ಸಿಂಗಾರ ಆರ್ಟ್ಸ್ ಶುಭಾರಂಭ

0

ಪುತ್ತೂರು : ಶಶಿಧರ್ ನೆಲ್ಲಿಕಟ್ಟೆ ಇವರ ಮಾಲೀಕತ್ವದ ಶಬರಿ ಆರ್ಟ್ಸ್ ಇಲ್ಲಿ ಉದ್ಯೋಗಿಯಾಗಿದ್ದ ,ಪೈಟಿಂಗ್ ಕಾರ್ಯದಲಿ ಸುಮಾರು 17 ವರುಷಗಳ ಅನುಭವ ಹೊಂದಿರುವ ಉಪ್ಪಿನಂಗಡಿ ಇಳಂತಿಲ ನಿವಾಸಿ ಬಾಲಕೃಷ್ಣ ಇವರ ಮಾಲೀಕತ್ವದ , ಸಿಂಗಾರ ಆರ್ಟ್ಸ್ ಜೂ.21 ರಂದು ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಭಾಭವನ ಸಂಕೀರ್ಣದಲ್ಲಿ ಶುಭಾರಂಭಗೊಂಡಿತು.


ಪುರೋಹಿತ ಉದಯ್ ಭಟ್ ಇವರು ಧಾರ್ಮಿಕ ಕೈಂಕರ್ಯ ನೆರವೇರಿಸಿದರು.
ಮಾಲೀಕರ ತಂದೆ ತಾಯಿ ದೇಜಮ್ಮ ಐತ್ತಪ್ಪ ಕುಂಬಾರ ಜೊತೆಯಾಗಿ ದೀಪ ಪ್ರಜ್ವಲನೆ ಮಾಡಿ ಶುಭಹಾರೈಸಿದರು.
ಶ್ರೀ ದೇವತಾ ಸಮಿತಿ ಇದರ ಅಧ್ಯಕ್ಷ ಎನ್ ಸುಧಾಕರ ಶೆಟ್ಟಿ ಮಾತನಾಡಿ , ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಆರಂಭಗೊಂಡಿರುವ ಈ ಹೊಸ ವ್ಯವಹಾರವೂ ,ಅತ್ಯುತ್ತಮ ರೀತಿಯ ಸೇವೆ ಮೂಲಕ ಅಭಿವೃದ್ಧಿ ಪಥ ಕಾಣಲೆಂದು ಹರಸಿದರು. ಮಾಜಿ ಪುರಸಭಾ ಅಧ್ಯಕ್ಷ ರಾಜೇಶ್ ಬನ್ನೂರು , ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮಚಂದ್ರ ಭಟ್ ,ಐತ್ತಪ್ಪ ನಾಯ್ಕ , ಮಾಜಿ ಸದಸ್ಯ ಯು.ಪಿ.ರಾಮಕೃಷ್ಣ , ಮೋಹನ್ ಗ್ಯಾರೇಜ್ ಮಾಲೀಕ ಸುರೇಂದ್ರ ,ಕೆನರಾ ಬ್ಯಾಂಕ್ ಉದ್ಯೋಗಿ ಕುಸುಮ ನಾಯ್ಕ ,ಸುಬ್ಬಣ್ಣ ಕೃಷ್ಣ ನಗರ ,ಚಂದ್ರಶೇಖರ್ ಚಂದನ್ ಆರ್ಟ್ಸ್ ,ರಾಜೇಶ್ ಸೀಮಾ , ಪುತ್ತೂರು ಲ್ಯಾಬ್ ನ ನೋಯೆಲ್ ಡಿ ಸೋಜಾ , ಹರ್ಷಿತಾ ರಾಜೇಶ್ ಬೆಜ್ಜಂಗಳ ದಂಪತಿ ,ಮೋನಪ್ಪ ಕುಂಬಾರ ಶರವೂರು ,ಚಂದ್ರಕ್ಷ ಎನ್ಮಾಡಿ ,ಕಾಂತಪ್ಪ ಎನ್ಮಾಡಿ ಹಾಗೂ ಗಂಗಾಧರ ಎನ್ಮಾಡಿ ,ಮನೋಹರ್ ಶಬರಿ , ಲಕ್ಷ್ಮೀ ಡೀಕಯ್ಯ ದಂಪತಿ ಎನ್ಮಾಡಿ ಸಹಿತ ಹಲವು ಅತಿಥಿಗಳು ಉಪಸ್ಥಿತರಿದ್ದರು.

ಗುರು ಕಾಣಿಕೆ :
13 ವರುಷಗಳ ಕಾಲ ಉದ್ಯೋಗ ನೀಡಿ , ಕೆಲಸ ಕಾರ್ಯಗಳ ಬಗ್ಗೆ ತರಬೇತಿ ಕೊಟ್ಟು ,ಇದೀಗ ಸ್ವ ಉದ್ಯಮ ಆರಂಭಿಸುವಲ್ಲೂ ಧೈರ್ಯ ತುಂಬಿ , ಪ್ರೋತ್ಸಾಹಿಸುತ್ತಿರುವ ಮಾಲೀಕ ಶಶಿಧರ್ ನೆಲ್ಲಿಕಟ್ಟೆ ಇವರಿಗೆ , ನೂತನ ಸಂಸ್ಥೆ ಮಾಲೀಕ ಬಾಲ‍ಕೃಷ್ಣ ಇಳಂತಿಲ ಶ್ರೀ ಮಹಾಲಿಂಗೇಶ್ವರ ದೇವರ ವಿಗ್ರಹ ಕಾಣಿಕೆ ನೀಡಿ ,ವಂದಿಸಿದರು.

ಕಂಪ್ಯೂಟರೈಸ್ಡ್ ಸ್ಟಿಕ್ಕರ್ ,ಥರ್ಮಕೋಲ್ ವರ್ಕ್ ,ಎಲ್ಲಾ ಬಗೆಯ ಫಲಕ , ನಂಬರ್ ಪ್ಲೇಟ್ಸ್ , ಬ್ಯಾನರ್ ವರ್ಕ್ ,ಸ್ರೀನ್ ಪ್ರಿಂಟ್ ಮತ್ತು ವಾಲ್ ಆರ್ಟ್‌ ಹಾಗೂ ಕಲರ್ ಜೆರಾಕ್ಸ್ ಮೊದಲಾದ ಸೇವೆಯೂ ಸ್ಪರ್ಧಾತ್ಮಕ ದರದಲ್ಲಿ ಸಿಗಲಿದ್ದು , ಎಲ್ಲರೂ ಸಹಕಾರ ನೀಡಿ.
ಬಾಲಕೃಷ್ಣ ಇಳಂತಿಲ.
ಮೊ.8971921031

LEAVE A REPLY

Please enter your comment!
Please enter your name here