




ವಿಟ್ಲ: ಕುಳ ಗ್ರಾಮದ ನೀರಪಳಿಕೆ ಎಂಬಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಿಸಿದ ಕೆ.ಎಸ್.ಆರ್.ಟಿ.ಸಿ ಬಸ್ಸು ತಂಗುದಾಣವನ್ನು ಹಿರಿಯಾರಾದ ವೀರಪ್ಪ ಗೌಡ ಪೆಲತ್ತಿಂಜ,
ಇಡ್ಕಿದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ, ವಿಶ್ವನಾಥ ಗುರ್ಜಿನಡ್ಕ, ಇಲಿಯಾಸ್ ನೀರಪಳಿಕೆ, ನಾರಾಯಣ ಭಟ್ ನೀರಪಳಿಕೆರವರು ದೀಪಬೆಳಗಿಸಿ ಉದ್ಘಾಟಿಸಿದರು.



ಕಾರ್ಯಕ್ರಮದಲ್ಲಿ ಇಡ್ಕಿದು ಸೇವಾಸಹಕಾರಿ ಸಂಘದ ಉಪಾಧ್ಯಕ್ಷ ರಾಮ್‌ಭಟ್ ನೀರಪಳಿಕೆ, ನಿರ್ದೇಶಕರಾದ ಸುಂದರ ಗೌಡ ಪಾಂಡೇಲು, ಸ್ಥಳೀಯರಾದ ಹರೀಶ್ ನೀರಪಳಿಕೆ, ರವಿ ನೀರಪಳಿಕೆ, ಸಂಜೀವ ಪೆಲತ್ತಿಂಜ, ಮುಖೇಶ ಪೆಲತ್ತಿಂಜ, ಚಂದ್ರಹಾಸ ಪೆಲತ್ತಿಂಜ, ದಿನೇಶ ಪೆಲತ್ತಿಂಜ, ಗಿರೀಶ ಪೆಲತ್ತಿಂಜ, ಸುಲೈಮಾನ್ ನೀರಪಳಿಕೆ, ರವೀಂದ್ರ ಮೇಲಾಂಟ ಕಬಕ ಮೊದಲಾದವರು ಉಪಸ್ಥಿತರಿದ್ದರು. ಇಡ್ಕಿದು ಗ್ರಾಮ ಪಂಚಾಯತ್ ಸದಸ್ಯ ಚಿದಾನಂದ ಪೆಲತ್ತಿಂಜ ಕಾರ್ಯಕ್ರಮ ನಿರೂಪಿಸಿದರು.










