ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ‘ಸಹಜ’- ಸಂಜೀವಿನಿ ಸಮಿತಿ ರಚನೆ

0

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಔಷಧೀಯ ಸಸ್ಯಗಳ ಸಂರಕ್ಷಣೆ, ಸಂವರ್ಧನೆ, ಬಳಕೆ ಹಾಗೂ ಜಾಗೃತಿಯ ಮಹಾತ್ವಾಕಾಂಕ್ಷೆಯ ಯೋಜನೆ ‘ವಿವೇಕ ಸಂಜೀವಿನಿ’ಯ ಶಾಲಾ ಅನುಷ್ಠಾನಿಕ ಭಾಗವಾಗಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆದವು.

ಪ್ರಸಕ್ತ ಶೈಕ್ಷಣಿಕ ವರ್ಷದ ಕಾರ್ಯಕ್ರಮಗಳಾದ ಔಷಧೀಯ ಸಸ್ಯಗಳ ಪೋಷಣಾ ಹಬ್ಬ, ಸಹಜ-ಮೂಲಿಕಾ ವನ ನಿರ್ಮಾಣ, ಕೆದಿಲ ಗ್ರಾಮದಲ್ಲಿ ನಡೆಯಲಿರುವ ಗ್ರಾಮ-ವನ ನಿರ್ಮಾಣದ ಭಾಗವಾಗಿ ಪೋಷಕರನ್ನು ಒಳಗೊಂಡಂತೆ ಸಮಿತಿ ರಚನೆ ಮಾಡಲಾಯಿತು.

ಪೂರ್ವ ಪ್ರಾಥಮಿಕದಿಂದ ಹತ್ತನೇ ವರೆಗಿನ ತರಗತಿಗಳ ಪ್ರತಿ ವಿಭಾಗದಿಂದ ಇಬ್ಬರು ಪೋಷಕರನ್ನು ಸಮಿತಿ ಪ್ರತಿನಿಧಿಗಳಾಗಿ ಆಯ್ಕೆ ಮಾಡಲಾಯಿತು.ಪ್ರಸಕ್ತ ಸಾಲಿನ ಶಾಲಾ ಸಹಜ – ಸಂಜೀವಿನಿ ಯೋಜನೆಯ ಅಧ್ಯಕ್ಷರಾಗಿ ಬಲ್ನಾಡು ಗ್ರಾಮದ ಕೃಷಿಕ ನಾರಾಯಣ ಪೂಜಾರಿ, ಕಾರ್ಯದರ್ಶಿ ಗುರುವಪ್ಪ ನಾಯ್ಕ, ಜತೆ ಕಾರ್ಯದರ್ಶಿ ರೇಖಾ ಆಯ್ಕೆಗೊಂಡರು.ಉಳಿದಂತೆ 32 ಸದಸ್ಯರನ್ನು ಒಳಗೊಂಡ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಶಾಲಾ ಅಧ್ಯಕ್ಷ ರಮೇಶ್ಚಂದ್ರ ನಾಯಕ್‌ ಅಭಿನಂದನೆ ಸಲ್ಲಿಸಿದರು.

LEAVE A REPLY

Please enter your comment!
Please enter your name here