ಪುತ್ತೂರು: ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ 2022-23ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಶೇ.50 ರ ಸಹಾಯಧನದಲ್ಲಿ ಹೈನುಗಾರರಿಗೆ ತಲಾ ಎರಡು ರಬ್ಬರ್ ನೆಲಹಾಸು(ಕೌ ಮೇಟ್) ವಿತರಿಸುವ ಕಾರ್ಯಕ್ರಮವಿದ್ದು, ಆಸಕ್ತ ಹೈನುಗಾರರು ಜು.5 ರ ಒಳಗಾಗಿ ಅರ್ಜಿ ಸಲ್ಲಿಸುವಂತೆ ಪುತ್ತೂರು ಪಶುಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಘಟಕ ವೆಚ್ಚ ರೂ. ̧5598 ಆಗಿದ್ದು ಎರಡು ಜಾನುವಾರುಗಳನ್ನು ಹೊಂದಿರುವ ಆಸಕ್ತ ಹೈನುಗಾರರು ಹತ್ತಿರದ ಪಶುಪಾಲನಾ ಇಲಾಖೆಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು. ಪುತ್ತೂರು ತಾಲೂಕಿನ 20 ಹೈನುಗಾರರಿಗೆ ತಲಾ ಎರಡು ರಬ್ಬರ್ ನೆಲಹಾಸು ವಿತರಿಸುವ ಗುರಿಯನ್ನು ನಿಗದಿಪಡಿಸಲಾಗಿದೆ. ಆಸಕ್ತರು ಮುಖ್ಯ ಪಶುವೈದ್ಯಾಧಿಕಾರಿ ಪಶು ಆಸ್ಪತ್ರೆ ಪುತ್ತೂರು ಇಲ್ಲಿಗೆ ಅರ್ಜಿ ಸಲ್ಲಿಸಬೇಕೆಂದು ತಿಳಿಸಲಾಗಿದೆ.