5 ವರುಷಗಳಲ್ಲಿ 5 ಸಾವಿರಕ್ಕೂ ಮಿಕ್ಕಿ ಆಭ್ಯರ್ಥಿಗಳಿಗೆ ” ವಿದ್ಯಾಮಾತಾ” ಮೂಲಕ ಉದ್ಯೋಗ

0

ಇದೀಗ ಕಂಪ್ಯೂಟರ್ , ಅಕೌಂಟಿಂಗ್ ತರಬೇತಿಗಳು ಪ್ರಾರಂಭ…

ಸ್ಪೋಕನ್ ಇಂಗ್ಲೀಷ್ , ಬ್ಯಾಂಕಿಂಗ್ ತರಬೇತಿ ಸಂಪೂರ್ಣ ಉಚಿತ…

ಪುತ್ತೂರು: ವಿದ್ಯೆಯೇ ಸಾಧನೆಗೆ ತೇರು ಎಂಬ ಮಾತಿನಂತೆಯೇ , ವಿದ್ಯಾಮಾತೆಯ ಅನುಗ್ರಹದ ಜತೆಗೆ ವಿದ್ಯಾರ್ಥಿ ಅವಿರತ ಪರಿಶ್ರಮದಿಂದ ತಾನೂ ಬೆಳಗಿ ,ಜಗತ್ತನ್ನೂ ಕೂಡ ಬೆಳಗುವಂತೆ ಮಾಡುವ ಅದ್ಭುತ ಸಾಮರ್ಥ್ಯವೊಂದು ಪ್ರಬಲ ಆಯುಧವಾದ ವಿದ್ಯೆಗೆಯಿದೆ.


ಈ ವಿದ್ಯೆಯ ಬಳಿಕ ಜೀವನ ನಿರ್ವಹಣೆಗಾಗಿ ಉದ್ಯೋಗದ ಹುಡುಕಾಟವೂ ಕೂಡ ಸರ್ವೇಸಾಮಾನ್ಯ. ಆದರೆ ಸರಿಯಾದ ತರಬೇತಿ ಪಡೆದುಕೊಂಡರೆ ಅಲೆದಾಡುವ ಚಿಂತೆ ಎಂದೂ ಬಾರದು.ಅದಕ್ಕಾಗಿಯೇ ಹತ್ತಾರು ಉದ್ಯೋಗ ಮೇಳಗಳು, ನೂರಾರು ಸಂದರ್ಶನ ಮೂಲಕ ಸಾವಿರಾರು ಯುವಕ, ಯುವತಿಯರಿಗೆ ಉದ್ಯೋಗ ಕಲ್ಪಿಸಿಕೊಟ್ಟು , ಬದುಕು ಕಟ್ಟಿಕೊಳ್ಳಲು ದಾರಿದೀಪವಾದ ಹೆಸರಾಂತ ವಿದ್ಯಾಮಾತಾ ಅಕಾಡೆಮಿಯೂ ಎರಡು ವರ್ಷಗಳಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಿ, 90ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸರಕಾರಿ ಮತ್ತು ಸರಕಾರಿ ಸ್ವಾಮ್ಯದ ವಿವಿಧ ನೇಮಕಾತಿಗಳಲ್ಲಿ ಹುದ್ದೆಗಳನ್ನು ಅಲಂಕರಿಸಲು ಪ್ರೇರಣೆಯಾಗಿ , ಅವರ ಭವಿಷ್ಯ ಬೆಳಗುವಲ್ಲಿ ಪ್ರಮುಖ ಪಾತ್ರ ವಹಿಸಿದೆ.


ಇತ್ತೀಚಿನ ದಿನಗಳಲ್ಲಿ ಆಭ್ಯರ್ಥಿಗಳೂ ಉದ್ಯೋಗ ಪಡೆಯುವ ವೇಳೆ , ಎಲ್ಲಾ ಸಂಸ್ಥೆಗಳು ಉದ್ಯೋಗ ಕೌಶಲ್ಯತೆಯನ್ನು ಬಯಸುವುದರಿಂದ ಹಲವಾರು ವಿದ್ಯಾರ್ಥಿಗಳು ಉತ್ತಮ ಉದ್ಯೋಗವನ್ನು ಪಡೆದುಕೊಳ್ಳಲು ವಿಫಲರಾಗುವುದನ್ನು ಕಾಣುತ್ತಿರುತ್ತೇವೆ. ವಿದ್ಯಾಭ್ಯಾಸ ಪೂರ್ಣಗೊಳ್ಳುವುದನ್ನೇ ಕಾಯದೆ ವಿದ್ಯಾಭ್ಯಾಸದ ಜೊತೆಗೆ ಉದ್ಯೋಗ ಕೌಶಲ್ಯತೆ , ಉತ್ತಮ ಇಂಗ್ಲಿಷ್ ಜ್ಞಾನ , ಅಕೌಂಟಿಂಗ್ ಜ್ಞಾನವನ್ನು ವಿವಿಧ ಕೋರ್ಸುಗಳ ಮೂಲಕ ಪಡೆದುಕೊಂಡಲ್ಲಿ ಉತ್ತಮ ಉದ್ಯೋಗವನ್ನು ಪಡೆಯಲು ಸಾಧ್ಯವೆಂಬ ನಿಟ್ಟಿನಲ್ಲಿ ಕಂಪ್ಯೂಟರ್ ,ಅಕೌಂಟಿಂಗ್ ಕೋರ್ಸ್ ಗಳ ಜೊತೆ ಉಚಿತ ಸ್ಪೋಕನ್ ಇಂಗ್ಲೀಷ್, ಬ್ಯಾಂಕಿಂಗ್ ಪರೀಕ್ಷೆಗಳ ತರಬೇತಿಯನ್ನು ವಿದ್ಯಾಮಾತಾ ಅಕಾಡೆಮಿಯು ಆರಂಭಿಸಿದೆ.


