ಪುತ್ತೂರಿನ ಎಲ್.ಟಿ ಮುಹಮ್ಮದ್ (ಬಾವುಚ್ಚ) ರವರ ಮೃತದೇಹ ಊರಿಗೆ ತಲುಪಿಸಲು ಸಹಕರಿಸಿದ ಕೆಸಿಎಫ್ ರಿಯಾದ್ ಘಟಕ

0

ಕಳೆದ ವಾರ ರಿಯಾದ್‌ನಲ್ಲಿ ಮೃತಪಟ್ಟ ಪುತ್ತೂರಿನ ಎಲ್.ಟಿ ಮುಹಮ್ಮದ್ (ಬಾವುಚ್ಚ) ಅವರ ಮೃತದೇಹವನ್ನು ಊರಿಗೆ ತಲುಪಿಸುವ ಕಾರ್ಯ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ರಿಯಾದ್ ಝೋನ್ ಸಾಂತ್ವನ ಇಲಾಖೆಯ ನೇತೃತ್ವದಲ್ಲಿ ನಡೆಯಿತು.‌
ಸೌದಿ ಅರೇಬಿಯಾದಲ್ಲಿ ನಿಧನರಾಗುವ ಅನಿವಾಸಿಗಳ ಮೃತದೇಹವನ್ನು ಇಲ್ಲಿ ದಫನ ಮಾಡುವುದು ಅಥವಾ ಊರಿಗೆ ಕೊಂಡೊಯ್ಯುವುದಿದ್ದರೆ ವಲಸೆ ನೀತಿಗೆ ಸಂಬಂಧಿಸಿದ ಹಲವಾರು ದಾಖಲೆ ಪತ್ರಗಳನ್ನು ಸರಿಪಡಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಭಾರತೀಯ ಧೂತವಾಸ ಕೇಂದ್ರ, ಸ್ಥಳೀಯ ಆರೋಗ್ಯ ಇಲಾಖೆ, ಸೌದಿ ವಲಸೆ ಪ್ರಾಧಿಕಾರ, ಪೊಲೀಸ್ ಹಾಗೂ ಕಾರ್ಮಿಕ ಇಲಾಖೆ ಸೇರಿದಂತೆ ವಿವಿಧ ಕಡೆಗಳಿಂದ ಸಿಗಬೇಕಾದ ದಾಖಲೆಗಳನ್ನು ಸರಿಪಡಿಸಲು ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿಯ ಸಾಂತ್ವನ ಇಲಾಖೆಯ ಕನ್ವೀನರ್ ಬಷೀರ್ ತಲಪ್ಪಾಡಿ, ದಮ್ಮಾಮ್ ಝೋನ್ ಸಾಂತ್ವನ ಇಲಾಖೆಯ ಅಧ್ಯಕ್ಷ ಬಾಷಾ ಗಂಗಾವಳಿ, ರಾಷ್ಟ್ರೀಯ ಸಮಿತಿ ನಾಯಕರಾದ ಮುಹಮ್ಮದ್ ಮಲೆಬೆಟ್ಟು, ಹನೀಫ್ ಕಣ್ಣೂರು, ಸಲಾಂ ಹಳೆಯಂಗಡಿ, ಝೋನ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿಲ್ಲೂರು ಮುಂತಾದ ನಾಯಕರ ಸಲಹೆ ಸೂಚನೆಯಂತೆ ಕೆಸಿಎಫ್ ರಿಯಾದ್ ಝೋನ್ ಮುಖಂಡರು ಮುಂಚೂಣಿಯಲ್ಲಿದ್ದು ಕೆಲಸ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಕೆಸಿಎಫ್ ರಿಯಾದ್ ಝೋನ್ ಸಾಂತ್ವನ ಇಲಾಖೆಯ ನಾಯಕರಾದ ಅಶ್ರಫ್ ಏಒಎಸ್, ದಾವೂದ್ ಸಅದಿ, ಫಾರೂಕ್ ಕೊಡಿಪ್ಪಾಡಿ, ಮೃತರ ಸಂಬಂಧಿ ಶಫೀಕ್ ಪುತ್ತೂರು ಮುಂತಾದವರು ಸಹಕರಿಸಿದ್ದರು. ಕೆಸಿಎಫ್ ರಿಯಾದ್ ತಂಡದ ಈ ಸೇವೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೋಝಿಕ್ಕೋಡ್ ವಿಮಾನ ನಿಲ್ದಾಣಕ್ಕೆ ತಲುಪಿದ ಮೃತದೇಹವನ್ನು ಅಲ್ಲಿಂದ ಕೆಸಿಎಫ್ ಆಂಬ್ಯುಲೆನ್ಸ್ ಮೂಲಕ ಪುತ್ತೂರಿಗೆ ತಲುಪಿಸಲಾಗಿದೆ. ವಿಮಾನ ನಿಲ್ದಾಣದಿಂದ ಮೃತದೇಹವನ್ನು ಪುತ್ತೂರಿಗೆ ತಲುಪಿಸಲು ಮೃತರ ಕುಟುಂಬಸ್ಥರು ಹಾಗೂ ಆಂಬ್ಯುಲೆನ್ಸ್ ಚಾಲಕ ದಾವೂದ್ ಸಹಕರಿಸಿದ್ದರು.

LEAVE A REPLY

Please enter your comment!
Please enter your name here