್ಣಿನ ಅಸ್ಪತ್ರೆಯಲ್ಲಿ ಕೇವಲ ಕಣ್ಣಿನ ಪೊರೆ ಚಿಕಿತ್ಸೆ ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಕಣ್ಣಿಗೆ ಸಂಬಂಽಸಿದ ಯಾವುದೇ ಕಾಯಿಲೆಗಳಿದ್ದರೂ ಅದಕ್ಕೂ ಸಹ ಉತ್ತಮ ಚಿಕಿತ್ಸೆ ನೀಡಲು ರೋಟರಿ ಸಂಸ್ಥೆಯ ಜೊತೆಯಲ್ಲಿ ಆದಷ್ಟು ಅತ್ಯುನ್ನತ ಉಪಕರಣಗಳನ್ನು ರೋಟರಿ ಆಸ್ಪತ್ರೆಗೆ ತಂದು ಜನರಿಗೆ ಸೇವೆಯನ್ನು ನೀಡಲು ನಿಮ್ಮೆಲ್ಲರ ಸಹಕಾರ ಬೇಕು,ಇದರ ಜೊತೆಗೆ ಐ ಬ್ಯಾಂಕ್ ಕೂಡಾ ಮುಂದೆ ಅಗತ್ಯ ಬೀಳುವ ಸಾಧ್ಯತೆ ಇದೆ.ಇದಕ್ಕೂ ರೋಟರಿ ಸಂಸ್ಥೆ ಸಿದ್ಧವಾಗಬೇಕಾಗಿದೆ ಎಂದು ಹೇಳಿದರು.
ಎರಡು ವರ್ಷದ ಹಿಂದಿನ ಕನಸು ನನಸು-ಎ.ಜೆ ರೈ: ರೋಟರಿ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಎ.ಜಗಜೀವನ್‌ದಾಸ್ ರೈರವರು ಮಾತನಾಡಿ, ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಉಮಾನಾಥ್ ಪಿ.ಬಿ.ಅವರು ಎರಡು ವರ್ಷದ ಹಿಂದೆ ಕಣ್ಣಿನ ಆಸ್ಪತ್ರೆಯ ಕನಸು ಕಂಡಿದ್ದು ಅದು ಇವತ್ತು ಸಾಕಾರಗೊಂಡಿದೆ.ಪುತ್ತೂರಿನ ರೋಟರಿ ಕ್ಲಬ್ ಮುಖ್ಯವಾಗಿ ಮೆಡಿಕಲ್ ಸೇವೆಯಲ್ಲಿ ಮುಂದಿರುವುದು ಇನ್ನೂ ಹೆಚ್ಚು ಸೇವೆ, ಸಹಕಾರ ಸಿಗುವಂತಾಗಲಿ ಎಂದರು.


ಸನ್ಮಾನ:
ರೋಟರಿ ಅಂತರ್ರಾಷ್ಟ್ರೀಯ ನಿರ್ದೇಶಕ ಮಹೇಶ್ ಕೊಟ್ಬಾಗಿ, ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್, ಅಂತರ್ರಾಷ್ಟ್ರೀಯ ರೋಟರಿಯ ಚೇರ್‌ಮ್ಯಾನ್ ರವಿ ವಡ್ಲಮನಿ, ಡೇ ಕೇರ್ ಸೆಂಟರ್ ಪ್ರಾಯೋಜಕಿ ಸುಧಾ ಶೆಣೈ, ಪ್ರಾಜೆಕ್ಟ್ ಪಾಲುದಾರ ಪ್ರಸಾದ್ ನೇತ್ರಾಲಯದ ಡಾ.ಕೃಷ್ಣಪ್ರಸಾದ್ ಕೆ., ಶಾಶ್ವತ ಯೋಜನೆಗಳಾದ ಬ್ಲಡ್ ಬ್ಯಾಂಕ್, ಡಯಾಲಿಸಿಸ್ ಕೇಂದ್ರ ಇದೀಗ ಕಣ್ಣಿನ ಆಸ್ಪತ್ರೆಯ ಯೋಜನೆಗೆ ಬೇಕಾದ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಪ್ರಾಜೆಕ್ಟ್‌ನ ಯಶಸ್ವಿಗೆ ಬಹಳಷ್ಟು ತೊಡಗಿಸಿಕೊಂಡ ಪ್ರಾಜೆಕ್ಟ್ ಚೇರ್‌ಮ್ಯಾನ್ ಡಾ.ಭಾಸ್ಕರ್ ಎಸ್, ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಉಮಾನಾಥ್ ಪಿ.ಬಿ.ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಅಂತರ್ರಾಷ್ಟ್ರೀಯ ರೋಟರಿಯೊಂದಿಗೆ ನಿರಂತರ ಸಂಪರ್ಕ ಹೊಂದುತ್ತಾ ಆಸ್ಪತ್ರೆಗೆ ಬೇಕಾದ ಗ್ಲೋಬಲ್ ಗ್ರ್ಯಾಂಟ್‌ಗೆ ಶ್ರಮಿಸಿದ ರೋಟರಿ ಪುತ್ತೂರು ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ದೀಪಕ್ ಕೆ.ಪಿ.ಅವರನ್ನು ಅವರ ಅನುಪಸ್ಥಿತಿಯಲ್ಲಿ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಪ್ರಾಜೆಕ್ಟ್‌ಗೆ ಸಹಕರಿಸಿದ ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಪ್ರಶಾಂತ್ ಶೆಣೈ, ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ, ಆನಂದ್ ಭಟ್, ಡಾ.ಎಮ್.ಎಸ್ ಭಟ್, ಡಾ|ಹರ್ಷಕುಮಾರ್ ರೈ ಮಾಡಾವು, ವಿನಾಯಕ್ ಕುಡ್ವ ಅವರ ಪರವಾಗಿ ಎಕೆಎಸ್ ವಿಶ್ವಾಸ್ ಶೆಣೈ ಅವರನ್ನು ಗೌರವಿಸಲಾಯಿತು.
ಪ್ರಸಾದ್ ನೇತ್ರಾಲಯದ ಡಾ.ವಿಕ್ರಮ್ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಉಮಾನಾಥ್ ಪಿ.ಬಿ.ಸ್ವಾಗತಿಸಿ, ಕಾರ್ಯದರ್ಶಿ ಡಾ.ಶ್ರೀಪ್ರಕಾಶ್ ವಂದಿಸಿದರು. ಪ್ರೊ.ದತ್ತಾತ್ರೆಯ ರಾವ್ ಪ್ರಾರ್ಥಿಸಿದರು.ರೋಟರಿ ಕ್ಲಬ್ ಪುತ್ತೂರು ಸದಸ್ಯ ವಿ.ಜೆ.-ರ್ನಾಂಡಿಸ್ ಮತ್ತು ಮಾಜಿ ಅಧ್ಯಕ್ಷ ಝೇವಿಯರ್ ಡಿ’ಸೋಜ ಕಾರ್ಯಕ್ರಮ ನಿರೂಪಿಸಿದರು.ರೋಟರಿ ಸದಸ್ಯರಾದ ಪರಮೇಶ್ವರ ಗೌಡ ಮತ್ತು ಸತೀಶ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಸಮಾಜಮುಖಿ ಕಾರ್ಯಗಳು..
ರೋಟರಿ ಬ್ಲಡ್ ಬ್ಯಾಂಕ್‌ನಲ್ಲಿ ಇಲ್ಲಿನ ತನಕ ೨೨,೧೨೩ ಯುನಿಟ್ ರಕ್ತ ಸಂಗ್ರಹಣೆ ಆಗಿದೆ.ಒಟ್ಟು ೪೬,೫೨೭ ಯುನಿಟ್ ರಕ್ತ ವಿತರಣೆ ಆಗಿದೆ.ಅದೇ ರೀತಿ ಕ್ಯಾನ್ಸರ್ ರೋಗಿಗಳಿಗೆ ಶೇ.೫೦ ದರದಲ್ಲಿ, ತಲಸೀಮಿಯ ರೋಗಿಗಳಿಗೆ ಉಚಿತ, ಸರಕಾರಿ ಆಸ್ಪತ್ರೆಯ ಎಲ್ಲಾ ರೋಗಿಗಳ ಕೇಸ್‌ಗೆ ಸಂಬಂಽಸಿ ಶೇ.೫೦ ರಿಯಾಯಿತಿ, ಹೆಚ್.ಐ.ವಿ.ಕೇಸ್‌ಗಳಿಗೆ ಉಚಿತ ರಕ್ತ ವಿತರಣೆ ಮಾಡಲಾಗುತ್ತಿದೆ.ರೋಟರಿ ಕ್ಲಬ್ ಪುತ್ತೂರು ಡಯಾಲಿಸಿಸ್ ಸೆಂಟರ್‌ನಲ್ಲಿ ೨೦೨೧ರಿಂದ ಇಲ್ಲಿನ ತನಕ ೪೦ ರೋಗಿಗಳಿಗೆ ೩,೬೮೧ ಡಯಾಲಿಸಿಸ್ ಸೇವೆ ಒದಗಿಸಲಾಗಿದೆ ಎಂದು ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಉಮಾನಾಥ್ ಪಿ.ಬಿ ಹೇಳಿದರು.


