





ಕಾವು: ಇತ್ತೀಚೆಗೆ ಸಿಡಿಲು ಬಡಿದು ಹಾನಿಗೊಳಗಾದ ಮಾಡ್ನೂರು ಗ್ರಾಮದ ಕಾವು ನಿವಾಸಿ ಈಶ್ವರ ಗೌಡರವರ ಮನೆಗೆ ಕಾವು ನನ್ಯ ತುಡರ್ ಯುವಕ ಮಂಡಲದ ತುರ್ತು ಪರಿಹಾರ ನಿಧಿ ಯೋಜನೆಯಿಂದ ರೂ.5000/- ಧನಸಹಾಯ ನೀಡಲಾಯಿತು.


ಇತ್ತೀಚೆಗೆ ಸುರಿದ ಭಾರೀ ಮಳೆಯ ಸಂದರ್ಭದಲ್ಲಿ ಪರನೀರು ಈಶ್ವರ ಗೌಡರವರ ಮನೆಗೆ ಸಿಡಿಲು ಬಡಿದು ಮನೆಗೋಡೆಯ ಅಲ್ಲಲ್ಲಿ ಬಿರುಕು ಬಿಟ್ಟು, ವಿದ್ಯುತ್ ಸಂಪರ್ಕ ಸಂಪೂರ್ಣ ಹಾನಿಯಾಗಿತ್ತು. ಹಾಗಾಗಿ ವಿದ್ಯುತ್ ಸಂಪರ್ಕದ ತುರ್ತು ದುರಸ್ತಿಗಾಗಿ ತುಡರ್ ಯುವಕ ಮಂಡಲದಿಂದ ಧನಸಹಾಯ ನೀಡಲಾಯಿತು.





ಈ ಸಂದರ್ಭದಲ್ಲಿ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಬ್ರಾಯ ಬಲ್ಯಾಯ, ಅಧ್ಯಕ್ಷ ಜಗದೀಶ ನಾಯ್ಕ ಆಚಾರಿಮೂಲೆ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಆಚಾರ್ಯ ನನ್ಯ, ಉಪಾಧ್ಯಕ್ಷ ಶ್ರೀಕುಮಾರ್ ಬಲ್ಯಾಯ, ಸಂಘಟನಾ ಕಾರ್ಯದರ್ಶಿ ರಾಮಣ್ಣ ನಾಯ್ಕ ಆಚಾರಿಮೂಲೆ, ಭಜನಾ ಸಂಘದ ಅಧ್ಯಕ್ಷ ಸಂಕಪ್ಪ ಪೂಜಾರಿ ಚಾಕೋಟೆ, ಯುವಕ ಮಂಡಲದ ಮಾಜಿ ಅಧ್ಯಕ್ಷ ಸುನೀಲ್ ನಿಧಿಮುಂಡ, ಸದಸ್ಯರಾದ ಭವಿತ್ ರೈ, ನಿರಂಜನ ರಾವ್, ಲಿಂಗಪ್ಪ ನಾಯ್ಕ ನನ್ಯ, ಬಾಲಕೃಷ್ಣ ಪಾಟಾಳಿ ನನ್ಯ, ಹರ್ಷಿತ್ ಎ.ಆರ್ ರವರು ಉಪಸ್ಥಿತರಿದ್ದರು.






