ʼಪಥʼ ಕಿರುಚಿತ್ರಕ್ಕೆ ಸಿನಿಮಾಟೋಗ್ರಫಿ ಅವಾರ್ಡ್

0

ಉಪ್ಪಿನಂಗಡಿ : ಪುತ್ತೂರು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಅಚಲ್ ಉಬರಡ್ಕ ರವರ ನಾಯಕ ನಟನಾಗಿ ಮಾತ್ರವಲ್ಲದೆ ಚಿತ್ರಕಥೆ, ನಿರ್ದೇಶನದಿಂದ ಮೂಡಿ ಬಂದಿರುವ ಕಿರು ಚಿತ್ರ “ಪಥ” ಬಿಡುಗಡೆಗೆ ಮುನ್ನವೇ ರಾಜ್ಯ ಮಟ್ಟದ ಉತ್ತಮ ಛಾಯಾಗ್ರಹಣ ( ಸಿನಿಮಾಟೋಗ್ರಫಿ ಅವಾರ್ಡ್) ಮುಡಿಗೇರಿಸಿಕೊಂಡು ಗಮನ ಸೆಳೆದಿದೆ.


ಯುವ ಜನಾಂಗಕ್ಕೆ ಸಾಮಾಜಿಕ ಬದ್ದತೆಗಳನ್ನು ಮನವರಿಕೆ ಮಾಡಿಕೊಡುವ ಕಥೆಯನ್ನಾಧರಿಸಿದ ʼಪಥʼ ನಾಮಾಂಕಿತ ಕಿರು ಸಿನಿಮಾ ಉಜಿರೆಯ ಎಸ್ ಡಿ ಎಂ ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದ ಕಿರು ಚಲನ ಚಿತ್ರಗಳ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ವಿವಿಧ ಆಯಾಮಾಗಳಲ್ಲಿ ಸ್ಪರ್ಧೆಗಳು ನಡೆದು ಉತ್ತಮ ಸಿನಿಮಾಟೋಗ್ರಫಿ ಅವಾರ್ಡ್ ಮುಡಿಗೇರಿಸಿಕೊಂಡಿದೆ. ಛಾಯಾಗ್ರಹಣ ಮಾಡಿದ ಯೋಶಿತ್ ಬನ್ನೂರು ಪ್ರಶಸ್ತಿ ಸ್ವೀಕರಿಸಿದರು.


ವಿದ್ಯಾರ್ಥಿಗಳೇ ಒಗ್ಗೂಡಿ ಕಿರು ಚಲನ ಚಿತ್ರವನ್ನು ನಿರ್ಮಿಸಿದ್ದು, ಪಥ ಕಿರು ಚಿತ್ರವನ್ನು ಅನ್ಯ ಕ್ಯಾಮರಾ ಬಳಸದೆ ಮೊಬೈಲ್ ಕ್ಯಾಮರಾದಿಂದಲೇ ಚಿತ್ರೀಕರಣ ಹಾಗೂ ಸಂಕಲನ ನಡೆಸಿರುವುದು ವಿಶೇಷತೆಯಾಗಿದೆ. ಪಥ ಕಿರು ಚಿತ್ರವು ಜೂನ್ 24 ರಂದು ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಗೊಳ್ಳಲಿದೆ.


ಈಗಾಗಲೇ ಸಂಘಧ್ಯೇಯ ಎಂಬ ಜನಪ್ರಿಯ ಕಿರು ಚಿತ್ರವನ್ನು ನಿರ್ಮಿಸಿದ ಎಯು ಕ್ರಿಯೇಷನ್ಸ್ ನ ಅಚಲ್ ಉಬರಡ್ಕ ರವರು ಬಳಿಕ ಮೌನ ಎಂಬ ಕಿರು ಚಿತ್ರವನ್ನು ನಿರ್ದೇಶಿಸಿದ್ದು, ಇದೀಗ ಅವರದ್ದೇ ನಿರ್ದೇಶನ ಹಾಗೂ ನಾಯಕ ನಟನಾಗಿ ನಟಿಸಿದ ಪಥ ಕಿರು ಚಿತ್ರದಲ್ಲಿ ವಿದ್ಯಾರ್ಥಿಗಳಾದ ವರ್ಷಿತಾ ಆಚಾರ್ಯ , ಶರತ್ ಕೆ ಎನ್, ನಮನ್ ಶೆಟ್ಟಿ, ಗಗನ್ ದೀಪ್, ಸ್ವಸ್ತಿಕ್ ಶೆಟ್ಟಿ, ಅರಹಂತ ಜೈನ್, ಮಂಜುನಾಥ್ ಜೋಡುಕಲ್ಲು, ಸುರಕ್ಷಾ ಶೆಟ್ಟಿ ನಟಿಸಿದ್ದು, ಸಂಕಲನದಲ್ಲಿ ನಮನ್ ಶೆಟ್ಟಿ, ಸಂಗೀತದಲ್ಲಿ ಅಶ್ವಿನ್ ಬಾಬಣ್ಣ, ಪೋಸ್ಟರ್ ಡಿಸೈನ್ ನಲ್ಲಿ ಕಾರ್ತಿಕ್ ಸಹಕರಿಸಿದ್ದಾರೆ.

LEAVE A REPLY

Please enter your comment!
Please enter your name here