ಪುತ್ತೂರು: ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂ.21 ರಂದು ಶಾಲಾ ಸಂಸತ್ತು ಚುನಾವಣೆಯ ಮೂಲಕ ವಿದ್ಯಾರ್ಥಿ ನಾಯಕರ ಆಯ್ಕೆ ಪ್ರಕ್ರಿಯೆ ನಡೆಯಿತು.
ದೀಪ ಪ್ರಜ್ವಲನೆಯ ಮೂಲಕ ನೂತನ ಮಂತ್ರಿಮಂಡಲದ ಉದ್ಘಾಟನೆ ನಡೆಯಿತು. ಮಾದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಲಾರೆನ್ಸ್ ಮಸ್ಕರೇನ್ಹಸ್ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಾಮಾಣಿಕತೆ, ಸತ್ಯ ಸಂದತೆ, ಶಿಸ್ತು, ಸ್ವಚ್ಚತೆ ಮುಂತಾದ ಉತ್ತಮ ನಾಯಕತ್ವ ಗುಣಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿ ನಾಯಕರಿಗೆ ಜವಾಬ್ದಾರಿಯ ನಾಮಫಲಕವನ್ನು ನೀಡಿ ಆಶೀರ್ವದಿಸಿ ಅಭಿನಂದಿಸಿದರು. ಶಾಲಾ ನಾಯಕನಾಗಿ ತಸ್ವಿನ್, ಉಪನಾಯಕನಾಗಿ ಫಾರಿಶ್ ಹಾಗೂ ಸಹಾಯಕ ನಾಯಕರಾಗಿ ಪ್ರತ್ಯಕ್ಷ, ಅಮಿನತ್ ಸನಾ, ಕ್ರಿಶಾ ಡಾಯಸ್, ಸಂಶಿಯಾ ಆಯ್ಕೆಗೊಂಡರು.
ತಸ್ವಿನ್,ಮತ್ತು ಫಾರಿಶ್ ಸಾಂದರ್ಭಿಕವಾಗಿ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕ ಹೆರಿ ಡಿ’ಸೋಜ ಚುನಾವಣೆಯಲ್ಲಿ ಆಯ್ಕೆಗೊಂಡ ವಿದ್ಯಾರ್ಥಿ ನಾಯಕರಿಗೆ ಶುಭಹಾರೈಸಿದರು. ವಿದ್ಯಾರ್ಥಿಗಳಾದ ಶಿಶಿರ್ ಮತ್ತು ಸ್ವಾಲಿಯಾ ಕಾರ್ಯಕ್ರಮ ನಿರೂಪಿಸಿದರು.