ಮೆಡಿಕಲ್ ಕಾಲೇಜಿಗೆ ೪ ವರ್ಷ ಬೇಕು
ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜಿಗೆ ನಾನು ಆದ್ಯತೆ ನೀಡುತ್ತಿದ್ದೇನೆ.ಅದು ಆಗಬೇಕಾದರೆ ಕನಿಷ್ಠ ೪ ವರ್ಷ ಬೇಕು.ಒಂದು ವೇಳೆ ಅದರ ಕೆಲಸ ಆರಂಭಗೊಂಡರೆ ೩೦೦ ಬೆಡ್‌ನ ಆಸ್ಪತ್ರೆ ಆಗುತ್ತದೆ.ಆಗ ರೋಗಿಗಳಿಗೆ ಉತ್ತಮ ಚಿಕಿತ್ಸೆಗಳು ಲಭ್ಯವಾಗಲಿದೆ.ಕಟ್ಟಡ ಕಾಮಗಾರಿಗೆ ಮುಂದಿನ ವರ್ಷ ಅನುಮೋದನೆ ಸಿಗುತ್ತದೆ.೩ ವರ್ಷದ ಬಳಿಕ ಅದರ ಕಾರ್ಯಾರಂಭ ನಡೆಯಲಿದೆ.ಆ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಸಹಕಾರ ಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಬಡವರಿಗೆ ಉಚಿತವಾಗಿ ಕಣ್ಣಿನ ಚಿಕಿತ್ಸೆ ನೀಡುವ ಉದ್ದೇಶ..
ನಮ್ಮ ಕನಸಿನ ಪ್ರಾಜೆಕ್ಟ್ ಲೋಕಾರ್ಪಣೆ ಆಗಿದೆ.ಈ ಪ್ರಾಜೆಕ್ಟ್ ಹುಟ್ಟಿಕೊಂಡದ್ದು ಕೋವಿಡ್ ಸಮಯದಲ್ಲಿ. ಆ ಸಮಯದಲ್ಲಿ ಶಸಚಿಕಿತ್ಸೆ ನಡೆಯುತ್ತಿರಲಿಲ್ಲ.ಆದರೆ ಬಹುತೇಕ ಮಂದಿಗೆ ಕಣ್ಣಿನ ಪೊರೆಯಿಂದ ಕುರುಡಾಗುವುದನ್ನು ತಪ್ಪಿಸಲು ಕಣ್ಣಿನ ಪೊರೆ ಶಸಚಿಕಿತ್ಸೆ ಅಗತ್ಯವಿತ್ತು.ಇದು ಸಮಯಕ್ಕೆ ಸರಿಯಾಗಿ ಆಗದೇ ಇದ್ದರೆ ಕಣ್ಣು ಕಾಣಿಸದಂತಾಗುತ್ತದೆ.ಈ ಕುರಿತು ಚಿಂತನೆ ಮಾಡಿದಾಗ ರೋಟರಿಯಿಂದ ಸಣ್ಣ ಅಳಿಲ ಸೇವೆಯಾಗಿ ಈ ಪ್ರಾಜೆಕ್ಟ್‌ಗೆ ಕೈ ಹಾಕಿದ್ದೆವು.ಹಿಂದೆ ರೋಟರಿಯಿಂದ ಪ್ರತಿ ವರ್ಷ ಕಣ್ಣಿನ ತಪಾಸಣೆ ಶಿಬಿರ ನಡೆಸುತ್ತಿದ್ದೆವು.