ಪುತ್ತೂರು: ಸ್ಕೂಲ್‌ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಇದರ ಆಶಯದಲ್ಲಿ 66ನೇ ನ್ಯಾಷನಲ್ ಸ್ಕೂಲ್‌ಗೇಮ್ಸ್ 2022-23 ಕ್ರೀಡಾಕೂಟದಲ್ಲಿ ಪುತ್ತೂರಿನ ಸಂತ ಫಿಲೋಮಿನ ಪದವಿ ಪೂರ್ವಕಾಲೇಜಿನ 3 ವಿದ್ಯಾರ್ಥಿಗಳು ಕರ್ನಾಟಕವನ್ನು ಪ್ರತಿನಿಧಿಸಿರುತ್ತಾರೆ.
ದ್ವಿತೀಯ ವಿಜ್ಞಾನ ವಿಭಾಗದ ಮನ್ವಿತ್ ಕಣಜಾಲು 19 ಹರೆಯದ ಕೆಳಗಿನ ಬಾಲಕ ರಚೆಸ್ ಪಂದ್ಯದಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.ಇವರು ಮೊಟ್ಟೆತ್ತಡ್ಕ ನಿವಾಸಿ ದಾಮೋದರ ಕಣಜಾಲು ಮತ್ತು ರಶ್ಮಿ ಪಿ ಎಸ್ ದಂಪತಿಗಳ ಪುತ್ರ ಇವರಿಗೆ ಸತ್ಯ ಪ್ರಸಾದ್ ಕೋಟೆ,ಅರವಿಂದ ಶಾಸ್ತ್ರಿ ಮತ್ತು ಜಿ ಎಮ್ ಸ್ಯ್ಟಾನಿ ಜಿ ಎ ತರಬೇತಿ ನೀಡಿರುತ್ತಾರೆ.
ದ್ವಿತೀಯ ವಿಜ್ಞಾನ ವಿಭಾಗದ ತೃಪ್ತಿ ಎನ್ 19 ಹರೆಯದ ಕೆಳಗಿನ ಬಾಲಕಿಯರಯೋಗ ಸ್ಪರ್ಧೆಯಲ್ಲಿ 7 ಸ್ಥಾನವನ್ನು ಪಡೆದುಕೊಂಡಿರುತ್ತಾರೆ ನವೀನ್ ಬಿ ಕೈಯೂರು ತರಬೇತಿ ನೀಡಿರುತ್ತಾರೆ.ಇವರು ಬೆಳ್ಳಾರೆ ನಿವಾಸಿ ಐತ್ತಪ್ಪ ನಾಯ್ಕ ಮತ್ತು ಪದ್ಮಲ ಕುಮಾರಿ ದಂಪತಿಗಳ ಪುತ್ರಿ.
ದ್ವಿತೀಯ ವಾಣಿಜ್ಯ ವಿಭಾಗದ ವರ್ಷಾ 19 ರ ಹರೆಯದ ಕೆಳಗಿನ ಬಾಲಕಿಯರ ಅಥ್ಲೆಟಿಕ್ ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ 7ನೇ ಸ್ಥಾನವನ್ನು ಪಡೆದುಕೊಂಡಿರುತ್ತಾರೆ ಇವರು ಪಾಂಗ್ಲಾಯಿ ನಿವಾಸಿ ಸುಂದರಗೌಡ ಮತ್ತು ವಾರಿಜ ದಂಪತಿಗಳ ಪುತ್ರಿ.
ಕಾಲೇಜಿನ ಪ್ರಾಂಶುಪಾಲ ರೆ.ಫಾ ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.ದೈಹಿಕ ಶಿಕ್ಷಣ ನಿರ್ದೇಶಕ ಎಲಿಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.