ಪುತ್ತೂರು: ʼಸಾಹಿತ್ಯದ ನಡಿಗೆ ಗ್ರಾಮದ ಕಡೆಗೆʼ ಎಂಬ ಘೋಷ ವಾಕ್ಯದಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಇಲಾಖೆ ಕೊಳ್ತಿಗೆ ಗ್ರಾ.ಪಂ ಸಹಕಾರದಲ್ಲಿ ಚಿಗುರಲೆ ಸಾಹಿತ್ಯ ಬಳಗದ ಸಂಚಾಲಕತ್ವದಲ್ಲಿ ಗ್ರಾಮ ಸಾಹಿತ್ಯ ಸಂಭ್ರಮದ ಆರನೇ ಸರಣಿ ಕಾರ್ಯಕ್ರಮ ಜೂ.24ರಂದು ಕೊಳ್ತಿಗೆ ಷಣ್ಮುಖ ದೇವ ಪ್ರೌಢಶಾಲೆಯಲ್ಲಿ ನಡೆಯಲಿದೆ.
ಷಣ್ಮುಖ ದೇವ ಪ್ರೌಢಶಾಲೆಯ ಅಧ್ಯಕ್ಷ ತೀರ್ಥಾನಂದ ದುಗ್ಗಳ ಉದ್ಘಾಟಿಸುವರು. ಪುತ್ತೂರು ಉಮೇಶ್ ನಾಯಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಗ್ರಾ.ಪಂ ಪಿಡಿಓ ಸುನಿಲ್ ಹೆಚ್ ಟಿ, ಹಿರಿಯ ಕೃಷಿಕ ವಸಂತ್ ಕುಮಾರ್ ರೈ ಭಾಗವಹಿಸಲಿದ್ದಾರೆ.
ಹಿರಿಯ ಸಾಹಿತಿಗಳಾದ ಎಸ್ ಜಿ ಕೃಷ್ಣ ಗಣೇಶ್ ಭಟ್ ಮಾಪಲಮಜಲು, ಹಾ.ಮಾ ಸತೀಶ್, ಪೂರ್ಣಿಮಾ ಪೆರ್ಲಂಪಾಡಿ, ಕುಂಟಿಕಾನ ಲಕ್ಷಣ ಗೌಡ, ಉದಯಗಿರಿ ಭಿರ್ಮುಕಜೆ, ಯುವ ಗಾಯಕ ರವಿಪಾಂಬಾರು ಅವರನ್ನು ಗ್ರಾ.ಪಂ. ವತಿಯಿಂದ ಅಧ್ಯಕ್ಷ ಶ್ಯಾಮ್ ಸುಂದರ್ ರೈ ಅಭಿನಂದಿಸಲಿದ್ದಾರೆ.
ಸಾಹಿತ್ಯಕ್ಕೆ ಕೊಳ್ತಿಗೆ ಗ್ರಾಮದ ಕೊಡುಗೆ ಎಂಬ ವಿಚಾರದಲ್ಲಿ ಉಪನ್ಯಾಸವನ್ನು ಸಾಹಿತ್ಯ ವಿಮರ್ಶಕ ಅಮಲ ಶಿವರಾಮ್ ನಡೆಸಲಿದ್ದಾರೆ. ಕೊಳ್ತಿಗೆ 9 ಶಾಲೆಯ ವಿದ್ಯಾರ್ಥಿಗಳಿಂದ ಬಾಲಕವಿಗೋಷ್ಠಿ, ಬಾಲಕಥಾಗೋಷ್ಠಿ, ಯುವಕವಿಗೋಷ್ಠಿ,ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.