ಇದೀಗ ಇಲ್ಲಿ ಬಡವರಿಗೆ ಉಚಿತವಾಗಿ ಕಣ್ಣಿನ ಪೊರೆ ಶಸಚಿಕಿತ್ಸೆ ಮಾಡಿಕೊಡುವ ಉದ್ದೇಶ ಇಟ್ಟುಕೊಂಡಿದ್ದೇವೆ.ಇದು ಕೂಡಾ ತಂತ್ರಜ್ಞಾನಭರಿತ ಚಿಕಿತ್ಸೆಯಾದ್ದರಿಂದ ಚಿಕಿತ್ಸೆ ಆದ ಗಂಟೆಯೊಳಗೆ ಆಸ್ಪತ್ರೆಯಿಂದ ಬಿಡುಗಡೆಯಾಗಬಹುದು.ಈ ಶಿಬಿರದಲ್ಲಿ ತಪಾಸಣೆ ಮಾಡಿಸಿ ಶಿಫಾರಸಾದವರಿಗೆ ಆಸ್ಪತ್ರೆಯಲ್ಲಿ ಶಸಚಿಕಿತ್ಸೆಗಳನ್ನು ಉಚಿತವಾಗಿ ಮಾಡಲಾಗುತ್ತದೆ.ಆಸ್ಪತ್ರೆಯು ಒಟ್ಟು ೨,೫೦೦ ಚದರ ಅಡಿಯ ವಿಸ್ತೀರ್ಣ ಹೊಂದಿದ್ದು, ರೂ.೨ ಕೋಟಿ ವೆಚ್ಚ ತಗುಲಲಿದೆ.ಈ ಆಸ್ಪತ್ರೆಯಲ್ಲಿ ಕಣ್ಣಿನ ತಪಾಸಣೆ, ಸಮಾಲೋಚನೆ, ನುರಿತ ವೈದ್ಯರ ಮಾರ್ಗದರ್ಶನದಲ್ಲಿ ಡೇ ಕೇರ್ ಟ್ರೀಟ್‌ಮೆಂಟ್,ಕಣ್ಣಿನ ಚಿಕಿತ್ಸೆ ಔಷಽಗಳು ದೊರೆಯುವುದಲ್ಲದೆ ಕನ್ನಡಕಗಳೂ ದೊರೆಯುತ್ತದೆ.ಅತ್ಯಾಧುನಿಕ ಯಂತ್ರಗಳು ಮತ್ತು ತಂತ್ರಜ್ಞಾನ ಬಳಸಿ ಕಣ್ಣಿನ ಪೊರೆ ಚಿಕಿತ್ಸೆ ನೀಡಲಾಗುವುದು-
-ಪಿಡಿಜಿ ಡಾ.ಭಾಸ್ಕರ್ ಎಸ್,
ಪ್ರಾಜೆಕ್ಟ್ ಚೇರ್‌ಮ್ಯಾನ್, ರೋಟರಿ ಕ್ಲಬ್ ಪುತ್ತೂರು ಕಣ್ಣಿನ ಆಸ್ಪತ್ರೆ

ಕಣ್ಣಿನ ಆಸ್ಪತ್ರೆಯ ವಿಶೇಷತೆಗಳು..
-ಸುಮಾರು ರೂ.೨ ಕೋಟಿ ವೆಚ್ಚದಲ್ಲಿ ಕಣ್ಣಿನ ಆಸ್ಪತ್ರೆಯ ನಿರ್ಮಾಣ
-ಹಿರಿಯರಲ್ಲಿ ಕಣ್ಣಿನ ಪೊರೆ ಬಂದು ಅಂಧತ್ವ ಉಂಟಾಗುವುದನ್ನು ನಿವಾರಿಸುವುದಕ್ಕೆ ಅತ್ಯಾಧುನಿಕ ಯಂತ್ರಗಳು ಮತ್ತು ತಂತ್ರಜ್ಞಾನ ಬಳಸಿ ಕ್ಯಾಟರ‍್ಯಾಕ್ಟ್ ಶಸಚಿಕಿತ್ಸೆಯನ್ನು ನಡೆಸಲಾಗುತ್ತಿದೆ.
