ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಯಲ್ಲಿ ಸ್ಥಾಪಕರ ದಿನಾಚರಣೆ

0

ಪುತ್ತೂರು: ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಯ ಶ್ರೀ ಗೋಪಾಲಕೃಷ್ಣ ಮಂದಿರ ವೇದಿಕೆಯಲ್ಲಿ ಸ್ಥಾಪಕರ ದಿನಾಚರಣೆಯನ್ನು ಜೂ.26ರಂದು ಆಚರಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ ಮಾತನಾಡಿ ಕೃಷ್ಣನು ಗುರುವಿನ ಹಾಗೆ ಹಿಂದೆ ನಿಂತು ನನ್ನನ್ನು ಮುಂದೆ ನಡೆಸುತ್ತಿದ್ದಾನೆ. ಸುಖ ದುಃಖ ಎರಡರಲ್ಲೂ ಭಗವಂತನನ್ನು ನೆನೆಸಿಕೊಳ್ಳಬೇಕು. ಶರೀರಕ್ಕೆ ಜೀವ ಹೇಗೆ ಅಗತ್ಯವೊ ಹಾಗೆಯೇ ಜೀವಕ್ಕೆ ಭಗವಂತನು ಅಗತ್ಯ ಎಂದರು.

ಶಾಲಾ ಸಂಚಾಲಕ ಭಾಸ್ಕರ್ ಆಚಾರ್ ಹಿಂದಾರು ಮಾತನಾಡಿ ಮಕ್ಕಳು ತೇಜಸ್ಸು ವರ್ಚಸ್ಸು ಬೆಳೆಸಿ, ಗಳಿಸಿದ ಜ್ಞಾನ ವನ್ನು ಕುಟುಂಬಕ್ಕೆ ಹಾಗೂ ಸಮಾಜಕ್ಕೆ ಉಪಯೋಗಿಸಬೇಕು. ಇನ್ನೊಬ್ಬರಲ್ಲಿನ ಒಳ್ಳೆತನವನ್ನು ನೋಡಿ ಕಲಿಯಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ ಅವರ ಜನ್ಮ ದಿನದ ಪ್ರಯುಕ್ತ ಶಿಕ್ಷಕರಿಂದ ಹಾಗೂ ಆಡಳಿತ ಮಂಡಳಿ ಸದಸ್ಯರಿಂದ ಹಾರಾರ್ಪಣೆ ಮಾಡಿ ಗೌರವಿಸಲಾಯಿತು.ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಜನ್ಮದಿನದ ಶುಭಾಶಯ ಕೋರಿದರು.

ಈಜು ವಿಭಾಗದಲ್ಲಿ ಅತುತ್ತಮ ಸಾಧನೆ ಮಾಡಿದ ವಿದ್ಯಾಸಂಸ್ಥೆಯ 10ನೇ ತರಗತಿಯ ವಿದ್ಯಾರ್ಥಿ ಅಮನ್ ರಾಜ್ ನನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷರ ಧರ್ಮಪತ್ನಿ ಕುಮಾರಿ, ಕಾರ್ಯದರ್ಶಿ ಕೃಷ್ಣ ಪ್ರಸಾದ್ ಕೆದಿಲಾಯ, ಆಡಳಿತ ಮಂಡಳಿಯ ಸದಸ್ಯರುಗಳಾದ ಎಸ್ ಜಿ ಕೃಷ್ಣ, ಹರೀಶ್ ಪುತ್ತೂರಾಯ, ಪ್ರಸನ್ನ ಎನ್ ಭಟ್, ಅಶೋಕ್ ಕುಮಾರ್ ಪುತ್ತಿಲ, ಶಿಕ್ಷಕ-ಶಿಕ್ಷಕೇತರ ವೃಂದ ಉಪಸ್ಥಿತರಿದ್ದರು.ಶಾಲಾ ಮುಖ್ಯೋಪಾಧ್ಯಾಯಿನಿ ಜಯಮಾಲಾ ವಿ ಎನ್ ಸ್ವಾಗತಿಸಿ, ಸಹ ಶಿಕ್ಷಕಿ ಪ್ರಮೀಳಾ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಮುರಳಿ ಕೃಷ್ಣ ವಂದಿಸಿದರು.

LEAVE A REPLY

Please enter your comment!
Please enter your name here