ಗೋಹತ್ಯಾ ನಿಷೇಧ ಕಾನೂನು ಕಟ್ಟುನಿಟ್ಟಾಗಿ ಪಾಲಿಸಿ- ವಿ.ಹಿಂ.ಪ, ಬಜರಂಗದಳ ಕಡಬ ಪ್ರ ಖಂಡದಿಂದ ಕಡಬ ಠಾಣೆಗೆ ಮನವಿ

0

ಕಡಬ: ಗೋಹತ್ಯಾ ನಿಷೇಧ ಕಾನೂನನ್ನು ಕಡಬ ಠಾಣಾ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ವಿಶ್ವ ಹಿಂದು ಪರಿಷದ್ ಕಡಬ ಪ್ರಖಂಡದಿಂದ ಕಡಬ ಠಾಣೆಗೆ ಮನವಿ ನೀಡಲಾಯಿತು.

ಜೂ. 29, 30, ಜುಲೈ 1ರಂದು ಗೋಹತ್ಯೆ ಮಾಡುವ ಸಾಧ್ಯತೆಯಿದ್ದು, ಈ ದಿನಾಂಕದಂದು ಮತ್ತು ಇತರೇ ದಿನಗಳಲ್ಲಿಯೂ ಗೋವಧೆ ಮಾಡದಂತೆ ಕ್ರಮ ವಹಿಸಬೇಕು ಮತ್ತು ರೈತರ ಹಟ್ಟಿಗಳಿಂದ, ಗುಡ್ಡದಲ್ಲಿ ಮೇಯಲು ಬಿಟ್ಟ ದನಗಳನ್ನು , ಬೀದಿ ಬದಿಯಲ್ಲಿ ಮೇಯುವ ದನಗಳ ಕಳ್ಳತನವಾಗದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಅಲ್ಲದೆ ಮನೆಗಳಲ್ಲಿ ಗೋವಂಶವನ್ನು ಕಟ್ಟಿ ಹಾಕಿರುವುದು ಕಂಡು ಬಂದಲ್ಲಿ ತಕ್ಷಣ ಪಶುಸಂಗೋಪನಾ ಇಲಾಖೆಯವರು ಕಿವಿಯೋಲೆ ಹಾಕಿ, ಫೋಟೋ ತೆಗೆದಿರಿಸಿ ಮಾಲಕರ ಬಳಿ ಮುಚ್ಚಳಿಕೆ ಬರೆಸಿಕೊಳ್ಳಬೇಕು. ಜು.3ರಂದು ಗೋವು ಬದುಕಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಆ ಮೊದಲೇ ಗೋವು ತೀರಿಕೊಂಡರೆ ಹೂಳದೆ ಪಶುವೈದ್ಯಾಧಿಕಾರಿ, ಪೊಲೀಸರಿಗೆ ಮಾಹಿತಿ ನೀಡಿ ಧಪನ ಮಾಡಿದ್ದನ್ನು ಖಾತ್ರಿಪಡಿಸಬೇಕು. ಜುಲೈ 3 ರಂದು ಪರಿಶೀಲಿಸುವಾಗ ಆ ಗೋವಂಶಗಳು ಕಂಡುಬರದಿದ್ದಲ್ಲಿ ಅವರ ಮೇಲೆ ಗೋಹತ್ಯಾ ನಿಷೇಧ ಕಾಯಿದೆಯ ಪ್ರಕಾರ ಪ್ರಕರಣ ದಾಖಲಿಸಬೇಕು. ಗೋಹತ್ಯೆ ನಿಷೇಧ ಬಗ್ಗೆ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಬೇಕು. ಕಾನೂನಾತ್ಮಕವಾಗಿ ತಾವು ಗೋವಂಶಕ್ಕೆ ಕೊಡುವ ರಕ್ಷಣೆಗೆ ನಾವು ಸರ್ವ ರೀತಿಯ ಸಹಕಾರಕ್ಕೆ ಸಿದ್ದರಿದ್ದೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಕಡಬ ಠಾಣಾಧಿಕಾರಿ ಮುಖಾಂತರ ಮನವಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ಕಳುಹಿಸಲಾಗಿದೆ.

ಎಎಸ್‌ಐ ಮನವಿ ಸ್ವೀಕರಿಸಿದರು. ವಿಹಿಂಪ ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ, ಗೋ ರಕ್ಷಕ್ ಪ್ರಮುಖ್ ಜಯಂತ ಕಲ್ಲುಗುಡ್ಡೆ, ಬಜರಂಗದಳ ಪ್ರಮುಖ್ ಸಂತೋಷ್ ಕುಮಾರ್,ರಘುರಾಮ ನಾಯ್ಕ್, ಸುವರ್ಣ, ಸಂಪತ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here