-ಇದು ರೋಗಿಯು ತ್ವರಿತಗತಿಯಲ್ಲಿ ಗುಣಮುಖರಾಗಲು ಸಾಧ್ಯವಾಗುತ್ತದೆ.
-ಇದರ ಶಸ ಚಿಕಿತ್ಸಾ ಕೊಠಡಿಯನ್ನು ಸ್ಟೈನ್‌ಲೆಸ್ ಸ್ಟೀಲ್‌ನಲ್ಲಿ ಅಳವಡಿಸಲಾಗಿದ್ದು ಇದು ಅತ್ಯುತ್ತುಮ ಸ್ವಚ್ಛತೆಯನ್ನು ಕಾಪಾಡಲು ಸಹಕರಿಸುವುದಾಗಿದೆ.
-ಎಲ್ಲಾ ಯಂತ್ರಗಳು ಆಧುನಿಕ ತಂತ್ರಜ್ಞಾನ ಹೊಂದಿದ್ದು, ಸುಪ್ರಸಿದ್ಧ ತಂತ್ರಜ್ಞಾನ ಹೊಂದಿರುವ ಪ್ರಸಿದ್ಧ ತಯಾರಕರಿಂದ ತರಿಸಲಾಗಿದೆ.
-ಇದರಲ್ಲಿ ಕಣ್ಣಿನ ಪರೀಕ್ಷೆ ಹಾಗೂ ದೃಷ್ಟಿ ಸಂಬಂಧಿತ ರೋಗಗಳ ಪತ್ತೆ, ಕಣ್ಣಿನ ಮೂಲಕ ಬೆಳಕು ಹರಿದು ಹೋಗುವಾಗ ಆಗಬಹುದಾದ ಬೆಳಕಿನ ದಾರಿಯ ವ್ಯತ್ಯಯ ಪತ್ತೆ ಸೇರಿದಂತೆ ಇದು ಅತ್ಯುತ್ತಮ ಆಧುನಿಕ ಯಂತ್ರಗಳನ್ನು ಅಳವಡಿಸಿ, ಕಣ್ಣಿನ ಪರೀಕ್ಷೆ, ಚಿಕಿತ್ಸೆ ಮತ್ತು ಮುಂದಿನ ಆರೋಗ್ಯ ಕಾಪಾಡುವ ಉದ್ಧೇಶವನ್ನು ಹೊಂದಿದೆ.
-ಇದು ಪುತ್ತೂರಿನ ಮಹಾಜನತೆಗೆ ಕಣ್ಣಿನ ಸಮಸ್ಯೆಗಳು ಉಂಟಾದಾಗ ದೂರದ ಊರುಗಳಿಗೆ ಹೋಗದೆ, ರೋಟರಿಯ ಸಹಕಾರದಿಂದ ಪುತ್ತೂರಿನಲ್ಲಿ ಚಿಕಿತ್ಸೆ ಪಡೆದು, ಕಣ್ಣಿನ ಆರೋಗ್ಯ ಕಾಪಾಡುವ ಉದ್ದೇಶ ಹೊಂದಿದೆ.
-ಕಣ್ಣಿನ ತಪಾಸಣೆ-ಸಮಾಲೋಚನೆ-ನುರಿತ ವೈದ್ಯರ ಮಾರ್ಗದರ್ಶನ-ಡೇ ಕೇರ್ ಟ್ರೀಟ್ಮೆಂಟ್ ಹೀಗೆ ಕಣ್ಣಿನ ಯಾವುದೇ ಚಿಕಿತ್ಸೆ ಔಷಽಗಳು ದೊರೆಯುವುದಲ್ಲದೆ, ಕನ್ನಡಕಗಳು ದೊರೆಯುತ್ತದೆ.
-ಈ ನೇತ್ರ ಚಿಕಿತ್ಸಾ ಆಸ್ಪತ್ರೆ ಕರಾವಳಿ ಪ್ರದೇಶದ ಪ್ರಸಿದ್ಧ ಪ್ರಸಾದ್ ನೇತ್ರಾಲಯದ ಸಹಕಾರದೊಂದಿಗೆ ಸೇವೆ ಮಾಡಲಿದೆ.


LEAVE A REPLY

Please enter your comment!
Please enter your name here