ಪುಣ್ಚತ್ತಾರು ಕ್ಷೇತ್ರದಲ್ಲಿ ಯಶಸ್ವಿ ಬ್ರಹ್ಮಕಲಶೋತ್ಸವ- ಅಭಿನಂದನಾ ಸಭೆ, ಲೆಕ್ಕಪತ್ರ ಮಂಡನೆ

0

ಎಲ್ಲರ ಸಹಕಾರದಿಂದ ಬ್ರಹ್ಮಲಕಲಶೋತ್ಸವ ಯಶಸ್ವಿಯಾಗಿ, ಸಂಭ್ರಮದಿಂದ ನಡೆದಿದೆ- ಡಾ.ದೇವಿಪ್ರಸಾದ್ ಕಾನತ್ತೂರ್
ಕಾಣಿಯೂರು: ಜೂ 11ರಿಂದ ಜೂ13ರವರೆಗೆ ನಡೆದ ಪುಣ್ಚತ್ತಾರು ವಿಷ್ಣುಪುರ ಕರಿಮಜಲು ಶ್ರೀ ವಿಷ್ಣುಮೂರ್ತಿ ದೈವಸ್ಥಾನ, ಶ್ರೀ ಕಾಳಿಕಾಂಬ ದೇವಿ ದೇವಸ್ಥಾನದಲ್ಲಿ ಶ್ರೀ ವಿಷ್ಣುಮೂರ್ತಿ ದೈವ, ಶ್ರೀ ಕಾಳಿಕಾಂಬ ದೇವಿ ಮತ್ತು ಪರಿವಾರ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದವರಿಗೆ ಅಭಿನಂದನಾ ಸಭೆ ಮತ್ತು ಬ್ರಹ್ಮಕಲಶೋತ್ಸವದ ಲೆಕ್ಕಪತ್ರ ಮಂಡನಾ ಸಭೆ ನಡೆಯಿತು.
ಕ್ಷೇತ್ರದಲ್ಲಿ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಎಲ್ಲರ ಸಹಕಾರದಿಂದ ಯಶಸ್ವಿಯಾಗಿ, ಸಂಭ್ರಮದಿಂದ ನಡೆದಿದೆ. ಸಭಾಭವನ ನಿರ್ಮಾಣ, ಆವರಣ ಗೋಡೆ, ಚಾವಡಿಯೊಳಗೆ ಇಂಟರ್‌ಲಾಕ್ ಅಳವಡಿಕೆ ಮುಂತಾದ ಅಭಿವೃದ್ಧಿ ಕಾರ್ಯಗಳು ಕ್ಷೇತ್ರದಲ್ಲಿ ಆಗಬೇಕಾಗಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಹೇಳಿದರು.