ವೃತ್ತಿಪರ ಕೋರ್ಸ್ ಗಳನ್ನು ಮುಗಿಸುವ ಎಲ್ಲಾ ಅಭ್ಯರ್ಥಿಗಳಿಗೆ ನಿರಂತರವಾಗಿ ಉದ್ಯೋಗ ಮಾಹಿತಿಗಳನ್ನು ಒದಗಿಸುವುದರ ಜೊತೆಗೆ ವಿದ್ಯಾಮಾತಾ ಸಂಸ್ಥೆಯ ಜೊತೆಗೆ ಒಡಂಬಡಿಕೆ ಮಾಡಿಕೊಂಡಿರುವ ನೂರಾರು ಕಂಪನಿಗಳಲ್ಲಿ ನೇರ ಉದ್ಯೋಗ ಸಂದರ್ಶನಗಳ ಮೂಲಕ ಉದ್ಯೋಗವನ್ನು ಕಲ್ಪಿಸಿಕೊಡುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ.
ಬೇಸಿಕ್ ಕಂಪ್ಯೂಟರ್ ತರಬೇತಿಗೆ , ಉಚಿತ ಸ್ಪೋಕನ್ ಇಂಗ್ಲೀಷ್ ತರಬೇತಿ , ವಿದ್ಯಾಮಾತಾ ಅಕಾಡೆಮಿಯ ಇನ್ಸ್ಟಿಟ್ಯೂಟ್ ಆಫ್ ಪ್ರಾಕ್ಟಿಕಲ್ ಅಕೌಂಟಿಂಗ್ ಆಂಡ್ ಟ್ಯಾಕ್ಸೇಶನ್ ವಿಭಾಗದಲ್ಲಿ Tally, Advanced Excel, Payroll or Salary Statement, Income Tax, TDS, GST Return Filing, PF,ESI,PT Return Filing, Income Tax Return Filing, Business Taxation, Financial Statements ಇತ್ಯಾದಿ ವೃತ್ತಿಪರ ಕೋರ್ಸ್ ಗಳನ್ನು ಪ್ರಾರಂಭಿಸಲಾಗಿದ್ದು, ಈ ಎಲ್ಲಾ ಕೋರ್ಸುಗಳು ಡಿಪ್ಲೋಮಾ ಇನ್ ಪ್ರಾಕ್ಟಿಕಲ್ ಅಕೌಂಟಿಂಗ್ ಆಂಡ್ ಟ್ಯಾಕ್ಸೇಶನ್ ಮಾನ್ಯತೆಯನ್ನು ಪಡೆದುಕೊಂಡಿದ್ದು, ಸಂಬಂಧಿಸಿದ ಸರ್ಟಿಫಿಕೇಟ್ ಗಳನ್ನು ವಿದ್ಯಾರ್ಥಿಗಳಿಗೆ ನೀಡಿ ನೂರಾರು ಕಂಪನಿಗಳಲ್ಲಿ ಅಕೌಂಟೆಂಟ್, ಹೆಚ್ ಆರ್, ಆಫೀಸ್ ಅಸಿಸ್ಟೆಂಟ್ ಹುದ್ದೆಗಳಿಗೆ ನೇರ ಸಂದರ್ಶನವನ್ನು ನೀಡಲಾಗುತ್ತದೆ. ಸ್ಥಳೀಯ ಸಂಸ್ಥೆಗಳಿಗೂ ಈ ಕೋರ್ಸ್ ಗಳನ್ನು ಪಡೆದುಕೊಂಡು ವೃತ್ತಿಪರರಾಗಿ ತಯಾರಾಗುವ ಅಭ್ಯರ್ಥಿಗಳನ್ನು ಯಾವುದೇ ಶುಲ್ಕವಿಲ್ಲದೆ ಒದಗಿಸಲಾಗುತ್ತದೆ. ಅಕೌಂಟ್ಸ್ ಕೋರ್ಸುಗಳನ್ನು ಪಡೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಕೋರ್ಸುಗಳು ಉಚಿತವಿದ್ದು , ಆಸಕ್ತಿಯುಳ್ಳವರು ವಿದ್ಯಾಮಾತಾ ಅಕಾಡೆಮಿ ಕಚೇರಿ ಇಲ್ಲವೇ 8590773486 , 9620468869 ಸಂಖ್ಯೆ ಮೂಲಕ ಸಂಪರ್ಕಿಸುವಂತೆ ಅಧ್ಯಕ್ಷ ಭಾಗ್ಯೇಶ್ ರೈ ವಿನಂತಿಸಿದ್ದಾರೆ.

