ಪರಿಸರ ಸ್ನೇಹಿ ಬದುಕು ನಮ್ಮದಾದಾಗ ನಮ್ಮನ್ನು ನಾವು ಕಂಡುಕೊಳ್ಳಲು ಸಾಧ್ಯವಾಗುತ್ತದೆ -ಡಾ.ರವೀಂದ್ರ ಐತಾಳ
ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಮಹಾತ್ವಾಕಾಂಕ್ಷೆಯ ಯೋಜನೆ ‘ವಿವೇಕ ಸಂಜೀವಿನಿ’ಯ ಅನುಷ್ಠಾನಿಕ ಭಾಗವಾಗಿ ‘ಮೂಲಿಕಾ ವನ’ ನಿರ್ಮಾಣದ ಅಂಗವಾಗಿ ಪೂರ್ವಭಾವಿ ಮಾಹಿತಿ ಪಡೆಯುವ ದೃಷ್ಟಿಯಿಂದ ತೆಂಕಿಲದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಖ್ಯಾತ ಔಷಧೀಯ ಸಸ್ಯಗಳ ಸಂರಕ್ಷಕ ಹಾಗೂ ಉರಗ ತಜ್ಞಡಾ. ರವೀಂದ್ರ ಐತಾಳರ ಮೂಲಿಕಾ ವನಕ್ಕೆ ಭೇಟಿ ನೀಡಿದರು.
ಮೂಲಿಕಾ ವನದ ಪರಿಚಯ ಮಾಡಿಸಿ ಹಲವು ಜಾತಿಯ ಔಷಧೀಯ ಸಸ್ಯಗಳು, ಹಣ್ಣುಗಳು, ತೊಗಟೆ, ಚಿಗುರುಗಳ, ಬೇರುಗಳ ಪರಿಚಯ ಮಾಡಿಸಿ ‘ಸಸ್ಯ ಸಂಜೀವಿನಿಯ ಪ್ರಭೇದಗಳು, ಪ್ರಾಮುಖ್ಯತೆ, ಪ್ರಯೋಜನ, ಪ್ರಮಾಣ ಪ್ರಸರಣವನ್ನು ತಿಳಿಸಿಕೊಟ್ಟರು.ನೂರಕ್ಕೂ ಅಧಿಕ ಔಷಧೀಯ ಗುಣವುಳ್ಳ ಸಸ್ಯಗಳ ವಿವಿಧ ಭಾಗಗಳ ಔಷಧಿಯುಕ್ತ ಗುಣಗಳ ಬಗ್ಗೆ, ಅವು ನಿವಾರಿಸುವ ಕಾಯಿಲೆಗಳ ಕುರಿತು ವಿವರವಾಗಿ ಮಾಹಿತಿ ನೀಡಿ ತಿಳಿಸಿದರು’.ಶಾಲಾ ಶಿಕ್ಷಕಿ ವೀಣಾ ಸರಸ್ವತಿ ಮತ್ತು ಪೂರ್ಣಿಮಾ ಹಾಗು ಇನ್ನೀತರ ಪ್ರಮುಖರು ಉಪಸ್ಥಿತರಿದ್ದರು.