ಮ್‌ಪ್ರಸಾದ್ ಮುಖರ್ಜಿ ಬಲಿದಾನ ದಿನ ಕಾರ್ಯಕ್ರಮದಲ್ಲಿ ಗೋಪಾಲಕೃಷ್ಣ ಹೇರಳೆ
ಪುತ್ತೂರು: ಜನಸಂಘದ ಸ್ಥಾಪಕ ಡಾ ಶ್ಯಾಮಪ್ರಸಾದ್ ಮುಖರ್ಜಿಯವರು ಪ್ರಾರಂಭಿಸಿದ ಕಾಶ್ಮೀರ ಉಳಿಸಿ ವಿಚಾರ ಇವತ್ತು ಕೂಡಾ ಪ್ರಸ್ತುತ ಮತ್ತು ಈ ಕಾಲಗಟ್ಟದಲ್ಲಿ ಇದ್ದೇವೆ. ಈ ನಿಟ್ಟಿನಲ್ಲಿ ಪ್ರಥಮ ಬಲಿದಾನ ಯಾವುದಕ್ಕಾಗಿ ಮತ್ತು ಯಾಕಾಗಿ ಆಗಿದೆಯೋ ಆ ಗುರಿಯನ್ನು ತುಲುಪುತ್ತಿದ್ದೇವೆ ಎಂದು ದ.ಕ.ಜಿಲ್ಲಾ ಬಿಜೆಪಿ ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ ಹೇಳಿದರು.
ಜನಸಂಘದ ಸ್ಥಾಪಕ ಡಾ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ 66ನೇ ಬಲಿದಾನ ದಿನದ ಅಂಗವಾಗಿ ಪುತ್ತೂರು ಬಿಜೆಪಿ ಕಚೇರಿಯಲ್ಲಿ ಜೂ.23ರಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜೂನ್.23ರಂದು ಶ್ಯಾಮ್ ಪ್ರಸಾದ್ ಮುಖರ್ಜಿಯವರ ಪುಣ್ಯತಿಥಿ. ಅವರ ಜೀವನ, ಸಾಧನೆ ಹಾಗೂ ಬಲಿದಾನ ನಮ್ಮೆಲ್ಲ ಕಾರ್ಯಕರ್ತರಿಗೆ ಪ್ರೇರಣಾದಾಯಿಯಾಗಿದೆ. ಕಾಂಗ್ರೆಸ್ ಗೆ ಪರ್ಯಾಯವಾದ ರಾಜಕೀಯ ಪಕ್ಷವನ್ನು ಕಟ್ಟಿದವರು ಅವರು. ಭಾರತದ ಏಕತೆಗೆ ಪೂರಕವಲ್ಲದ ಸಂವಿಧಾನದ 370ನೇ ವಿಧಿ ರದ್ದಾಗಬೇಕು ಎಂದು ಹೋರಾಟ ಮಾಡಿದ್ದರು. ಈಗ ಜಮ್ಮು ಕಾಶ್ಮೀರದ ಪರಿಸ್ಥಿತಿ ನೋಡಿದರೆ ಅವರ ಹೋರಾಟದ ಮಹತ್ವ ಏನು ಎಂಬುದು ಗೊತ್ತಾಗುತ್ತದೆ. ಆದರೆ ಇವತ್ತಿಗೂ ಪತ್ತೆಹಚ್ಚಲಾಗದ ರೀತಿಯಲ್ಲಿ ಜೈಲಿನಲ್ಲಿ ಅವರ ಬಲಿದಾನ ಆಗಿದೆ. ಆದರೆ ಅವರ ಬಲಿದಾನ ಯಾವುದಕ್ಕಾಗಿ ಆಗಿದೆ. ಯಾಕಾಗಿ ಆಗಿದೆಯೋ ಆ ಗುರಿಯನ್ನು ನಾವು ಇವತ್ತು ತಲುಪುತ್ತಿದ್ದೇವೆ. ಹಾಗಾಗಿ ನಾವೆಲ್ಲ ಕೂಡಾ ಶ್ಯಾಮಪ್ರಸಾದ್ ಮುಖರ್ಜಿ ಅವರು ಅಡಿಪಾಯ ಹಾಕಿಕೊಟ್ಟ ಸಂಘಟನೆಯ ಮೂಲಕ ಅವರ ವಿಚಾರಗಳನ್ನು ಇನ್ನಷ್ಟು ಜಗತ್ತಿಗೆ ತಿಳಿಸುವ ಕಾರ್ಯ ಮಾಡೋಣ ಎಂದರು.
ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಆಶಾ ತಿಮ್ಮಪ್ಪ ಗೌಡ, ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಯುವರಾಜ್ ಪೆರಿಯತ್ತೋಡಿ, ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ಜಯಶ್ರೀ ಎಸ್ ಶೆಟ್ಟಿ, ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಸದಸ್ಯರಾದ ಗೌರಿ ಬನ್ನೂರು, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಮುಕುಂದ ಬಜತ್ತೂರು, ಅಶೋಕ್ ಕುಮಾರ್ ಹಾರಾಡಿ, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಚಂದ್ರಶೇಖರ್ ರಾವ್ ಬಪ್ಪಳಿಗೆ, ಹರಿಪ್ರಸಾದ್ ಯಾದವ್, ನಾಗೇಶ್ ಟಿ.ಎಸ್, ರಾಜೇಶ್ ಬನ್ನೂರು, ಸುರೇಶ್ ಆಳ್ವ, ಗೋವರ್ಧನ್ ಕಲ್ಲೇಗ, ಪ್ರಕಾಶ್ ಬಲ್ನಾಡು, ಮಂಡಲದ ಉಪಾಧ್ಯಕ್ಷೆ ಉಷಾಚಂದ್ರ ಮುಳಿಯ, ಒಳಮೊಗ್ರು ಪಂಚಾಯತ್ ಸದಸ್ಯ ಮಹೇಶ್, ರೈತ ಮೋರ್ಚಾ ಕಾರ್ಯದರ್ಶಿ ಪುನೀತ್ ಮಾಡತ್ತಾರು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ಪಕ್ಷದ ಆಂತರಿಕ ಸಭೆ ನಡೆಯಿತು.
ಶ್ಯಾಮಪ್ರಸಾದ್ ಮುಖರ್ಜಿಯವರನ್ನು ಮುಗಿಸಲು ಪಿತೂರಿ
ಕಾಶ್ಮೀರ ಉಳಿಸಿ ಹೋರಾಟದ ವಿಚಾರದಲ್ಲಿ ಶ್ಯಾಮಪ್ರಸಾದ್ ಮುಖರ್ಜಿ ಅವರನ್ನು ಕಾಶ್ಮೀರದಲ್ಲಿ ಬಂಧಿಸಿ 45 ದಿವಸ ಕಾರಾಗೃಹದಲ್ಲಿ ಹಾಕಿದ ಸಮಯ ನೆಹರುರವರು ಕಾಶ್ಮೀರಕ್ಕೆ ಪ್ರವಾಸ ಮಾಡಿದ್ದರೂ ಶ್ಯಾಮಪ್ರಸಾದ್ ಮುಖರ್ಜಿಯವರ ಬಗ್ಗೆ ಮಾತನಾಡಿಲ್ಲ. ಹಾಗಾಗಿ ಶ್ಯಾಮಪ್ರಸಾದ್ ಮುಖರ್ಜಿಯವರನ್ನು ಮುಗಿಸಲು ಭಾರಿ ದೊಡ್ಡ ಪಿತೂರಿ ಈ ದೇಶದಲ್ಲಿ ನಡೆದಿತ್ತು.
ಗೋಪಾಲಕೃಷ್ಣ ಹೇರಳೆ, ಬಿಜೆಪಿ ವಿಭಾಗ ಸಹಪ್ರಭಾರಿ