ಆಡಳಿತ ಮಂಡಳಿ ಪದಾಧಿಕಾರಿಗಳ ಆಯ್ಕೆ
ಪುಣ್ಚತ್ತಾರು ವಿಷ್ಣುಪುರ ಕರಿಮಜಲು ಶ್ರೀ ವಿಷ್ಣುಮೂರ್ತಿ ದೈವಸ್ಥಾನ, ಶ್ರೀ ಕಾಳಿಕಾಂಬ ದೇವಿ ದೇವಸ್ಥಾನದಲ್ಲಿ ನೂತನ ಆಡಳತ ಮಂಡಳಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಡಾ.ದೇವಿಪ್ರಸಾದ್ ಕಾನತ್ತೂರ್, ಪ್ರಧಾನ ಕಾರ್ಯದರ್ಶಿಯಾಗಿ ಮೋನಪ್ಪ ಬಂಡಾಜೆ, ಉಪಾಧ್ಯಕ್ಷರಾಗಿ ವೆಂಕಟ್ರಮಣ ಆಚಾರ್ಯ ಕರಿಮಜಲು, ಶೇಷಪ್ಪ ಗೌಡ ಬೆದ್ರಂಗಳ, ಜತೆ ಕಾರ್ಯದರ್ಶಿಯಾಗಿ ಮಿಥುನ್ ಪೈಕ, ಸದಸ್ಯರಾಗಿ ಜನಾರ್ದನ ಆಚಾರ್ಯ ಕರಿಮಜಲು, ಕೃಷ್ಣ ಆಚಾರ್ಯ ಕರಿಮಜಲು, ಸಂಜೀವ ರೈ ಪೈಕ, ಕುಮಾರ ಆಚಾರ್ಯ ದೋಳ್ಪಾಡಿಯವರನ್ನು ಆಯ್ಕೆಮಾಡಲಾಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಆಡಳಿತ ಮಂಡಳಿ ರಚಿಸಿಕೊಂಡು, ಮುಂದಿನ ದಿನಗಳಲ್ಲಿ ನಡೆಯಲಿರುವ ಎಲ್ಲಾ ಕಾರ್ಯಕ್ರಮಗಳು ಆಡಳಿತ ಮಂಡಳಿ ಮುಖಾಂತರ ನಡೆಯಲಿದೆ. ಶುಚಿತ್ವ ಇದ್ದಲ್ಲಿ ಸಾನಿಧ್ಯ ವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಮುಖ್ಯವಾಗಿ ಕ್ಷೇತ್ರದ ಸುತ್ತ ಮುತ್ತ ಶುಚಿತ್ವದ ಬಗ್ಗೆ ಗಮನಕೊಡಬೇಕು ಎಂದರು.ಈ ಸಂದರ್ಭದಲ್ಲಿ ಕ್ಷೇತ್ರದ ಮೊಕ್ತೇಸರರಾದ ವೆಂಕಟ್ರಮಣ ಆಚಾರ್ಯ ಕರಿಮಜಲು, ಜನಾರ್ದನ ಆಚಾರ್ಯ ಕರಿಮಜಲು, ಕೃಷ್ಣ ಆಚಾರ್ಯ ಕರಿಮಜಲು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶೇಷಪ್ಪ ಗೌಡ ಬೆದ್ರಂಗಳ, ಗೌರವಸಲಹೆಗಾರರಾದ ಸಂಜೀವ ರೈ ಪೈಕ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೋನಪ್ಪ ಬಂಡಾಜೆ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ರೈ ಕಾಸ್ಪಾಡಿಗುತ್ತು, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾದ ಪ್ರದೀಪ್ ಬೊಬ್ಬೆಕೇರಿ, ವಿಶ್ವನಾಥ ರೈ ಮಾಳ, ಜತೆ ಕಾರ್ಯದರ್ಶಿ ಮೋಹನ ಕರಿಮಜಲು, ಕೋಶಾಧಿಕಾರಿ ಭವಿಷ್ ಕರಿಮಜಲು, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರಾದ ಪ್ರಶಾಂತ್ ಮುರುಳ್ಯ, ಕುಮಾರ್ ಆಚಾರ್ಯ ದೋಳ್ಪಾಡಿ, ಕೋಶಾಧಿಕಾರಿ ರಾಜೇಶ್ ಕರಿಮಜಲು ಹಾಗೂ ರಾಧಾಕೃಷ್ಣ ಪೈಕ, ದಿನೇಶ್ ಪೈಕ, ಕುಸುಮಾಧರ ಕೇಪುಳಗುಡ್ಡೆ, ಹರೀಶ್ ಪೈಕ, ಸಂತೋಷ್ ಕುಮಾರ್ ರೈ, ಶ್ರೀಧರ ಬೈಲಂಗಡಿ, ಜಿನ್ನಪ್ಪ ಗೌಡ ಅಂಕಜಾಲು, ರವೀಂದ್ರ ಪೂಜಾರಿ ಬೇಂಗಡ್ಕ, ಪರಮೇಶ್ವರ್, ಚೆನ್ನಪ್ಪ, ದಯಾನಂದ ಬೀರ್ನೇಲು, ಕುಶಾಲಪ್ಪ ಪೈಕ, ಯುವರಾಜ ಕಾರ್ಯ, ಮಾಯಿಲಪ್ಪ ಬೆದ್ರಂಗಳ, ಹರೀಶ್ ಬೀರ್ನೇಲು, ಅಮರನಾಥ ಮಾಳ, ಪುಟ್ಟಣ್ಣ, ಗಿರಿಯಪ್ಪ ಗೌಡ, ಪ್ರವೀಣ್ ಕುಮಾರ್, ಚರಣ್, ಪ್ರಮೋದ್, ರಾಕೇಶ್, ಮೋಹನ್, ಸುಗಂಧ ಕುಮಾರ್, ರಂಜಿತ್, ಚಂದ್ರಶೇಖರ, ನಿತೇಶ್, ರಾಕೇಶ್, ಮಹೇಶ್ ಪೈಕ, ಮಿಥುನ್ ಪೈಕ ಮತ್ತಿತರರು ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರ್, ದಿನೇಶ್ ಮಾಳ ಅನಿಸಿಕೆ ವ್ಯಕ್ತಡಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶೇಷಪ್ಪ ಗೌಡ ಬೆದ್ರಂಗಳ ಸ್ವಾಗತಿಸಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ರೈ ಕಾಸ್ಪಾಡಿಗುತ್ತು ವಂದಿಸಿದರು

LEAVE A REPLY

Please enter your comment!
Please enter your name here