ಎಸ್‌ವೈಎಸ್ ಇಸಾಬಾ ಇಂಟ್ರೋ ಮೀಟ್

0

ಸಾಂತ್ವನ ಸೇವೆ ಮಾಡುವುದು ದೇಶಕ್ಕಾಗಿ ಹುತಾತ್ಮರಾಗುವುದಕ್ಕೆ ಸಮಾನ-ಅಬ್ದರ‍್ರಝಾಕ್ ಸಖಾಫಿ

ಪುತ್ತೂರು: ಬಡವರ ಸೇವೆ ಹಾಗೂ ಸಾಂತ್ವನ ಚಟುವಟಿಕೆಗಳನ್ನು ಉಸಿರನ್ನಾಗಿ ಮಾಡಿ ಕಾರ್ಯಚರಿಸಬೇಕೆಂದು ಕೇರಳ ರಾಜ್ಯ ಎಸ್‌ವೈಎಸ್ ನಾಯಕ ಅಬ್ದರ‍್ರಝಾಕ್ ಸಖಾಫಿ ಕೋಟಕುನ್ನು ಕರೆ ನೀಡಿದರು.

ಎಸ್‌ವೈಎಸ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಆಯೋಜಿಸಿದ ಇಸಾಬಾ ಇಂಟ್ರೋ ಮೀಟ್‌ನಲ್ಲಿ ಮುಖ್ಯ ಪ್ರಭಾಷಣಗಾರನಾಗಿ ಅವರು ಮಾತನಾಡಿದರು. ಸಾಂತ್ವನ ಸೇವೆ ದೇಶಕ್ಕಾಗಿ ಹುತಾತ್ಮವಾಗುವುದಕ್ಕೆ ಸಮಾನವಾಗಿದೆ. ಇಸಾಬ ಕಾರ್ಯಕರ್ತರು ಸನ್ನಧ ಪಡೆಯಾಗಿ ಸದಾ ಸೇವೆಗಾಗಿ ರೆಡಿಯಾಗಬೇಕೆಂದು ಹೇಳಿದರು. ಅಸ್ಸಯ್ಯಿದ್ ಸಾದಾತ್ ತಂಙಳ್ ದುವಾ ಮಾಡಿದರು. ಜಿಲ್ಲಾಧ್ಯಕ್ಷರಾದ ಅಬ್ದುಲ್ ಅಝೀಝ್ ಮಿಸ್ಬಾಹಿ ಅಧ್ಯಕ್ಷತೆ ವಹಿಸಿದ್ದರು.

ಎಸ್‌ವೈಎಸ್ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಎಂಬಿಎಂ ಸಾದಿಕ್ ಮಾಸ್ಟರ್ ಸಭೆ ಉದ್ಘಾಟಿಸಿದರು. ಕೆಎಂಜೆ ಪುತ್ತೂರು ಝೋನ್ ಅಧ್ಯಕ್ಷರಾದ ಕಾಸಿಂ ಹಾಜಿ ಮಿತ್ತೂರು, ಯೂಸುಫ್ ಹಾಜಿ ಕೈಕಾರ, ಯೂಸುಫ್ ಗೌಸಿಯ ಸಾಜ, ಆದಂ ಹಾಜಿ ಪಡೀಲ್, ಇಸ್ಮಾಯಿಲ್ ಹಾಜಿ ಕೊಂಬಾಳಿ, ಇಸ್ಮಾಯಿಲ್ ಹಾಜಿ ಬನ್ನೂರು, ಅಬ್ದುಲ್ಲ ಮುಸ್ಲಿಯಾರ್ ಬನ್ನೂರು, ಇಕ್ಬಾಲ್ ಬಪ್ಪಳಿಗೆ, ಅಡ್ವಕೇಟ್ ಶಾಕಿರ್ ಹಾಜಿ ಮಿತ್ತೂರು, ಅಬೂಬಕ್ಕರ್ ಕಬಕ, ಎಸ್‌ವೈಎಸ್ ಈಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವಾಲಿಹ್ ಮುರ, ಉಪಾಧ್ಯಕ್ಷ ಹಂಝ ಮದನಿ ಮಡಂತ್ಯಾರ್, ಕೋಶಾಧಿಕಾರಿ ಸಂಶುದ್ದೀನ್ ಬೆಳ್ಳಾರೆ, ಸಂಘಟನಾ ಕಾರ್ಯದರ್ಶಿ ಹಮೀದ್ ಕೊಯ್ಲ, ದಅವಾ ಕಾರ್ಯದರ್ಶಿ ಸಿರಾಜುದ್ದೀನ್ ಸಖಾಫಿ ಕನ್ಯಾನ, ಕಲ್ಚರ್ ಕಾರ್ಯದರ್ಶಿ ಶಾಫಿ ಸಖಾಫಿ ಕೊಕ್ಕಡ, ಸಾಂತ್ವನ ಕಾರ್ಯದರ್ಶಿ ಮುಸ್ತಫಾ ಕೋಡಪದವು, ಇಸಾಬ ಕಾರ್ಯದರ್ಶಿ ಉಸ್ಮಾನ್ ಬೇಂಗಿಲ, ಅಶ್ರಫ್ ಸಖಾಫಿ ಮಾಡಾವು, ಕಾಸಿಂ ಮುಸ್ಲಿಯಾರ್ ಉಜಿರೆ, ಅಬೂಶಝ, ಸಿದ್ದೀಕ್ ಕಟ್ಟೆಕ್ಕಾರ್, ಸಿದ್ದೀಕ್ ಮಿಸ್ಬಾಹಿ, ಸಲೀಮ್ ಕನ್ಯಾಡಿ ಉಪಸ್ಥಿತರಿದ್ದರು.

ಇಸಾಬಾ ಇಂಟ್ರೋ ಮೀಟ್‌ಗೆ ಈಸ್ಟ್ ಜಿಲ್ಲಾ ವ್ಯಾಪ್ತಿಯ ಪ್ರತಿ ಯೂನಿಟ್ ಗಳಿಂದ ತಲಾ ಒಬ್ಬರು ಆಗಮಿಸಿದ್ದರು. ಅಶ್ರಫ್ ಸಖಾಫಿ ಮಾಡಾವು ಸ್ವಾಗತಿಸಿದರು. ಜಿಲ್ಲಾ ಸಾಂತ್ವನ ಕಾರ್ಯದರ್ಶಿ ಮುಸ್ತಫಾ ಕೋಡಪದವು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here