ಪಿಯು ಮುಗಿಸಿದ್ದೇನೆ , ಕಳೆದ 2 ವಾರಗಳಿಂದ ಡಿ-ಪ್ಯಾಟ್ ಅಕೌಂಟಿಂಗ್ ಕಲಿಯುತ್ತಿದ್ದೇನೆ. ತುಂಬಾ ಚೆನ್ನಾಗಿ ಉದಾಹರಣೆ ಸಹಿತ ವಿವರಿಸುತ್ತಾರೆ ಇಲ್ಲಿನ ಅದ್ಯಾಪಕರು.

ಫಾತಿಮತ್ ಸಾಯಿಝಾ , ವಿದ್ಯಾರ್ಥಿನಿ.

ನಾನು ಉದ್ಯಮಿ , ಅಕೌಂಟ್ಸ್ ಮಾಡ್ಯೂಲೈಝೆಷನ್ ,ಟ್ಯಾಲಿ ಇಂಪ್ರೂವ್ ಮಾಡಿಕೊಳ್ಳಲು ತರಬೇತಿ ಸೇರಿದ್ದು ,ಮುಂದೆ ವಿದೇಶಕ್ಕೂ ಹೋಗುವ ಆಲೋಚನೆ ಇದೆ.

ಜಯಕಾಂತ್

D-PAT ಹೊಸಬರಿಗೆ ಅಕೌಂಟ್ಸ್ ಬಗ್ಗೆ ಏನೇನೂ ಐಡಿಯಾ ಇರಲ್ಲ. ಕಂಪೆನಿ ಕೆಲಸ ಬಗ್ಗೆಯೂ ಕೂಡಾ. ಇವನ್ನೆಲ್ಲಾ ತರಗತಿಯಲ್ಲಿ ಪ್ರಾಕ್ಟಿಕಲ್ ಆಗಿ ಕಲಿಸುತ್ತೇವೆ.

ಹರ್ಷಿತಾ , ಟ್ರೈನರ್.

ಕಳೆದ 7 ವರುಷಗಳಲ್ಲಿ ಹಲವು ಉದ್ಯೋಗ ಮೇಳ , ಸ್ಪರ್ಧಾತ್ಮಕ ಪರೀಕ್ಷೆ ಮೂಲಕ 90 ಆಭ್ಯರ್ಥಿಗಳು ಸರ್ಕಾರಿ ಕೆಲಸದಲ್ಲಿ , 5 ಸಾವಿರಕ್ಕೂ ಮಿಕ್ಕಿ ಆಭ್ಯರ್ಥಿಗಳು ಖಾಸಗಿಯಲ್ಲೂ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳಲ್ಲಿ ಕೌಶಲ್ಯ , ಸಂವಹನ ಸಮಸ್ಯೆಯಿದೆ. ಟ್ಯಾಲಿ ಕಲಿತರೆ ಕಂಪನಿ ಲೆಕ್ಕಪತ್ರ , ಟಿಡಿಎಸ್ ಕೌಂಟಿಂಗ್ ಮಾಡಲು ಕಷ್ಟ. ಹೆ.ಆರ್ ,ಅಡ್ಮಿನಿಸ್ಟ್ರೇಶನ್ ಮಾಡಿದವರಿಗೂ ಅಕೌಂಟ್ಸ್ ಜ್ಞಾನದ ಬಗ್ಗೆ ಕೇಳುತ್ತಾರೆ. D PAT ಸಿ.ಎ. ಅಂಡರ್ ಕೋರ್ಸ್ ಆಗಿದ್ದು , ದೇಶ ವಿದೇಶದಲ್ಲೂ ಉದ್ಯೋಗ ಪಡೆಯಲು ಸಹಕಾರಿಯಾಗಿದೆ.
ಭಾಗ್ಯೇಶ್ ರೈ
ಅಧ್ಯಕ್ಷರು , ವಿದ್ಯಾಮಾತಾ ಅಕಾಡೆಮಿ.

LEAVE A REPLY

Please enter your comment!
Please enter your name here