ಪುತ್ತೂರು: ಆನಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2023-24ನೇ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿಮಂಡಲವನ್ನು ರಚಿಸಲಾಯಿತು. ಪ್ರಜಾಪ್ರಭುತ್ವ ಮಾದರಿಯ ಮತದಾನದಲ್ಲಿ ಶಾಲಾ ನಾಯಕನಾಗಿ ಶರತ್ ಬಿ. 7ನೇ, ಉಪನಾಯಕನಾಗಿ ಕೆ. ಅಶ್ವಿತ್ ನಾಯಕ್ 8ನೇ ತರಗತಿ ಆಯ್ಕೆಯಾದರು.
ಶಾಲಾ ಸಂಸತ್ತಿನ ಇತರ ಸಚಿವರನ್ನು ಆಯ್ಕೆ ಮಾಡಲಾಯಿತು. ಶಿಕ್ಷಣ ಮಂತ್ರಿಯಾಗಿ ಡಿಲೇಶ್ 7ನೇ, ಹಣಕಾಸು ಮಂತ್ರಿಯಾಗಿ ದಿವ್ಯ 6ನೇ, ಆರೋಗ್ಯ ಮಂತ್ರಿಯಾಗಿ ಪ್ರೀತಿ 7ನೇ, ಆಹಾರ ಮಂತ್ರಿಯಾಗಿ ಧನುಷ್ 7ನೇ, ಕ್ರೀಡಾ ಮಂತ್ರಿಯಾಗಿ ಲಿತಿಕಾ 7ನೇ, ಗೃಹಮಂತ್ರಿಯಾಗಿ ನವನೀತ್ 7ನೇ, ನೀರಾವರಿ ಮಂತ್ರಿಯಾಗಿ ಹಿತೇಶ್ 7ನೇ, ವಾರ್ತಾಮಂತ್ರಿಯಾಗಿ ಕೃತಿ 6ನೇ, ಸ್ವಚ್ಛತಾ ಮಂತ್ರಿಯಾಗಿ ಪ್ರಾಪ್ತಿ 7ನೇ, ಸಾಂಸ್ಕೃತಿಕ ಮಂತ್ರಿಯಾಗಿ ಪ್ರೀತಿಕಾ 7ನೇ, ಗ್ರಂಥಾಲಯ ಮಂತ್ರಿಯಾಗಿ ಕೃತಿಕಾ 6ನೇ, ತೋಟಗಾರಿಕಾ ಮಂತ್ರಿಯಾಗಿ ರಕ್ಷಿತ್ 7ನೇ, ವಿರೋಧ ಪಕ್ಷದ ನಾಯಕನಾಗಿ ಧನ್ವಿತ್ 6ನೇ, ಆಯ್ಕೆಯಾದರು. ಮುಖ್ಯಶಿಕ್ಷಕಿ ಶುಭಲತಾ ನೇತೃತ್ವದಲ್ಲಿ ನಡೆಯಿತು. ಶಾಲೆಯ ಎಲ್ಲ ಶಿಕ್ಷಕವೃಂದ ಸಹಕರಿಸಿದರು.